ರಾಷ್ಟ್ರೀಯ ಗ್ರಾಮೀಣ ಅಭಿವೃಧ್ಧಿ ಸೇವಾ ಸಂಘ ಸಾಂಸ್ಕøತಿಕ ಉತ್ಸವ

0
12

ಸುರಪುರ: ನಗರದಲ್ಲಿ ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ಸೇವಾ ಸಂಘ ಯೇಡಳ್ಳಿ ಅವತಿಯಿಂದ ಸಾಂಸ್ಕøತಿಕ ಉತ್ಸವ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ರುಕ್ಮಾಪುರ ಹಿರೇಮಠದ ಗುರು ಶಾಂತಮೂರ್ತಿ ಶಿವಚಾರ ಮಹಾಸ್ವಾಮಿಗಳು ಅವರು ನೆರವೇರಿಸಿ ಮಾತನಾಡಿ, ಜನಪದ ಕಲೆಗಳು ಈಗಿನ ಮಕ್ಕಳಿಗೆ ಅದರ ಬಗ್ಗೆ ತಿಳಿ ಹೇಳುವಂತ ಕೆಲಸ ಮತ್ತು ಜನಪದ ಕಲಾವಿದರನ್ನು ಬೆಳೆಸುವಂತಹ ಕೆಲಸ ನಡಿತಿದೆ ಇನ್ನು ಹೆಚ್ಚಿನ ಗ್ರಾಮೀಣ ಪ್ರದೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗ್ರಾಮೀಣ ಪ್ರದೇಶದ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸೋಣ ಎಂದು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಮಾರ್ ವೆಂಕೊಬ್ ಕನ್ನಡ ಉಪನ್ಯಾಸಕರು ಕರ್ನಾಟಕ ಬಿ ಈಡಿ ಕಾಲೇಜ್ ರಂಗoಪೆಟ್ ಮಾತನಾಡಿ,ಗ್ರಾಮೀಣ ಭಾಗದ ಕಲಾವಾದ ಜನಪದ ಕಲೆ ಡೊಳ್ಳು ಕುಣಿತ, ಸೋಪಾನಿ ಪದ , ಅಂತಿಪದ, ಮೊಹರಂ ಕುಣಿತ ಹೀಗೆ ಅನೇಕ ಹಳ್ಳಿ ಭಾಗದ ಕಲೆ ಸಂಸ್ಕೃತಿ ಕಾಲಕಾಲಕ್ಕೂ ಉಳಿಸಿಕೊಂಡು ಬೆಳೆಸಿಕೊಂಡು ಬಂದಂತ ಪರಂಪರೆಯನ್ನು ನಾವೆಲ್ಲರೂ ಅನೇಕ ಯುವಕರು ಜಾನಪದ ಮತ್ತು ಕಲೆ ಸಂಸ್ಕೃತಿಯನ್ನು ಯುವಕರ ಪಾತ್ರ ಬಹಳ ಮಹತ್ವದ ಇದೆ ಇಂಥ ಒಂದು ಒಳ್ಳೆ ಕಾರ್ಯಕ್ರಮ ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ಸೇವಾ ಸಂಘ ವತಿಯಿಂದ ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು .

ಪ್ರಸ್ತಾವಿಕವಾಗಿ ಸಂಸ್ಥೆಯ ಅಧ್ಯಕ್ಷರಾದ ರಾಜು ಎಂ ಜಿ ದೇವರ ಗೋನಾಲ ಮಾತನಾಡಿದರು,ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಮಲ್ಲಿಕಾರ್ಜುನ ತಳ್ಳಳ್ಳಿ ಸಿದ್ದಣ್ಣ ಮುಧೋಳ್ ಜಗದೀಶ ದೇಸಾಯಿ, ಮಾನು ಕಲಬುರ್ಗಿ, ಸಿದ್ದನಗೌಡ ಹೆಬ್ಬಾಳ,ಚಂದ್ರು ಗೋಗಿ, ಭೀಮಾಶಂಕರ ಹಸನಪುರ ಹಾಗೂ ಕಾರ್ಯಕ್ರಮದಲ್ಲಿ ವಿವಿಧ ಕಲಾವಿದರಿಗೆ ಗೌರವಿಸಿ ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು . ಹಾಗೂ ಅನೇಕ ಕಲಾವಿದರು ಮತ್ತು ಸಂಸ್ಥೆಯ ಸದಸ್ಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here