ಕಲಬುರಗಿ: ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ ಯುವ ಸೈನ್ಯ ಕಲ್ಯಾಣ ಕರ್ನಾಟಕ ವತಿಯಿಂದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಅವರ ಅಮೃತ ಹಸ್ತದಿಂದ ನೂತನ 2024ರ ಹೊಸ ವರ್ಷದ ಕ್ಯಾಲೆಂಡರ ಬಿಡುಗಡೆಯನ್ನು ಬೆಂಗಳೂರಿನಲ್ಲಿ ಮಾಡಲಾಯಿತು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಪೂರ್ವ ಮತಕ್ಷೇತ್ರದ ಶಾಸಕ ಅಬ್ಬಯ್ಯ ಪ್ರಸಾದ,ರಾಜ್ಯಾಧ್ಯಕ್ಷ ನಗುತಾ ರಂಗನಾಥ,ಕಲ್ಯಾಣ ಕರ್ನಾಟಕ ಅಧ್ಯಕ್ಷ ಸೈದಪ್ಪ ಡಾಂಗೆ,ಕಲ್ಯಾಣ ಕರ್ನಾಟಕ ಉಪಾಧ್ಯಕ್ಷ ಮಲ್ಲಿಕಾರ್ಜುನ ಅರಬೋಳ,ಬೋಧಿಸೆನ ದಂಡ,ಸಂತೋಷ ಅಷ್ಟಗ,ಬಶೀರ ವಿಜಯಪುರ ಸೇರಿದಂತೆಯುವ ಸೈನ್ಯ ಸಂಘಟನೆಯ ಮುಖಂಡರು ಇದ್ದರು.