- ಎಂ.ಡಿ ಮಶಾಖ ಚಿತ್ತಾಪುರ
ವಾಡಿ; ರೈಲು ನಿಲ್ದಾಣ ಪ್ರದೇಶದ ಹಳಿ ಮಾರ್ಗದ ಕೆಳಗೆ ಒಳ ಸೇತುವೆ ನಿರ್ಮಿಸಬೇಕೆಂದು ಒತ್ತಾಯಿಸಿ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಜನ ಧ್ವನಿ ಜಾಗೃತ ಸಮಿತಿ ಅಧ್ಯಕ್ಷ ಆರ್ ಕೆ ವೀರಭದ್ರಪ್ಪ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಆಗ್ರಹಿಸಿದರು.
ಇದೇ ವೆಳೆ ಸೊಲ್ಲಾಪುರದ ಡಿವಿಜಿನಲ್ ರೈಲ್ವೆ ಮ್ಯಾನೇಜರ್ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಿವಲಿಂಗ ಹಲ್ಳಿಕರ್, ವಿ.ಕೆ ಕೆದಿಲಾಯ, ಶೇಖ ಅಲ್ಲಾಭಕ್ಷ, ಜಯದೇವ ಜೋಹಿಕಲ್, ಶಿವಪ್ಪ ಮುಂಡರಗಿ, ಮಹ್ಮದ್ ಇಸೋಫ್ ಮುಲ್ಲಾ, ಜಾನ್ ವೆಲ್ಲೆಸ್ಲಿ, ದೇವಿಂದ್ರ ದೊಡ್ಡಮನಿ, ಸಿದ್ದಯ್ಯ ಶಾಸ್ತ್ರಿ, ಕಾಶೀನಾಥ ಶೆಟಗಾರ, ಹಾಜಪ್ಪ ಲಾಡ್ಲಾಪುರ, ಮಡಿವಾಳ ಬಿದನೂರ, ಅಶೋಕ ಖಾನಕುರ್ತೆ, ಮಹಾಂತೇಶ ಬಿರಾದಾರ, ಮಹ್ಮದ್ ಮೌಲಾ ಸೇರಿದಂತೆ ಇತರರು ಇದ್ದರು.