ಕಲಬುರಗಿ: ತಾಲೂಕಿನ ಕೆಸರಟಗಿಯಲ್ಲಿರುವ ಶ್ರೀ ಭಾಗ್ಯವಂತಿ ದೇವಿಯ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಶ್ರೀ ಭಾಗ್ಯವಂತಿ ದೇವಿಯ ವರಪುತ್ರಿಯಾದ ಶ್ರೀ ಮಾತಾ ಲತಾದೇವಿಯ ಅವರ ನೇತೃತ್ವದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಚಂಡಿ ಹೋಮ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಸಂಸದ ಡಾ.ಉಮೇಶ ಜಾಧವ್, ಪಿ.ಎನ್.ಪಾಟೀಲ್, ಎಂ.ಎಸ್.ಕಿಣಕೇರಿ, ಶಿವುಕಾಂತ ಚವ್ಹಾಣ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದರು.