ಬೈಲಕುಂಟಿ: ಪರಿಶಿಷ್ಟ ಜಾತಿ ಕುಟುಂಬಸ್ಥರಿಗೆ ಕಿರಕುಳ ಆರೋಪ-ಕ್ರಮಕ್ಕೆ ಧರಣಿ

0
11

ಸುರಪುರ: ಹುಣಸಗಿ ತಾಲೂಕಿನ ಕೊಡೇಕಲ್ ಹೋಬಳಿಯ ಬೈಲಕುಂಟಿ ಗ್ರಾಮದಲ್ಲಿನ ದಲಿತ ಸಮುದಾಯದ ಪರಿಶಿಷ್ಟ ಜಾತಿಗೆ ಸೇರಿದ ಪರಶುರಾಮ ದೊಡ್ಮನಿ ಎನ್ನುವವರಿಗೆ ಸೇರಿದ ಸರ್ವೇ ನಂಬರ್ 62/3ರ ಜಮೀನಿನಲ್ಲಿ ಬೆಳೆದಿರುವ ಕಬ್ಬು ಕಟಾವು ಮಾಡಲು ಬಿಡದೆ ಅಡ್ಡಿಪಡಿಸುತ್ತಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ಡಿವೈಎಸ್ಪಿಗೆ ಆಗ್ರಹಿಸಿ ನಗರದ ಪೊಲೀಸ್ ಠಾಣೆಯ ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೋ:ಬಿ.ಕೃಷ್ಣಪ್ಪ ಬಣದ ಮುಖಂಡರು ಕುಟುಂಬಸ್ಥರೊಂದಿಗೆ ಧರಣಿ ನಡೆಸಿದರು.

ಸಂಜೆಯವರೆಗೂ ನಡೆದ ಧರಣಿಯಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ನಿಂಗಣ್ಣ ಎಮ್.ಗೋನಾಲ,ಜಿಲ್ಲಾ ಸಂಘಟನಾ ಸಂಚಾಲಕ ನಾಗರಾಜ ಓಕಳಿ,ತಾಲೂಕು ಸಂಚಾಲಕ ರಮೇಶ ಪೂಜಾರಿ,ಸದಾಶಿವ ಬೊಮ್ಮನಹಳ್ಳಿ,ಹಣಮಂತ ಅಮ್ಮಾಪುರ,ನಾಗರಾಜ ಗೋಗಿಕೇರ,ಶರಣಪ್ಪ ಗುಳಬಾಳ,ಸಾಯಬಣ್ಣ ಕೆಂಭಾವಿ, ಸೇರಿದಂತೆ ಪರಶುರಾಮ ದೊಡ್ಮನಿ ಕುಟುಂಬಸ್ಥರು ಧರಣಿಯಲ್ಲಿ ಭಾಗವಹಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here