ಟಿ.ಎ.ನಾರಾಯಣಗೌಡರ ಬಂಧನ ವಿರೋಧಿಸಿ ಪ್ರತಿಭಟನೆ

0
11

ಕಲಬುರಗಿ ; ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ಬಂಧನವನ್ನು ವಿರೋಧಿಸಿ ಕರವೇ ಜಿಲ್ಲಾಧ್ಯಕ್ಷ ಪುನಿತರಾಜ ಸಿ. ಕವಡೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ಸಿ.ಎಂ.ಅವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷಸರಾದ ಟಿ.ಎ. ನಾರಾಯಣಗೌಡರು ಸುಮಾರು 25 ವರ್ಷಗಳಿಂದ ಕರ್ನಾಟಕ ರಾಜ್ಯದಲ್ಲಿ ನೆಲ, ಜಲ, ಭಾಷೆಗಾಗಿ ಮತ್ತು ಕನ್ನಡ ನಾಡಿನ ಮಕ್ಕಳ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ವಿರುದ್ಧ ಹಾಗೂ ಸಾವಿರಾರು ಹೋರಾಟ ಮಾಡುವ ಮುಖಾಂತರ ರಾಜ್ಯದ ಪ್ರತಿ ಹಳ್ಳಿಯಲ್ಲಿ ನೂರಾರು ಕಾರ್ಯಕರ್ತರನ್ನು ಕನ್ನಡ ನಾಡಿನ ಉಳಿವಿಗಾಗಿ ಕನ್ನಡ ದೀಕ್ಷೆ ನೀಡಿದ್ದಾರೆ. ಇಂತಹ ಪ್ರಶ್ನಾತೀತ ಕನ್ನಡ ತಾಯಿಯ ವರಪುತ್ರನನ್ನು ರಾಜ್ಯ ಸರ್ಕಾರ ಬಂಧನದಲ್ಲಿಟ್ಟಿದೆ. ಈ ನಿಮ್ಮ ಕ್ರಮವನ್ನು ಕಲಬುರಗಿ ಜಿಲ್ಲೆಯ ಸಮಸ್ತ ಕನ್ನಡಾಭಿಮಾನಿಗಳು ಮತ್ತು ಕರವೇ ಕಾರ್ಯಕರ್ತರು ಎಂದೂ ಕ್ಷಮಿಸುವುದಿಲ್ಲ.

Contact Your\'s Advertisement; 9902492681

ಆದಕಾರಣ ಕೂಡಲೇ ನಮ್ಮ ನಾಯಕರನ್ನು ಬಿಡುಗಡೆ ಗೊಳಿಸಬೇಕು. ಕನ್ನಡ ತಾಯಿಯ -ವರಪುತ್ರ ಮತ್ತು ಕನ್ನಡ ನಾಡಿನ ಭಾಷೆಗಾಗಿ ಹೋರಾಟ ಮಾಡಿರುವ ಇವುರಗಳ ಮೇಲೆ ತಾವುಗಳು ಗೌರವ ನೀಡಬೇಕು. ತಕ್ಷಣವೇ ಬೇಷರತ್ತಾಗಿ ಬಿಡುಗಡೆ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರಕ್ಕೆ ತಕ್ಕ ಪಾಠವನ್ನು ತಿಳಿಸಬೇಕಾಗುತ್ತದೆ. ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ದೇವಿಂದ್ರ ಮಯೂರ, ಜಿಲ್ಲಾ ಸಂಘನ ಕಾರ್ಯದರ್ಶಿ ನೀಲಕಂಠಪ್ಪ ಗೌಡ.ಪಾಟೀಲ್, ಜಿಲ್ಲಾ ಉಪಾಧ್ಯಕ್ಷರಾದ ಸಂಗಮೇಶ ಬೋರಟಿ, ಧರ್ಮಸಿಂಗ್ ತಿವಾರಿ, ಜಿಲ್ಲಾ ಸಾಮಾಜಿಕ ಜಾಲತಾಣವಿಠ್ಠಲ ಪೂಜಾರಿ, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ನಿರ್ಮಲ ತಳವಾರ, ತಾಲೂಕು ಅಧ್ಯಕ್ಷ ಕಲ್ಯಾಣಿ ತಳವಾರ್, ಅಫಜಲಪೂರ ತಾಲೂಕು ಅಧ್ಯಕ್ಷ ಗುರುದೇವ ಪೂಜಾರಿ, ಶಹಾಬಾದ್ ತಾಲೂಕು ಅಧ್ಯಕ್ಷ ಯಲ್ಲಾಲಿಂಗ ಹೈಯಾಳಕರ, ಚಿಂಚೋಳಿ ತಾಲೂಕು ಅಧ್ಯಕ್ಷ ಝರನಪ್ಪ ಬಿ ತಳವಾರ್ ಹಾಗೂ ಜಾರಿನ ಬೇಗಮ್, ಶಾರದಾ ಬೋರಟಿ ಸೇರಿದಂತೆ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here