ಕಲಬುರಗಿ: ಶ್ರೀ ವಿಜ್ಞಾನೇಶ್ವರ ಸೇವಾ ಸಮಿತಿ ವತಿಯಿಂದ ನ್ಯಾಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ನೆನಪಿಸುವ ನಿಟ್ಟಿನಲ್ಲಿ ಶಾಸನದಲ್ಲಿ ಉಲ್ಲೇಖದನ್ವಯ ಅವರ 898 ನೇ ಸ್ಮರಣೋತ್ಸವ ಕಾರ್ಯಕ್ರಮ ಜರುಗಿತು.
ಇಲ್ಲಿನ, ಶ್ರೀ ಸದ್ಗುರು ದಾಸಿಮಯ್ಯ ಲಾ ಚೇoಬರನಲ್ಲಿ, ಸಮಿತಿಯ ಕೇಂದ್ರ ಕಛೇರಿ ಸ್ಥಾನದಲ್ಲಿ ಸಂಜೆ 7 ಗಂಟೆಗೆ ಹಿಂದೂ ನ್ಯಾಯ ಶಾಸ್ತ್ರದ ಪಿತಾಮಹರಾದ ಶ್ರೀ ವಿಜ್ಞಾನೇಶ್ವರರ ದಿ. 6.1.1126 ಎಂದು ಉಲ್ಲೇಖವಾದ ಮೇರೆಗೆ 898 ನೇ ಸ್ಮರಣೋತ್ಸವ ಆಚರಿಸಲಾಯಿತು.
ಮೊದಲಿಗೆ ಸಮಿತಿಯ ಅಧ್ಯಕ್ಷರು ಹಾಗೂ ವಕೀಲರಾದ ದತ್ತಾತ್ರೇಯ ಪಾಟೀಲ ಮರತೂರ್, ಶ್ರೀ ವಿಜ್ಞಾನೇಶ್ವರ ರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು, ನಂತರ ಮಾತನಾಡಿ ಪುಣ್ಯ ಸ್ಮರಣೆ ನಿಮಿತ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕೆ ಸಮಿತಿಯ ಎಲ್ಲಾ ಸದಸ್ಯರಿಗೆ ಅಭಿನಂದಿಸಿ, ಸಕ್ರಿಯವಾಗಿ ಪಾಲ್ಗೊಂಡು ಸ್ಮರಣೆ ಕಾರ್ಯಕ್ರಮ ಹಮ್ಮಿಕೊಂಡ್ಡಿದ್ದು ಸರಕಾರಕ್ಕೆ ಮುಟ್ಟುವಂತೆ ಯಾಗಲಿ, ನಮ್ಮ ರಾಜ್ಯ, ದೇಶದಲ್ಲಿ ಅಲ್ಲದೆ ಅಂತರರಾಷ್ಟ್ರೀಯ ನ್ಯಾಯಮೂರ್ತಿಗಳು ಕೂಡಾ ಮಿತಾಕ್ಷರ ಸಂಹಿತೆ ಓದಿ ನ್ಯಾಯ ನೀಡಿದ ತೀರ್ಪು ಉದಾಹರಣೆಗೋಳೊಂದಿಗೆ ಮಾಹಿತಿ ನೀಡಿದರು.
ಕೊನೆಯಲ್ಲಿ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿಗಳು, ಕಲ್ಯಾಣ ಕರ್ನಾಟಕ ನ್ಯಾಯ ವಾದಿಗಳ ಹಿತರಕ್ಷಣಾ ಸಮಿತಿಯ ಸಂಚಾಲಕರು ಮತ್ತು ನ್ಯಾಯವಾದಿಗಳಾದ ಜೇ. ವಿನೋದ ಕುಮಾರ ಕಾರ್ಯಕ್ರಮಕ್ಕೆ ಆಗಮಿಸಿದ ಹಿಂದೂ ನ್ಯಾಯ ಮಿತ್ರರಿಗೂ ಪಾಲ್ಗೊಂಡ ಎಲ್ಲಾ ಸದಸ್ಯರಿಗೂ ವಂದಿಸಿದರು.
ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಮಾಸಿಮಡು ಎಂಭ ಚಿಕ್ಕ ಗ್ರಾಮದಲ್ಲಿ 11 ನೇ ಶತಮಾನದಲ್ಲಿ ಜನಿಸಿದ ಇವರು, ಲೆಕ್ಕಶಾಸ್ತ್ರದಲ್ಲಿ ಚೂರಿಕಿನ ಕಾರಣ, 6 ನೇ ವಿಕ್ರಮಾದಿತ್ಯನ ಗಮನಕ್ಕೆ ಬರಲು ಆತನನ್ನು ಗೌರವಿಸಿ, ಆಗಿನ ಕಾಲದಲ್ಲಿ ಜಿಲ್ಲಾ ಮಟ್ಟವಾಗಿದ್ದ ಮತ್ತು ಪ್ರಸಿದ್ಧ ಎಣ್ಣೆ ವ್ಯಾಪಾರ ಕೇಂದ್ರ ಸ್ಥಳವಾಗಿದ್ದ ಕಲಬುರಗಿಯ ನಗರದ ಪಕ್ಕದಲ್ಲಿರುವ ಮರತೂರಿನ ಭೂ ಕ್ಷೇತ್ರದ ಕಂದಾಯ ಅಧಿಕಾರಿಯಾಗಿ ನೇಮಕಗೊಂಡ ಇವರು, ಯಾಜ್ಞವಲ್ಕ್ಯ ಸ್ಮುರ್ತಿ ಮೇಲೆ ವ್ಯಾಖ್ಯಾನ ಬರೆದ ಮಹಾ ಜ್ಞಾನಜ್ಯೋತಿ, ನ್ಯಾಯ ಕ್ಷೇತ್ರದ ಪಿತಾಮಹ, ಅಚ್ಚ ಕನ್ನಡಿಗನೆಂದು ಹೇಳಲು ಹೆಮ್ಮೆ ಹಾಗೂ ನ್ಯಾಯಾಲಯದ ಎಲ್ಲಾ ತೀರ್ಪುಗಳ ಮೂಲ ಇವರು ಬರೆದ ಮಿತಾಕ್ಷರ ಸಂಹಿತೆ ಎಂದು ಹೇಳಲು ಅತೀವ ಸಂತೋಷ ವಾಗುತದೆ ಎಂದು ತಿಳಿಸಿದರು.