ಕಲಬುರಗಿ: ಗುಂಜ್ ಬಬಲಾದದ ಮಹಿಳಾ ಸ್ವಸಹಾಯ ಸಂಘಗಳು ಬಹಳಷ್ಟು ಶ್ರದ್ದೆಯಿಂದ ಕಾರ್ಯಮಾಡುತ್ತಿದ್ದು ಅವರಿಗೆ ಒಳ್ಳೆಯ ಭವಿಷ್ಯವಿದೆ ಎಂದು ಆಸ್ಟ್ರೇಲಿಯಾದ ಚಾಲ್ರ್ಸ್ ಸ್ಟುವರ್ಟ್ ವಿಶ್ವವಿದ್ಯಾಲಯದ ಪೆÇ್ರ. ಮನೋಹರ ಪವಾರ ಹೇಳಿದರು.
ಸಿಯುಕೆಯ ಸಮಾಜಕಾರ್ಯ ವಿಭಾಗ ಮತ್ತು ಜಿಲ್ಲಾ ದಿನ ದಯಾಳ್ ಅಂತ್ಯೋದಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಶನ್ ಅಡಿಯಲ್ಲಿ ಆಳಂದ ತಾಲೂಕಿನ ಗುಂಜ್‍ಬಬಲಾದ ಗ್ರಾಮದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳ ಮಾರಾಟವನ್ನು ಉದ್ಘಾಟಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿ, ಈ ಮಹಿಳಾ ಸಂಘಗಳ ಕಾರ್ಯ ನೋಡಿ ತುಂಬಾ ಖುಷಿಯಾಗಿದೆ. ಅವರ ಉತ್ಪನ್ನಗಳು ತುಂಬಾ ಸ್ವಾದಕರ ಮತ್ತು ಗುಣಾತ್ಮಕವಾಗಿವೆ. ಇವು ಮುಂದೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬೇಳೆಯಲಿವೆ. ಇದರಿಂದ ಮಹಿಳೆಯರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ದಿಹೊಂದಲು ಸಹಾಯವಾಗುತ್ತದೆ. ಇದರಿಂದ ಮಹಿಳೆಯರು ಇನ್ನೊಬ್ಬರ ಮೇಲಿನ ಅವಲಂಬನೆಯಿಂದ ಸ್ವತಂತ್ರವಾಗಿ ತಮ್ಮ ಕುಟಂಬಗಳನ್ನು ಮುನ್ನಡೆಸುವ ಶಕ್ತಿ ಪಡೆಯುತ್ತಾರೆ. ಅಲ್ಲದೆ ಮಹಿಳೆಯರು ಕೃಷಿಯಾಧಾರಿತ ಗ್ರಾಮೀಣ ಕುಟುಂಬಗಳಿಗೆ ಮಾರುಕಟ್ಟೆ ಒದಗಿಸಲಿದ್ದಾರೆ.
ಸಿಯುಕೆ ತನ್ನ ವಿದ್ಯಾರ್ಥಿಗಳಿಗೆ ಪಠ್ಯದ ಜೋತೆಗೆ ಗ್ರಾಮೀಣ ಸಮಾಜಗಳ ಆರ್ಥಿಕತೆಯ ಅಧ್ಯಯನಕ್ಕೆ ಅವಕಾಶ ಕಲ್ಪಿಸಿರುವುದು ಅವರ ಕಲಿಕೆಗೆ ತುಂಬಾ ಸಹಕಾರಿಯಾಗಲಿದೆ. ಈ ಜ್ಞಾನ ತರಗತಿಗಳಲ್ಲಿನ ಜ್ಞಾನಕ್ಕಿತಂತ ಉತ್ಕøಷ್ಟವಾಗಿದೆ ಎಂದು ಹೇಳಿದರು. ಅಲ್ಲದೆ ಕಾಯಕ ಮಹಿಳಾ ಸಂಘಕ್ಕೆ ತಮ್ಮ ಕಡೆಯಿಂದ 5000 ರೂ. ದೇಣಿಗೆ ನೀಡಿದರು.
ಇದೇ ಸಂದರ್ಭದಲ್ಲಿ ಸಿಯುಕೆಯ ಸಮಾಜ ಕಾರ್ಯ ವಿಭಾಗದ ಪೆÇ್ರ. ಚನ್ನವೀರ ಆರ್. ಎಂ. ಮಾತನಾಡಿ ಮೈಕ್ರೋ ಪ್ಲಾನಿಂಗ್ ಫೆÇರ್ ವಿಲೇಜ್ ಡೆವೆಲಪ್Àಮೆಂಟ್ ಅಡಿಯಲ್ಲಿ ನಾವು ಗುಂಜ ಬಬಲಾದ ಗ್ರಾಮವನ್ನು ಆಯ್ಕೆಮಾಡಿಕೊಂಡಿದ್ದೇವೆ.
ನಮ್ಮ ವಿದ್ಯಾರ್ಥಿಗಳು ಮತ್ತು ನಮ್ಮ ಶಿಕ್ಷಕರು ಈಗ್ರಾಮದ ಸರ್ವತೋಮುಖ ಅಭಿವೃದ್ದಿಗೆ ಗ್ರಾಮದ ಮಹಿಳಾ ಸಂಘಗಳು, ಗ್ರಾಮ ಪಂಚಾಯತಿ ಮತ್ತು ಜಿಲ್ಲಾ ಪಂಚಾಯತನ ದೀನ್ ದಯಾಳ್ ಅಂತ್ಯೋದಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಶನ್ ಜೊತೆಗೂಡಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಇಲ್ಲಿವರೆಗೆ ಅನೇಕ ಸುತ್ತಿನ ತರಬೇತಿ ಮತ್ತು ಸಭೆಗಳ ನಂತರ ಇಂದು ಮೊಟ್ಟಮೊದಲ ಭಾರಿಗೆ ಮಹಿಳಾ ಸಂಘಗಳು ತಯ್ಯಾರಿಸಿದ ತೊಗರಿಬೆಳೆ, ಗೋಧಿ ಹಿಟ್ಟು, ಖಾರಾಪುಡಿ, ಉಪ್ಪಿನಕಾಯಿ, ಹಪ್ಪಳ (ಪಾಪಡ) ಗಳನ್ನು ಸಿಯುಕೆಯ ಹಾಸ್ಟಲ್ಲಿಗೆ ಮಾರಾಟ ಮತ್ತು ಹಸ್ತಾಂತರ ಮಾಡುತ್ತಿದ್ದೇವೆ.
ಮಂದೆ ಪ್ರತಿ ತಿಂಗಳು 15 ಕ್ವಿಂಟಲ್ ತೊಗರಿಬೆಳೆ, 12 ಕ್ವಿಂಟಲ್ ಗೊಧಿ ಹಿಟ್ಟು 1.2 ಕ್ವಿಂಟಲ್ ಖಾರಾಪುಡಿ, 60 ಕೆಜಿ ಅರಿಸಿಣ, 1 ಕ್ವಿಂಟಲ್ ಉಪ್ಪಿನಕಾಯಿ, 4 ಕ್ವಿಂಟಲ್ ಉದ್ದಿನ ಬೆಳೆ, 2 ಕ್ವಿಂಟಲ್ ಹೆಸರ ಬೆಳೆ, 2 ಕ್ವಿಂಟಲ್ ಕಡಲಿ ಬೆಳೆ, ಹಪ್ಪಳ (ಪಾಪಡ) ದಿನಾಲು 3000, 30 ಕೆಜಿ ಶಾವಿಗೆಯನ್ನು ಖರೀದಿಸಲಿದ್ದಾರೆ. ಇದರಿಂದ 110 ಮಹಿಳೆಯರಿಗೆ ದಿನನಿತ್ಯ ಉದೋಗ ದೊರೆಯಲಿದೆ. ಮುಂದಿನ ದಿನಗಳಲ್ಲಿ ಸಿಯುಕೆಯ ಎಂ. ಬಿ. ಎ ವಿಭಾಗದೊಂದಿಗೆ ಕೂಡಿ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಈ ಉತ್ಪನ್ನಗಳ ಮಾರಾಟ ಮಾಡಲಾಗುವುದು ಎಂದು ಹೇಳಿದರು.
ಗ್ರಾಮದ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ನಿಂಗಪ್ಪ ಮಾತನಾಡಿದರು. ಸಿಯುಕೆ ಹಾಸ್ಟೆಲ್ ವ್ಯವಸ್ತಾಪಕ ಧನರಾಜ ತೊಮರ, ಗುತ್ತಿಗೆದಾರ ಸಾಕೇತ ಜೈನರ ಪರವಾಗಿ ಎಲ್ಲಾ ಉತ್ಪನ್ನಗಳನ್ನು ಸ್ವಿಕರಿಸಿದರು. ಅವುಗಳ ಗುಣಮಟ್ಟ ತುಂಬಾ ಚೆನ್ನಾಗಿದ್ದು ಮುಂದೆ ಅಗತ್ಯವಿರುವಷ್ಟು ಖರಿದಿಸಲಾಗುವುದು ಎಂದರು. ಕಾಯಕ ಮಹಿಳಾ ಸಂಘದ ಆದ್ಯಕ್ಷೆ ನಂದಾದೇವಿ ಹಾಗೂ ಇತರ 21 ಮಹಿಳಾ ಸ್ವಸಹಾಯ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಜರಿದ್ದರು.