ವಿವೇಕಾನಂದರ ಹೆಸರೇ ರೋಮಾಂಚನ: ನಿರೂಪಮಾ ದೇಸಾಯಿ

0
29

ಕಲಬುರಗಿ: ಸ್ವಾಮಿ ವಿವೇಕಾನಂದ ಅನ್ನುವ ಹೆಸರೇ ಅತ್ಯಂತ ರೋಮಾಂಚನ ವಿದೇಶದಲ್ಲಿ ಭಾರತವನ್ನು ಪ್ರತಿನಿಧಿಸಿ ಸೋದರ ಭಾವವನ್ನು ಮೂಡಿಸಿದವರು ಸ್ವಾಮಿ ವಿವೇಕಾನಂದರು ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿ ನಿರೂಪಮಾ ದೇಸಾಯಿ.

ನಗರದ ಹಳೆಯ ಜೇವರ್ಗಿ ರಸ್ತೆಯಲ್ಲಿರುವ ಅನನ್ಯ ಪದವಿ ಕಾಲೇಜು ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕಲಬುರ್ಗಿ ಜಿಲ್ಲಾ ಘಟಕ ಜಂಟಿಯಾಗಿ ಹಮ್ಮಿಕೊಂಡಿದ್ದ ತಿಂಗಳ ಉಪನ್ಯಾಸ ಮಾಲೆ ಸ್ವಾಮಿ ವಿವೇಕಾನಂದರು ಮತ್ತು ತರುಣ ಭಾರತ ನಮ್ಮ ಕಾರ್ಯಕ್ರಮದ ವಕ್ತಾರರಾಗಿ ಮಾತನಾಡಿದ ಅವರು, ನಮ್ಮ ಮೇಲೆ ನಂಬಿಕೆ ಇರಬೇಕು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿ ಭಾರತ ಮಾತೆಯನ್ನು ತೀರಿಸಬೇಕು ಜೊತೆಗೆ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಓದಿ ತಿಳಿದುಕೊಂಡು ಉನ್ನತ ವಿಚಾರವನ್ನು ಬೆಳೆಸಿಕೊಂಡರೆ ದೇಶವನ್ನು ಕಟ್ಟಲು ಸಾಧ್ಯವಾಗುತ್ತದೆ.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಿಂತಕ ಅಶೋಕ್ ಗುರೂಜಿ ಮಾತನಾಡಿ ನಮ್ಮ ಪ್ರಾಣಕ್ಕಿಂತ ರಾಷ್ಟ್ರ ದೊಡ್ಡದು, ಯುವಕರು ರಾಷ್ಟ್ರದ ಬಗ್ಗೆ ಚಿಂತನೆ ಮಾಡಬೇಕು, ಭಾರತ ನಿರ್ಮಾಣಕ್ಕೆ ನಾವು ಸಮರ್ಪಿತರಾಗಬೇಕು, ದೇಶದ ಬಗ್ಗೆ ನಮಗೆ ಸ್ವಾಭಿಮಾನ ಇರಬೇಕು ಮತ್ತು ಭಾರತೀಯ ಭಾಷೆಗಳನ್ನು ಉಳಿಸಿ ಬೆಳೆಸಿ ಎಂದು ಕರೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅನನ್ಯ ಪದವಿ ಕಾಲೇಜಿನ ಪ್ರಾಂಶುಪಾಲರಾದ ಶರಣು ಪೂಜಾರಿ ಸ್ವಾಮಿ ವಿವೇಕಾನಂದರು ಯುವಕರಿಗೆ ಪ್ರೇರಣೆ, ವಿವೇಕಾನಂದರನ್ನು ಅಧ್ಯಯನ ಮಾಡಿದಾಗ ಭಾರತ ಶಕ್ತಿ ಏನೆಂಬುದು ಅರ್ಥವಾಗುತ್ತದೆ ಎಂದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಸಹ ಪ್ರಾಂತ ಕಾರ್ಯದರ್ಶಿ ಶಿವಶರಣ ಗೋಡ್ರಾಳ ವನದುರ್ಗ, ಜಿಲ್ಲಾಧ್ಯಕ್ಷರಾದ ಸಂಗಮೇಶ್ ಹಿರೇಮಠ್ ಮಾತನಾಡಿದರು.

ಪ್ರಮುಖರಾದ ಖಜಾಂಚಿ ನಾಗಣ್ಣ ಪಾಟೀಲ್, ಸಂಜೀವಕುಮಾರ್ ಫಿರಂಗಿ, ವಿನುತ ಎಸ್ ಜೋಶಿ, ರಾಜಕುಮಾರ, ನಾಗೇಶ್ ಸೇರಿದಂತೆ ಅನನ್ಯ ಕಾಲೇಜ್ ನ ಪ್ರಾಧ್ಯಾಪಕರು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here