ಫಾತಿಮಾ ಶೇಖ್‍ರ ಕೊಡುಗೆ ಪರಿಚಯಿಸುವ ಕಾರ್ಯವಾಗಲಿ

0
32

ಕಲಬುರಗಿ: ಫಾತಿಮಾ ಶೇಖ್ ಅವರು ಸಾವಿತ್ರಿಬಾಯಿ ಫುಲೆ ಅವರ ಜೊತೆಗೂಡಿ ದೀನ-ದಲಿತ, ಶೋಷಿತ ವರ್ಗದ ಬಡವರು, ಮಹಿಳೆಯರಿಗೆ ಶಿಕ್ಷಣವನ್ನು ನೀಡುವುದಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಸಮಾಜದಲ್ಲಿದ್ದ ಮೂಡನಂಬಿಕೆ, ಕಂದಾಚಾರ, ಅಂದಶೃದ್ಧೆಯಂತಹ ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಶ್ರಮಿಸಿದ್ದಾರೆ. ಅವರನ್ನು ‘ಆಧುನಿಕ ಭಾರತದ ಮೊದಲ ಮುಸ್ಲಿಂ ಶಿಕ್ಷಕಿ’ ಎಂದು ಪರಿಗಣಿಸಲಾಗಿದ್ದು, ಅವರ ಶೈಕ್ಷಣಿಕ ಮತ್ತು ಸಾಮಾಜಿಕ ಕೊಡುಗೆ ಅನನ್ಯವಾಗಿದೆ. ಫಾತಿಮಾ ಶೇಖ್ ಅವರ ಕೊಡುಗೆಯನ್ನು ಪರಿಚಯಿಸುವ ಕಾರ್ಯ ಜರುಗಬೇಕಾಗಿದೆ ಎಂದು ಉಪನ್ಯಾಸಕ,ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.

ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಜರುಗಿದ ‘ಫಾತಿಮಾ ಶೇಖ್ ಅವರ 193ನೇ ಜನ್ಮದಿನಾಚರಣೆ’ಯಲ್ಲಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಅವರು ಅವಿರತವಾಗಿ ಹೋರಾಡಿದ್ದಾರೆ. ಇವರಿಬ್ಬರ ಕೊಡುಗೆಯನ್ನು ಮರೆಯುವಂತಿಲ್ಲ. ಫಾತಿಮಾ ಶೇಖ್ ಅವರು ಸ್ತ್ರೀವಾದಿ ಶಿಕ್ಷಕಿಯಾಗಿದ್ದರು. ಸಾವಿತ್ರಿಬಾಯಿ ಫುಲೆ ಸ್ನೇಹಿತೆ, ಸಹದ್ಯೋಗಿಯಾಗಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು.

Contact Your\'s Advertisement; 9902492681

ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ಫಾತಿಮಾ ಶೇಖ್ ಅವರು ಜಾತ್ಯಾತೀತವಾದಿಯಾಗಿದ್ದು, ಎಲ್ಲಾ ವರ್ಗದ ಬಡ ಮಕ್ಕಳಿಗೆ ಶಿಕ್ಷಣ ನೀಡಿದ್ದು ಗಮನಾರ್ಹವಾಗಿದೆ. ಎಲ್ಲಾ ಹೆಣ್ಣು ಮಕ್ಕಳ್ಳನ್ನು ವಿದ್ಯಾವಂತೆಯರನ್ನಾಗಿ ಮಾಡಲು ಪಟತೊಟ್ಟಿದ್ದ ಸಾವಿತ್ರಿಬಾಯಿ ಫುಲೆ ಅವರ ಜೊತೆಗೂಡಿ ನಿರಂತರವಾಗಿ ಶ್ರಮಿಸಿದ್ದಾರೆ. ಶಿಕ್ಷಣದ ಮಹತ್ವವನ್ನು ಮನೆ-ಮನೆಗೆ ತೆರಳಿ ವ್ಯಾಪಕವಾದ ಪ್ರಚಾರ ಮಾಡಿದರು. ಸಮಾಜ ಸುಧಾರಣೆಗಾಗಿ ಸದಾ ಹಂಬಲಿಸುವ ಮನ ಅವರದಾಗಿತ್ತು ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿಯರಾದ ಪ್ರಿಯಾಂಕಾ ದೋಟಿಕೊಳ್ಳ, ಸಾನಿಯಾ ಶೇಖ್, ಐಶ್ವರ್ಯ ಬಿರಾದಾರ, ಪಾಯಲ್ ಹಿಬಾರೆ, ಪೂಜಾ ಜಮಾದಾರ, ಸಿಬ್ಬಂದಿ ಸೋಹೆಲ್ ಶೇಖ್ ಹಾಗೂ ವಿದ್ಯಾರ್ಥಿಗಳು ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here