ಪಿ.ಎನ್ ಗಾಡ್ಗಿಲ್ ಆ್ಯಂಡ್ ಸನ್ಸ್ ಗ್ರೂಪ್ ವತಿಯಿಂದ ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆ

0
23

ಕಲಬುರಗಿ; ಮಕ್ಕಳಲ್ಲಿ ಚಿತ್ರಕಲೆ ಕೌಶಲ್ಯ ಹೆಚ್ಚಿಸುವ ನಿಟ್ಟಿನಲ್ಲಿ ನಗರದ ಪ್ರಸಿದ್ಧ ಪಿ ಎನ್ ಗಾಡ್ಗಿಲ್ ಆ್ಯಂಡ್ ಸನ್ಸ್ ಗ್ರೂಪ್ ವತಿಯಿಂದ ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ಆಕರ್ಷಕ ಚಿತ್ರಗಳನ್ನು ಬಿಡಿಸುವ ಮೂಲಕ ಗಮನ ಸೆಳೆದರು. ಪಿ ಎನ್ ಗಾಡ್ಗಿಲ್ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯು ಅದ್ದೂರಿಯಾಗಿ ಜರುಗಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ಡೀಪರೇಂಟ್ ಹಾಗೂ ಆಕರ್ಷಕ ಚಿತ್ರ ಬಿಡಿಸಿ ಸೈ ಎನಿಸಿಕೊಂಡರು.

Contact Your\'s Advertisement; 9902492681

ಸ್ಪರ್ಧೆಯಲ್ಲಿ ವಿಜೆತರಾದ ಮಕ್ಕಳಿಗೆ ತೀರ್ಪುಗಾರರಾದ ಶಶಿಕಾಂತ್ ಮಾಶಾಳಕರ್, ಹನುಮಂತ ಮನಶಟ್ಟಿ ಅವರು ಬಹುಮಾನ ವಿತರಿಸಿ ಪ್ರೋತ್ಸಾಹಿಸಿದರು. ಸ್ಪರ್ಧೆಯಲ್ಲಿ ಭಾಗಿಯಾದ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.

ಗಾಡ್ಗಿಲ್ಲಿನ ಸಿಬ್ಬಂದಿ ವರ್ಗದವರು ಮತ್ತು ಶಾಲಾ ಶಿಕ್ಷಕರು ಮಕ್ಕಳ ಪಾಲಕರು ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here