ಕಲಬುರಗಿ: ಕರ್ನಾಟಕ ಮಹಿಳಾ ಪರ ಜನಜಾಗೃತಿ ಸಮಿತಿಯ ರಾಜ್ಯಾಧ್ಯಕ್ಷೆ ಜಗದೇವಿ ಆರ್. ಹೆಗಡೆ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಕಲಬುರಗಿ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ಅಸ್ತಿತ್ವಕ್ಕೆ ತರಲಾಯಿತು.
ಲಕ್ಷ್ಮೀ ಕರುಣೇಶ ಕವಳೆ (ಅಧ್ಯಕ್ಷ), ಶ್ರೀದೇವಿ ಸಿದ್ದು ಕಾಲೇಬಾಗ (ಉಪಾಧ್ಯಕ್ಷ), ಜಯಶ್ರೀ ಎಂ. ಶಿವನೂರ (ಪ್ರಧಾನ ಕಾರ್ಯದರ್ಶಿ), ರಾಜೇಶ್ವರಿ ಶಾಂತಕುಮಾರ ಕಪನೂರ (ಸಹ ಕಾರ್ಯದರ್ಶಿ), ರೇಣುಕಾ ಶಂಭುಲಿಂಗಯ್ಯ ಗೋಗಿ(ಕೆ) (ಖಜಾಂಚಿ), ಅನುಸೂಯಾ ಯ ಆರೇಕರ, ಅಂಕಿತಾ ರೆಡ್ಡಿ ಅಯ್ಯರವಾಡಿ, ಮಹಾಂತಮ್ಮ ನಂದೂರ, ಗುಣಶೀಲಾ ಗುರುನಾಥ ಗೋಗಿ ಕೆ (ಸದಸ್ಯರನ್ನಾಗಿ) ನೇಮಕ ಮಾಡಲಾಯಿತು. ಕೂಡಲೇ ಗುರುತರ ಜವಾಬ್ದಾರಿ ವಹಿಸಿಕೊಂಡು ಮಹಿಳೆಯರ ಮೇಲೆ ಆಗುತ್ತಿರುವ ಅನ್ಯಾಯ, ಶೋಷಣೆ, ಕಿರುಕುಳ, ಲೈಂಗಿಕ ದೌರ್ಜನ್ಯ ವಿರುದ್ಧ ಹೋರಾಡಬೇಕು.ಎಲ್ಲ ಮಹಿಳೆಯರ ಕ್ಷೇಮಾಭಿವೃದ್ಧಿಗಾಗಿ ಕಾನೂನು ಚೌಕಟ್ಟಿನಲ್ಲಿ ನ್ಯಾಯ ಒದಗಿಸಿಕೊಡುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುಬಾಯಿ ಎನ್. ಕಟ್ಟಿಮನಿ ಪ್ರಕಟಣೆಯಲ್ಲಿ ಆದೇಶಿಸಿದ್ದಾರೆ.