ಕಲಬುರಗಿ; ಕಲ್ಯಾಣ ಕರ್ನಾಟಕದ ರೈತರು ಎಳ್ಳ ಅಮವಾಸೆ ಹಬ್ಬ ಅದ್ಧೂರಿಯಂದ ಆಚರಿಸುವ ಪರಂಪರೆ ಇದ್ದು. ಇದೀನ ಜಿಲ್ಲಾಡಳಿತ ಜಿಲ್ಲಾಧಿಕಾರಿ ಫೌಜಿಯಾ ತರನ್ನೂಮ್ ಒಳಗೊಂಡಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕಿನ ಕೊರಕೋಟಾ ಗ್ರಾಮದ ಹತ್ತಿರದ ಗುರುನಾಥ ಸೊನ್ನದ ನೇಕಾರ ಅವರ ತೋಟದಲ್ಲಿ ಅದ್ಧೂರಿಯಾಗಿ ಎಳ್ಳ ಅಮವಾಸೆ ಆಚರಿಸಲಾಯಿತು.
ಹಬ್ಬದ ಪ್ರಯುಕ್ತ ತೋಟದಲ್ಲಿ ಊಟ ಸವಿದ ಮೊದಲ ಅಧಿಕಾರಿಯಾಗಿರುವ ಫೌಜಿಯಾ ತರನ್ನೂಮ್ ಹರ್ಷ ವ್ಯಕ್ತ ಪಡಿಸಿ ಧನ್ಯವಾದ ವ್ಯಕ್ತಪಡಿಸಿದರು.
ಈ ವೇಳೆ ಗುರುನಾಥ್ ಸೊನ್ನದ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ನ್ಯಾಯವಾದಿ ವಿನೋದ ಕುಮಾರ ಮಾತನಾಡಿ ಕೃಷಿಯಲ್ಲಿ ವಿವಿಧ ಬೆಳೆಗಳನ್ನು ಉತ್ಪಾದನೆ ಗೊಳಿಸಿ, ಪ್ರಗತಿಪರ ರೈತ ಪ್ರಶಸ್ತಿಯನ್ನು ಪಡೆದ ರೈತ ನಾಯಕ ಸೊನ್ನದ ರವರ ತೋಟದಲ್ಲಿ ಈ ದಿನ ಭಾಗವಹಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿ, ನೇಕಾರರ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದರು.
ನೇಕಾರರ ಮೂಲ ಗ್ರಾಮ ಆಳಂದ ತಾಲೂಕಿನ ಮಾದನ ಹಿಪ್ಪರಗಾ ಅಲ್ಲಿ ಒಮ್ಮೆ ಭೇಟಿ ನೀಡಿ ನೇಕಾರರ ಅಭೂಧ್ಯಯಕ್ಕೆ ಮುನ್ನಡಿ ಬರೆಯಬೇಕು ಎಂದು ಈ ಸಂದರ್ಭದಲ್ಲಿ ಮನವಿ ಮಾಡಿ, MSK mill ಏಕೈಕ ಜವಳಿ ಕಾರ್ಖಾನೆ ಮುಚ್ಚಲ್ಪಟ್ಟಿದೆ, ಕೇಂದ್ರ ಸರ್ಕಾರದ ಜವಳಿ ಪಾರ್ಕ್ ಸ್ಥಾಪನೆಗೆ ಸರ್ಕಾರದ ಜೊತೆ ಹೆಚ್ಚಿನ ಪಾಲು ಸಪ್ತ ನೇಕಾರರಿಗೆ ತಲುಪಲು ಕಾಳಜಿ ವಹಿಸಬೇಕು ಎಂದು ಒತ್ತಾಯಿಸಿದರು.