ವಿಕಲಚೇತನ ಫಲಾನುಭವಿಗಳ ರಿಯಾಯಿತಿ ಬಸ್‍ಪಾಸ್‍ನ್ನು ಫೆಬ್ರವರಿ 29 ರವರೆಗೆ ಬಳಸಿಕೊಳ್ಳಲು ಅವಕಾಶ

0
22

ಕಲಬುರಗಿ; ವಿಕಲಚೇತನ ಫಲಾನುಭವಿಗಳಿಗೆ ವಿಕಲಚೇತನರ ರಿಯಾಯಿತಿ ಬಸ್‍ಪಾಸ್‍ನ್ನು ನವೀಕರಿಸಿಕೊಳ್ಳಲು ಸಾಕಷ್ಟು ಕಾಲಾವಕಾಶ ನೀಡುವ ಉದ್ದೇಶದಿಂದ 2023ನೇ ಸಾಲಿನಲ್ಲಿ ವಿತರಿಸಲಾಗಿರುವ ಪಾಸ್‍ಗಳನ್ನು (2023ರ ಡಿಸೆಂಬರ್ 31 ರವರೆಗೆ ಮಾನ್ಯತೆ ಇರುವ) ವಿಕಲಚೇತನರ ಪಾಸ್‍ಗಳನ್ನು 2024ರ ಫೆಬ್ರವರಿ 29 ರವರೆಗೆ ಉಪಯೋಗಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಭಾಗ-2ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

ಅರ್ಹ ಫಲಾನುಭವಿಗಳು ಸೇವಾ ಸಿಂಧುವಿನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ, 660 ರೂ.ಗಳನ್ನು ನಗದು ರೂಪದಲ್ಲಿ ಪಾವತಿಸಿ 2024ರ ಫೆಬ್ರವರಿ 29 ರೊಳಗಾಗಿ ಬಸ್‍ಪಾಸ್‍ನ್ನು ನವೀಕರಿಸಿಕೊಳ್ಳಬೇಕು.

Contact Your\'s Advertisement; 9902492681

ಅದೇ ರೀತಿ 2024 ನೇ ವರ್ಷದ ಹೊಸ ಬಸ್‍ಪಾಸ್‍ನ್ನು ದಿನಾಂಕ:01.01.2024 ರಿಂದ 31.12.2024 ರವರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ವಿಭಾಗೀಯ ಕಛೇರಿ, ಕಲಬುರಗಿ ವಿಭಾಗ-2 ರಲ್ಲಿ ವಿತರಿಸಲಾಗುತ್ತಿದೆ. ಹಳೆಯ ಪಾಸ್‍ಗಳನ್ನು ಕಲಬುರಗಿ ವಿಭಾಗ-2 ರ ವ್ಯಾಪ್ತಿಯಲ್ಲಿ ಬರುವ ತಾಲೂಕುಗಳಾದ ಕಲಬುರಗಿ, ಆಳಂದ, ಜೇವರ್ಗಿ ಮತ್ತು ಅಫಜಲಪೂರ ಬಸ್ ನಿಲ್ದಾಣಗಳÀಲ್ಲಿ ನವೀಕರಿಸಲಾಗುತ್ತಿದೆ. 2024ರ ಫೆಬ್ರವರಿ 29ರ ನಂತರ ಅಂಗವಿಕಲ ರಿಯಾಯಿತಿ ದರದ ಬಸ್‍ಪಾಸ್‍ಗಳನ್ನು ನವೀಕರಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here