ಕಲಬುರಗಿ: ಜಿಲ್ಲೆಯ ಕೆಲವು ಲಿಂಬೆ ತೋಟಗಳಲ್ಲಿ 2019-20ರ ಅಧಿಕ ಮಳೆಯ ನಂತರ ಪೈಟಾಪ್ತರ ರೋಗ ಭಾದೆಯಿಂದ ಲಿಂಬೆ ಕಾಂಡದಲ್ಲಿ ಅಂಟು ಸ್ರವಿಸುವಿಕೆ ಹಾಗೂ ಬೇರುಕೊಳೆ ರೋಗ ಕಂಡು ಬಂದಿದೆ. ಗಿಡಗಳ ಟೊಂಗೆಗಳು ಕಾಲಕ್ರಮೇಣ ಸೊರಗಿ ಬೇರಿನಿಂದ ಕಾಂಡದ ಮೂಲಕ ಪೋಷಕಾಂಶಗಳು ಮತ್ತು ನೀರು ಸಾಗಾಟ ಅಂಗಾಂಶಕ್ಕೆ ದಕ್ಕೆಯಾಗುತ್ತಿದೆ.
ಉತ್ತಮ ಲಿಂಬೆ ನೀಡುವ ಗಿಡಗಳು ಕಾಲಕ್ರಮೇಣ ಕಾಯಿಯ ಗಾತ್ರ ಕಡಿಮೆಯಾಗಿ ಇಳುವರಿ ಕುಂಠಿತವಾಗುತ್ತಿದೆ. ಬೇಸಾಯ ಸಮಯದಲ್ಲಿ ಎರೆಹುಳು ಗೊಬ್ಬರ ಅಥವಾ ಬೇವಿನ ಹಿಂಡಿ ಒಂದು ಕೆಜಿ ಹಾಗೂ ಟ್ರೈಕೋಡ್ರಮ್ 20 ಗ್ರಾಂ. ಪ್ರತಿ ಗಿಡಕ್ಕೆ ಹಾಕಬೇಕು. ಬೇಸಿಗೆ ಸಮಯದಲ್ಲಿ ಕಾಂಡದಿಂದ ಅಂಟು ಸ್ರವಿಸುವಿಕೆ ಕಂಡು ಬಂದಲ್ಲಿ ಬೋರ್ಡೊ ಪೇಸ್ಟ್ ಹಾಗೂ ಸುಣ್ಣದ ಲೇಪನ್ ಕಾಂಡ ತಳದಿಂದ ಭಾಗದಿಂದ 2 ಅಡಿ ಎತ್ತರಕ್ಕೆ ಹಚ್ಚಬೇಕು.
ಮಳೆಗಾಲದ ಕೊನೆಯ ಮತ್ತು ಆರಂಭದ ಹಂತದಲ್ಲಿ ಮೇಟಾಲಾಕ್ಸಿನ್ ರಿಡೊಮಿನ್ 3 ಗ್ರಾಂ. ಪ್ರತಿ ಲೀಟ್‍ರ ನೀರಿನಲ್ಲಿ ಬೆರೆಸಿ ಕಾಂಡ ಮತ್ತು ಬೇರು ಭಾಗದಲ್ಲಿ ಸುರಿಯಬೇಕು. ಕೆವಿಕೆ ವಿಜ್ಞಾನಿಗಳಾದ ಡಾ. ಜಹೀರ್ ಅಹೆಮದ್ ರವರು ಕ್ಷೇತ್ರ ಭೇಟಿ ನೀಡಿ ತಾವರಗೇರೆ, ಹಾ¯ಸುಲ್ತಾನಪೂರ ರೈತರಿಗೆ ಮಾಹಿತಿ ನೀಡಿದರು.