ನಕಲಿ ಮೆಣಸಿನ ಕಾಯಿ ಬೀಜ ಮಾರಾಟ ಮಾಡಿದ ಡೀಲರ್ ಮೇಲೆ ಕ್ರಮಕ್ಕಾಗಿ ಹೋರಾಟ

0
19

ಸುರಪುರ: ಹುಣಸಗಿ ತಾಲೂಕಿನ ಮುದನೂರ ಗ್ರಾಮದಲ್ಲಿನ ರೈತ ಬಸನಗೌಡ ಪೋತರಡ್ಡಿ ಎನ್ನುವವರಿಗೆ ಕಿರಣ ಸೀಡ್ಸ್ ಹೌಸ್ ಎಮ್.ಜಿ ರೋಡ್ ಬಾಗಲಕೋಟ ಇವರು ನಕಲಿ ಮೆಣಸಿನಕಾಯಿ ಬೀಜ ಮಾರಾಟ ಮಾಡಿದ್ದು,ಇದರಿಂದ ರೈತನಿಗೆ ದೊಡ್ಡ ಮಟ್ಟದಲ್ಲಿ ನಷ್ಟವುಂಟಾಗಿದೆ. ಆದ್ದರಿಂದ ಮೆಣಸಿನ ಕಾಯಿ ಬೀಜ ಮಾರಾಟ ಮಾಡಿದ ಡೀಲರ್ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ರೈತನಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಜಯಕರ್ನಾಟಕ ಸಂಘಟನೆಯ ತಾಲೂಕು ಘಟಕದ ಮುಖಂಡರು ನಗರದ ಹಿರಿಯ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ಕಚೇರಿ ಮುಂದೆ ಧರಣಿ ನಡೆಸಿ ಆಗ್ರಹಿಸಿದರು.

ನಂತರ ಸ್ಥಳಕ್ಕೆ ತಹಸೀಲ್ದಾರ್ ಕೆ.ವಿಜಯಕುಮಾರ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಆಗಮಿಸಿ ತಮ್ಮ ಮನವಿಯನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ನಮವಿ ಸಲ್ಲಿಸಿ ಧರಣಿ ನಿಲ್ಲಿಸಲಾಯಿತು.

Contact Your\'s Advertisement; 9902492681

ಧರಣಿಯಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಬಿ.ಎನ್.ವಿಶ್ವನಾಥ ನಾಯಕ,ರಾಜ್ಯ ಕಾರ್ಯದರ್ಶಿ ವಿಜಯಕುಮಾರ ಮೊಗದಂಪುರ,ಉಪಾಧ್ಯಕ್ಷ ರವಿ ನಾಯಕ ಬೈರಿಮಡ್ಡಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ ಗುತ್ತೇದಾರ, ತಾಲೂಕು ಅಧ್ಯಕ್ಷ ಯಲ್ಲಪ್ಪ ನಾಯಕ,ಹುಣಸಗಿ ತಾಲೂಕು ಅಧ್ಯಕ್ಷ ಪ್ರಭುಗೌಡ ಪೋತರಡ್ಡಿ,ಶಹಾಪುರ ತಾಲೂಕು ಅಧ್ಯಕ್ಷ ಸೋಪಣ್ಣ ಹಳಿಸಗರ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಮಹಾದೇವಿ ಬೇನಾಳಮಠ,ಮಾರುತಿ ಮುದ್ನಾಳ,ಅರವಿಂದ ಕುಲಕರ್ಣಿ,ದೇವು,ವೆಂಕಟೇಶ,ಹಣಮಂತ,ಎಮ್.ಡಿ ಫಯಾಜ್ ಸೇರಿದಂತೆ ಅನೇಕ ಜನ ರೈತರು ಹಾಗೂ ಸಂಘಟನೆಯ ಸದಸ್ಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here