ಶಹಾಬಾದ: ಜಾತಿ, ವರ್ಣ, ಮೌಢ್ಯತೆ, ಮೇಲುಕೀಳು ಎಂಬ ಅಸಮಾನತೆ ವಿರುದ್ಧ ಹೋರಾಡಿ ಕಾಯಕ ಸಂಸ್ಕøತಿ ಹುಟ್ಟುಹಾಕಿದದವರು ಶಿವಯೋಗಿ ಸಿದ್ದರಾಮೇಶ್ವರರು ಎಂದು ಎಸ್.ಜಿ.ವರ್ಮಾ ಪ್ರೌಢಶಾಲೆಯ ಮುಖ್ಯಗುರುಗಳಾದ ಮಲ್ಲಿನಾಥ.ಜಿ.ಪಾಟೀಲ ಹೇಳಿದರು.
ಅವರು ರವಿವಾರ ನಗರದ ಶಿಬಿರಕಟ್ಟಾ ಪ್ರದೇಶದಲ್ಲಿ ಭೋವಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಶಿವಶರಣರು ತಮ್ಮ ಕುಲ ಕಾಯಕದ ಮೇಲೆ ವಚನಗಳಲ್ಲಿ ಮಾತನಾಡಿದ್ದಾರೆ. ಸಿದ್ದರಾಮೇಶ್ವರ ದೇವರ ಬಗ್ಗೆ ಅಪಾರ ಭಕ್ತಿಯುಳ್ಳ ಶಿವಭಕ್ತ, ಕರ್ಮಯೋಗಿ. ಅಕ್ಷ ರಜ್ಞಾನದಿಂದ ವಚನ ರಚಿಸುವ ಮೂಲಕ ಜ್ಞಾನಯೋಗಿಗಳಾಗಿದ್ದಾರೆ ಎಂದು ವರ್ಣಿಸಿದರು.
ದುಡಿಯುವವರು ತಿನ್ನುತ್ತಿಲ್ಲ. ತಿನ್ನುವವರು ದುಡಿಯುತ್ತಿಲ್ಲ. ಹೀಗಾಗಿ ಸಿದ್ಧರಾಮೇಶ್ವರ ಅವರು ಕಾಯಕ ಸಿದ್ಧಾಂತ ಪ್ರತಿಪಾದಿಸಿದ್ದಾರೆ. ಇಂತಹವರ ಆಚರಣೆ ಕೇವಲ ಪ್ರಾಯೋಗಿಕವಾಗದೇ ಅವರ ವಚನಗಳನ್ನು ಓದಿ , ಆದರ್ಶ ಪಾಲಿಸಬೇಕಾಗಿದೆ ಎಂದರು.ಶಿವಯೋಗಿ ಸಿದ್ಧರಾಮೇಶ್ವರ ಅವರು ಜಾತಿ ರಹಿತ ಸಾಮಾಜಿಕ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿದವರು. ನಡವಳಿಕೆಗಳಿಂದ ಶ್ರೇಷ್ಠತೆ ಬರಬೇಕು. ಕೆಲಸದಲ್ಲಿ ದೇವರನ್ನು ಕಾಣಬೇಕೆಂದರು.
ಶಿಕ್ಷಕ ಭಗವಾನ ದಂಡಗುಲಕರ್ ಮಾತನಾಡಿ, ಸಿದ್ಧರಾಮೇಶ್ವರ ತತ್ವಗಳನ್ನು ನಿತ್ಯ ಜೀವನದಲ್ಲಿ ಪಾಲಿಸುವ ಮೂಲಕ ಸುಂದರ ಸಮಾಜದ ನಿರ್ಮಾಣದಲ್ಲಿ ಮುಂದಾಗಬೇಕೆಂದು ಹೇಳಿದರು.
ಭೋವಿ ಸಮಾಜದ ಅಧ್ಯಕ್ಷ ರಾಜು ಮೇಸ್ತ್ರಿ, ಹಿರಿಯರಾದ ಬಾಬು ಪವಾರ್, ಕನಕಪ್ಪ ದಂಡಗುಲಕರ,ಮಲ್ಲಿಕಾರ್ಜುನ್ ಚಂದನಕೆರಿ, ಶ್ರೀಶೈಲಪ್ಪ ಬೆಳಮಗಿ,ಅಪ್ಪಾಸಾಬ ಹುಗ್ಗಿ, ಬಸವರಾಜ ದಂಡಗುಲಕರ, ಹಣಮಂತ ಯಾಳಗಿ, ರಮೇಶ ಪವಾರ, ಬಾನು ಪವಾರ, ಶ್ಯಾಮ ಕಣಸೂರ, ಯಲಪ್ಪ ಬಾಂಬೆ, ಶಿವು ಯಲ್ಲಪ,ಶಂಕರ ದಂಡಗುಲಕರ, ಶರಣಪ್ಪ ಕೂಡದೂರ. ಶಿವಕುಮಾರ ನಾಟೀಕರ, ಶರಣಗೌಡ ಪಾಟೀಲ್, ಅರುಣ ಜಾಯಿ, ಶಾಂತಪ್ಪ ಹಡಪದ ಸೇರಿದಂತೆ ಭೋವಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.