“ದ್ವಿದಳ ಧಾನ್ಯಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ತರಬೇತಿ”

0
29

ಕಲಬುರಗಿ; ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ತ್ಯಾಗವೀರ್ ಸಿರಸಂಗಿ ಲಿಂಗರಾಜ ವಿವಿದೋದ್ದೇಶ ಸಂಘ, ಕಲಬುರಗಿ ಮತ್ತು ಕೃಷಿ ಇಲಾಖೆ, ಚಿತ್ತಾಪೂರ, ಇವರ ಸಂಯುಕ್ತ ಆಶ್ರಯದಲ್ಲಿ ದ್ವಿದಳ ಧಾನ್ಯಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು.

ಸಸಿಗಳಿಗೆ ನೀರೆರೆದು ಉದ್ಘಾಟನಾ ಮಾಡಿ ಜಿಲ್ಲೆಯ ಕೃಷಿಕ ಸಮಾಜದ ಅಧ್ಯಕ್ಷರಾದ ಡಾ. ಸಿದ್ರಾಮಪ್ಪಾ ಪಾಟೀಲ್ ಧಂಗಾಪೂರ ರವರು ಮಾತನಾಡಿ ಕೃಷಿ ಮತ್ತು ತೋಟಗಾರಿಕೆ ಸಂಸ್ಕರಣೆ ಮತ್ತು ಉತ್ಪಾಧನೆಗಳ ಮೌಲ್ಯವರ್ಧನೆ ಅತ್ಯಗತ್ಯ ಸಹಕಾರ ಮನೋಭಾವದಿಂದ ಶಿಕ್ಷಣ, ಕೃಷಿ, ಆಹಾರ ಕ್ಷೇತ್ರವನ್ನು ಬಲಪಡಿಸಿದ ಮಹಾ ಧಾನಿ, ತ್ಯಾಗಿ, ವೀರ ಸರಸಂಗಿ ಲಿಂಗರಾಜ ದೇಸಾಯಿರವರ 163ನೇ ಜಯಂತಿತೋತ್ಸವದ ಅಂಗವಾಗಿ ಕೃಷಿ ಮಹಿಳೆಯರಿಗೆ ತರಬೇತಿ ನೀಡುತ್ತಿರುವುದು ಸಂತಸದ ವಿಷಯ ಎಂದರು.

Contact Your\'s Advertisement; 9902492681

ನವ ಕರ್ನಾಟಕ ರೈತ ಸಂಘದ ರಾಜ್ಯದ್ಯಕ್ಷರಾದ ಶ್ರೀ ದಯಾನಂದ ಪಾಟೀಲ್, ಕಮಲಾನಗರ ಮಾತನಾಡಿ ಕೃಷಿ ಮಾಹಿತಿಯನ್ನು ಗ್ರಾಮೀಣ ಮಟ್ಟಕ್ಕೂ ತಲುಪಲು ಹಾಗೂ ಕೃಷಿ ಸಖಿ, ಪಶುಸಖಿ ರವರು ಕñಇ ವಿಜ್ಞಾನ ಕೇಂದ್ರ ತಾಂತ್ರಕತೆಗಳನ್ನು ಪಡೆದುಕೊಂಡು ರೈತರ ಅರ್ಥಿಕವಾಗಿ ಸಬಲರಾಗುವಂತೆ ಸರ್ಕಾರದ ಯೋಜನೆಗಳನ್ನು ಗ್ರಾಮೀಣ ರೈತರಿಗೆ ತಲುಪಿಸಲು ವಿನಂತಿಸಿಕೊಂಡರು. ಡಾ. ರಾಜಶೇಖರ ಪಾಟೀಲ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಮಹಾಧಾನಿಗಳ ತ್ಯಾಗಿ ವೀರ ಲಿಂಗರಾಜ ರವರ ಇತಿಹಾಸ, ಕೊಡುಗೆಗಳು, ಶಿಕ್ಷಣ ಕುರಿತು ದೂರದೃಷ್ಟಿಯ ಮಾಹಿತಿಯನ್ನು ನೀಡಿದರು.

ಡಾ. ಚಂದ್ರಕಾಂತ ರವರು ಮಾತನಾಡಿ ದ್ವಿದಳ ಧಾನ್ಯಗಳ ಪೌಷ್ಟಿಕಾಂಶದ ಮಹತ್ವದ ಬಗ್ಗೆ ಕುರಿತು ಮಾಹಿತಿ ನೀಡಿದರು. ಉಪ ನಿರ್ದೇಶಕರು, ಕೃಷಿ ಇಲಾಖೆಯ ಶ್ರೀಮತಿ ಅನುಸೂಯ ಹೂಗಾರ ರವರು ಇಲಾಖೆಯಲ್ಲಿ ದೊರಕುವ ಸೌಲಭ್ಯಗಳ ಮಾಹಿತಿಯನ್ನು ನೀಡಿದರು. ವಲಯ ಕೃಷಿ ಸಂಶೋಧನಾ ಕೇಂದ್ರದ ಆಹಾರ ಸಂಸ್ಕರಣದ ವಿಜ್ಞಾನಿಯವರಾದ ಡಾ. ಅಮರೇಶ ಗಣಚಾರ್ ರವರು ಮೌಲ್ಯವರ್ಧನೆ ಕುರಿತು ಮಾಹಿತಿ ನೀಡಿದರು.

ಸಹಾಯಕ ಕೃಷಿ ನಿರ್ದೇಶಕರಾದ ಸಂಜೀವ್ ಮಾನೆ, ಕೆವಿಕೆಯ ವಿಜ್ಞಾನಿಗಳಾದ ಡಾ. ಜಹೀರ್ ಅಹೆಮದ್ ರವರು ಅಧ್ಯಕ್ಷೀಯ ಭಾಷಣದಲ್ಲಿ ಸಾವಯವ ತೊಗರಿ ನಾಡು ಕಡಲೆ, ತೊಗರಿ, ಉದ್ದು ಮತ್ತು ಹೆಸರು ಸಂಸ್ಕರಣೆಗೆ ವ್ಯಾಪಕ ಬೇಡಿಕೆ ಇದೆ. ಬೀಜೋತ್ಪಾದನೆ ವಾಣೀಜ್ಯ ಮಟ್ಟದಲ್ಲಿ ಸುಧಾರಿಸುವ ಅವಶ್ಯಕತೆವಿದೆ ತಿಳಿಸಿದರು.

ಕೆವಿಕೆಯ ಬೇಸಾಯ ತಜ್ಞರಾದ ಡಾ. ಯುಸುಫ್‍ಅಲಿ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಕೃಷಿ ಅಧಿಕಾರಿಗಳಾದ ಶ್ರೀನಿವಾಸ, ಸರೋಜ ಹಾಗೂ 45 ಮಂದಿ ರೈತ ಮಹಿಳೆಯರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here