ಯಾದಗಿರಿ: ಕಾರ್ಮಿಕರ ಕಲ್ಯಾಣಕಾಗಿ ಹೋರಾಟ ಮಾಡುತ್ತಿರುವ ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ಕಲಬುರಗಿ ಅಧ್ಯಕ್ಷ ಭೀಮರಾಯ ಎಂ ಕಂದಳ್ಳಿಗೆ ಕಾರ್ಮಿಕರ ಮಂಡಳಿ ಸದಸ್ಯರನಾಗಿ ನೇಮಕ ಮಾಡಬೇಕೆಂದು ಸರ್ ಎಂ ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘ ಸರಕಾರಕ್ಕೆ ಆಗ್ರಹಿಸಿದೆ.
ಈ ಬಗ್ಗೆ ಕಾರ್ಮಿಕ ಸಚಿವರಿಗೆ ಪತ್ರ ಪರೆದಿರುವ ಯಾದಗಿರಿ ಜಿಲ್ಲೆಯ ಸಂಘದ ಅಧ್ಯಕ್ಷ ಪ್ರದೀಪ್ ಅಣಬಿ ಸುಮಾರು ವರ್ಷಗಳಿಂದ ಕಾರ್ಮಿಕರ ಕಲ್ಯಾಣಕಾಗಿ ಹೋರಾಟ ಮಾಡುತ್ತಿರುವ ಕಲ್ಯಾಣ ಕರ್ನಾಟಕ ಭಾಗದ ಕಾರ್ಮಿಕರಿಗೆ ನ್ಯಾಯ ಕೊಡಿಸುವ ಪ್ರಮಾಣಿಕತೆಯ ದಿಟ್ಟ ಹೋರಾಟ ನಡೆಸುತ್ತಿರುವ ಭೀಮರಾಯ ಎಂ ಕಂದಳ್ಳಿ ಮಂಡಳಿಯ ಸದಸ್ಯರಾಗಿ ನೇಮಕ ಮಾಡಬೇಕೆಂದು ಪತ್ರದಲ್ಲಿ ತಿಳಿಸಿ ಒತ್ತಾಯಿಸಿದ್ದಾರೆ.