ಕಲಬುರಗಿ; ನಗರದ ಟಿ.ವಿ ಸ್ಟೇಷನ್ ಹಿಂದುಗಡೆಯಿರುವ ಶ್ರೀ ದಾಮೋದರ ರಘೋಜಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆ ನಿರ್ದೇಶಕ ಜಿ.ಎಂ ವಿಜಯಕುಮಾರ ಜಂಟಿ ಉದ್ಘಾಟಿಸಿದರು.
ಸಂಸ್ಥೆಯ ಅಧ್ಯಕ್ಷ ರಾಮಚಂದ್ರ ಡಿ ರಘೋಜಿ, ಕಾರ್ಯದರ್ಶಿ ಮೀರಾ ಆರ್ ರಘೋಜಿ, ಟ್ರಸ್ಟಿಗಳಾದ ಕು.ಮನೋಶ್ರೀ ಆರ್ ರಘೋಜಿ, ನಂದಿನಿ ಆರ್ ರಘೋಜಿ ಮತ್ತು ವಿಷ್ಣು, ಖೆಲೋಜಿ ಕ್ಯಾಂಪಸ್ ಕೋಆರ್ಡಿನೇಟರ್ ಸುಭಾಸಚಂದ್ರ ಗಾದಾ, ಶ್ರೀ ದಾಮೋದರ ರಘೋಜಿ ಶಾಲೇಯ ಮುಖ್ಯ ಗುರು ಪ್ರಮೋದ ಮಾಳೆಕಾರ, ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಕಿಣ್ಣಿ ಸೇರಿದಂತೆ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.