ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯಗೆ ಮನವಿ

0
17

ಭಾಲ್ಕಿ; ವಿಶ್ವಕ್ಕೆ ಸಮಾನತೆ ಸಾರಿದ ವಿಶ್ವಗುರು ಬಸವಣ್ಣವರನ್ನು ಕರ್ನಾಟಕದ ಸಾಂಸ್ಕøತಿಕ ನಾಯಕರನ್ನಾಗಿ ಘೋಷಣೆ ಮಾಡುವಂತೆ ಲಿಂಗಾಯತ ಮಠಾಧೀಶರು, ಪ್ರಗತಿಪರ ಸ್ವಾಮೀಜಿ, ಪ್ರಗತಿಪರ ಚಿಂತಕರು, ರಾಜಕೀಯ ಮುಖಂಡರು ಒತ್ತಾಯಿಸಿದ್ದಾರೆ.

ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.

Contact Your\'s Advertisement; 9902492681

ಬಸವಣ್ಣನವರು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಬಸವಣ್ಣ ಒಂದು ಸಂಕೇತ. ಜೇಡರ ದಾಸಿಮಯ್ಯನಿಂದ ಮಾದರ ಚೆನ್ನಯ್ಯ, ಕಾಳವ್ವೆಯಿಂದ ಅಕ್ಕಮಹಾದೇವಿ, ಅಲ್ಲಮ್ಮನಿಂದ ನಾರಾಯಣಗುರು, ಚೆನ್ನಬಸವನಿಂದ ಭಗತಸಿಂಗ್, ಅಂಬೇಡ್ಕರ ಅವರಿಂದ ಕುವೆಂಪು, ಮಹಾವೀರನಿಂದ ಗುರುನಾನಕ, ಕ್ರಿಸ್ತನಿಂದ ಪ್ರವಾದಿ ಪೈಗಂಬರ ಮತ್ತು ಬುದ್ಧನಿಂದ ಸಂವಿಧಾನದ ವರೆಗೆ ಈ ಎಲ್ಲರ ಆಶಯಗಳನ್ನು ಶರಣ ಚಳುವಳಿಯಲ್ಲ ಧ್ವನಿಸಿದೆ. ಇದಕ್ಕೆ ವಚನಗಳ ಪ್ರಮಾಣವಿದ.ಎ ಇದೆಲ್ಲದರ ಸಂಕೇತ ಬಸವಣ್ಣ.

ಹಾಗಾಗಿ ರಾಜ್ಯ ಸರಕಾರ ಕೂಡಲೇ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕøತಿಕ ನಾಯಕರೆಂದು ಘೋಷಣೆ ಮಾಡುವಂತೆ ಮನವಿ ಪತ್ರದಲ್ಲಿ ಕೋರಲಾಯಿತು.

ತರಳಬಾಳು ಜಗದ್ಗುರುಗಳು, ಮಾದರ ಚೆನ್ನಯ ಸ್ವಾಂಈಜಿ, ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀಶೈಲ ಜಗದ್ಗುರು, ಫಖೀರ ದಿಂಗಾಲೇಶ್ವರ ಸ್ವಾಮೀಜಿ, ಡಾ.ರಾಜಶೇಖರ ಶಿವಾಚಾರ್ಯರು, ಡಾ.ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ, ವೀರಭದ್ರ ಶಿವಾ ಕಡಕಂಚಿ, ಜ್ಞಾನಪ್ರಕಾಶ ಸ್ವಾಮೀಜಿ, ಹುಲಸೂರು ಶ್ರೀಗಳು, ಅಕ್ಕಅನ್ನಪೂರ್ಣ ತಾಯಿ, ಮೇಹಕರ ಶ್ರೀಗಳು, ಭಾತಂಬ್ರಾ ಶ್ರೀಗಳು, ಡಾ.ಸಿದ್ದರಾಮ ಬೆಲ್ದಾಳ ಶರಣರು, ಡಾ.ಗಂಗಾಂಬಿಕೆ ಅಕ್ಕ, ಭಂತೆ ವರಜ್ಯೋತಿ, ಭಂತೆ ನಾಗರತ್ನ ಸೇರಿದಂತೆ ವಿವಿಧ ಮಠಗಳ ಸುಮಾರು 48 ಶ್ರೀಗಳು ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ. ಈ ಸಂದರ್ಭದಲ್ಲಿ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯರು, ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಸಚಿವ ಎಂ.ಬಿ.ಪಾಟೀಲ್, ಅರವಿಂದ ಜತ್ತಿ, ಬಸವರಾಜ ಬುಳ್ಳಾ ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here