ಕಲಬುರಗಿ: ಪದವಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ನಗರದ ಬಾಡಿಗೆ ಮನೆಯೊಂದರಿಂದ ನಾಪತ್ತೆಯಾದ ಘಟನೆ ವರದಿಯಾಗಿದೆ. ನಾಪತ್ತೆಯಾದವಳಿಗೆ ಮೂಲತ: ಆಳಂದ್ ತಾಲ್ಲೂಕಿನ ಸುಂಟನೂರು ಗ್ರಾಮದ ನಿವಾಸಿ ಹಾಗೂ ಶ್ರೀ ಗುರುಪಾದೇಶ್ವರ್ ಕಾಲೇಜಿನ ಬಿಎಸ್‌ಸಿ ದ್ವಿತೀಯ ವರ್ಷದ ವಿದ್ಯಾರ್ಥಿನಿ ಜಯಲಕ್ಷ್ಮೀ ತಂದೆ ಮಲ್ಲಿಕಾರ್ಜುನ್ ನಾಯಿಕೊಡಿ ಎಂದು ಗುರುತಿಸಲಾಗಿದೆ.
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಲ್ಲಿಕಾರ್ಜುನ್ ನಾಯಕೊಡಿ ಅವರು ನಗರದ ಮಹಾವೀರ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಹಿರಿಯ ಪುತ್ರಿ ಜಯಲಕ್ಷ್ಮೀ ಬಿಎಸ್‌ಸಿ ದ್ವಿತೀಯ ವರ್ಷದಲ್ಲಿ ಗುರುಪಾದೇಶ್ವರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಳೆದ ಜೂನ್‌ನಲ್ಲಿ ತನ್ನ ತಂದೆಗೆ ಮೊಬೈಲ್ ಕರೆ ಮಾಡುವುದಾಗಿ ಹೇಳಿ ಮೊಬೈಲ್ ಕೊಡಲು ಕೇಳಿದಾಗ ತಂದೆ ಕೊಡದೇ ಇದ್ದಾಗ ಆ ಮೊಬೈಲ್‌ನಲ್ಲಿ ಒಡೆದು ಹಾಕಿದಳು. ತಂದೆ ಬುದ್ದಿ ಹೇಳಿದ್ದ. ಅಂದಿನಿಂದಲೂ ವಿದ್ಯಾರ್ಥಿನಿ ತಂದೆಯೊಂದಿಗೆ ಸಿಟ್ಟು ಮಾಡಿಕೊಳ್ಳುತ್ತ ಬಂದಿದ್ದಳು. ಕಳೆದ ೧೬ರಂದು ಪತ್ನಿ ಶರಣಮ್ಮಳೊಂದಿಗೆ ಬೇರೆ ಬಾಡಿಗೆ ಮನೆ ಹುಡುಕಲು ಮಲ್ಲಿಕಾರ್ಜುನ್ ಹೋಗಿ ಮರಳಿ ಬಂದಾಗ ಮನೆಯಲ್ಲಿ ಕೇವಲ ಕುಶಾಲ್ ಮತ್ತು ಶಿಲ್ಪಾ ಅವರಿಬ್ಬರೇ ಇದ್ದರು. ಜಯಲಕ್ಷ್ಮೀ ಇರಲಿಲ್ಲ. ಎಲ್ಲ ಕಡೆಗೆ ಹುಡುಕಾಡಿದರೂ ಸಹ ಆಕೆ ಪತ್ತೆಯಾಗಿಲ್ಲ.
ಈ ಕುರಿತು ವಿದ್ಯಾರ್ಥಿನಿಯ ತಾಯಿಯು ಸ್ಟೇಷನ್ ಬಜಾರ್ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.