ಗೃಹ ಲಕ್ಷ್ಮೀ E-KYC ಎಲ್ಲರಿಗೂ ಕಡ್ಡಾಯವಲ್ಲ; ಇಲ್ಲಿದೆ ಸ್ಪಷ್ಟ ಮಾಹಿತಿ

0
40

-ಸಾಜಿದ್ ಅಲಿ ಕಲಬುರಗಿ

  • ಗೃಹ ಲಕ್ಷ್ಮೀ E-KYC ಹೆಸರಲ್ಲಿ ಕಲಬುರಗಿಯಲ್ಲಿ ಸುಲಿಗೆ

ಕಲಬುರಗಿ: ಗೃಹ ಲಕ್ಷ್ಮೀ ಯೋಜನೆಯ ಲಾಭಕ್ಕಾಗಿ ಎಲ್ಲರೂ E-KYC ಕಡ್ಡಾಯವಾಗಿ ಮಾಡಿಸಬೇಕೆಂದು ಒಂದತಿ ಹರಡಿದೆ. E-KYC ಈಗಾಗಲೇ ಹಣಪಡೆಯುತ್ತಿರುವವರಿಗೆ ಮಾಡಿಸುವ ಅವಶ್ಯಕತೆ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಓ ಅಧಿಕಾರಿ ಭೀಮರಾಯ್ಯ ಅವರು ಸ್ಪಷ್ಟಪಡೆಸಿದ್ದಾರೆ.

Contact Your\'s Advertisement; 9902492681

ಗೃಹ ಲಕ್ಮಿಯೋಜನಯ ಲಾಭಕ್ಕಾಗಿ ಎಲ್ಲರು E-KYC ಮಾಡಬೇಕೆಂಬುವುದು ಸುಳ್ಳು ಒಂದತಿ. ಇದಕ್ಕೆ ಕಿವಿಗುಡಬೇಡಿ. ಅರ್ಜಿ ಸಲ್ಲಿಸಿದ ಕೆಲವರಿಗೆ ತಾಂತ್ರಿಕ ಕಾರಣಗಳಿಂದ ಹಣ ಬರುತ್ತಿಲ್ಲ. ಈ ತೊಂದರೆ ನಿವಾರಿಸಿ ಎಲ್ಲರಿಗೂ ಇದರ ಲಾಭ ಪಡೆಯಬೇಕೆಂಬ ಉದ್ದೇಶದಿಂದ ರಾಜ್ಯ ಸರಕಾರ E-KYC ಪಡೆಯುತ್ತಿದೆ.

E-KYC ಮಾಡಿದ ಮೇಲೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ DBT ಮೂಲಕ ಮನೆ ಯಜಮನಿಯರ ಬ್ಯಾಂಕ್ ಖಾತೆಗೆ ನೇರವಾಗಿ ಪ್ರತಿ ತಿಂಗಳು 2000ರೂ. ವರ್ಗಾವಣೆ ಮಾಡುತ್ತಾರೆ. ಒಂದು ಎರಡು ಬಾರಿ ಗೃಹ ಲಕ್ಷ್ಮೀ ಹಣ ಜಮಾ ಆಗಿದರೆ ಅಂಥವರು E-KYC ಮಾಡಿಸುವ ಅಗತ್ಯವಿಲ್ಲ ಎಂದು ಭೀಮರಾಯ್ಯ ಅವರು ಇ-ಮೀಡಿಯಾ ಲೈನ್ ಗೆ ಸ್ಪಷ್ಟನೆ ನೀಡಿದರು.

E-KYC ಸಂಪೂರ್ಣ ಉಚಿತವಾಗಿದೆ. ಹತ್ತಿರದ ಕರ್ನಾಟಕ ಓನ್, ಕಲಬುರಗಿ ಓನ್, ಸೇವಾ ಸಿಂಧು ಪೂರ್ಟಲ್ ಹಾಗೂ ಗ್ರಾಮ ಪಂಚಾಯಿತ್ ಗಳಲ್ಲಿ ಮೂಲಕ E-KYC ಮಾಡಿಸಬೇಕು. E-KYC ಸಂಪೂರ್ಣ ಉಚಿತವಾಗಿದೆ. ಯಾರಿಗೂ ಒಂದು ರೂಪಾಯಿ ಕೊಡಬೇಕಾಗಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೇಂದ್ರಗಳಲ್ಲಿ E-KYC ಕೇಂದ್ರಗಳು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here