ಆಟೋ ನಿಲ್ಲಿಸಲು ಸ್ಥಳಕ್ಕೆ ಆಗ್ರಹ:ಆಟೋ ಚಾಲಕರಿಂದ ರಸ್ತೆ ತಡೆ

0
9

ಸುರಪುರ:ನಗರದ ಬಸ್ ನಿಲ್ದಾಣದ ಬಳಿಯಲ್ಲಿ ಆಟೋಗಳ ನಿಲ್ಲಿಸಲು ಸ್ಥಳ ಕಲ್ಪಿಸುವಂತೆ ಆಗ್ರಹಿಸಿ ಬಸ್ ನಿಲ್ದಾಣದ ಮುಂಭಾಗ ಆಟೋ ಚಾಲಕರು ಐವತ್ತಕ್ಕೂ ಹೆಚ್ಚು ಆಟೋಗಳನ್ನು ರಸ್ತೆಯಲ್ಲಿ ಅಡ್ಡಲಾಗಿ ನಿಲ್ಲಿಸಿ ರಸ್ತೆ ತಡೆ ನಡೆಸಿದರು.

ಈ ಸಂದರ್ಭದಲ್ಲಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ ಆಟೋ ಚಾಲಕರು,ನಮಗೆ ಬಸ್ ನಿಲ್ದಾಣದ ಬಳಿಯಲ್ಲಿ ಆಟೋಗಳ ನಿಲ್ಲಿಸಲು ಸ್ಥಳ ಇಲ್ಲದೆ ನಮಗೆ ತುಂಬಾ ಸಮಸ್ಯೆಯಾಗಿದೆ,ಝಂಡದಕೇರಾ ರಸ್ತೆಯಲ್ಲಿ ಇದುವರೆಗೆ ನಿಲ್ಲಿಸುತ್ತಿದ್ದೆವು,ಆದರೆ ಈಗ ಅಲ್ಲಿಯ ನಿವಾಸಿಗಳು ಆಟೋಗಳ ನಿಲ್ಲಿಸದಂತೆ ವಿರೋಧ ವ್ಯಕ್ತಪಡಿಸುತ್ತಿದ್ದು ಇದರಿಂದ ನಮಗೆ ಆಟೋಗಳ ನಿಲ್ಲಿಸಲು ಜಾಗವಿಲ್ಲದೆ ಸಮಸ್ಯೆ ಪಡುವಂತಾಗಿದೆ,ಕೂಡಲೇ ನಮಗೆ ಸ್ಥಳ ಕಲ್ಪಿಸುವ ವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು.

Contact Your\'s Advertisement; 9902492681

ಸ್ಥಳಕ್ಕೆ ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ,ನಮ್ಮ ಕರ್ನಾಟಕ ಸೇನೆ ಅಧ್ಯಕ್ಷ ವೆಂಕಟೇಶ ನಾಯಕ ಪ್ಯಾಪ್ಲಿ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸಿದರು,ಅಲ್ಲದೆ ಸ್ಥಳಕ್ಕೆ ಪೊಲೀಸ್ ಇನಸ್ಪೇಕ್ಟರ್ ಆನಂದ ವಾಗಮೊಡೆ ಆಗಮಿಸಿ ಝಂಡದಕೇರಾ ನಿವಾಸಿಗಳ ಮನವೊಲಿಸುವ ಪ್ರಯತ್ನ ಮಾಡಿದರು ಅಲ್ಲಿಯ ನಿವಾಸಿಗಳು ಒಪ್ಪದಿದ್ದಾಗ,ತಾತ್ಕಾಲಿಕವಾಗಿ ಆಟೋಗಳನ್ನು ಬಸ್ ನಿಲ್ದಾಣದ ಕಂಪೌಂಡ್ ಬಳಿಯಲ್ಲಿ ನಿಲ್ಲಿಸಿ ನಂತರ ಶಾಸ್ವತ ಸ್ಥಳ ಕಲ್ಪಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ನಿಲ್ಲಿಸಲಾಯಿತು,ಈ ಸಂದರ್ಭದಲ್ಲಿ ಬಸ್ ನಿಲ್ದಾಣದ ಕಂಪೌಂಡ್ ಬಳಿಯಲ್ಲಿನ ಹಣ್ಣು ಮಾರಾಟಗಾರರು ಆಟೋಗಳು ನಿಲ್ಲಿಸುವುದರಿಂದ ತಮ್ಮ ವ್ಯಾಪಾರಕ್ಕೆ ತೊಂದರೆಯಾಗುವುದಾಗಿ ಆಟೋಗಳ ನಿಲ್ಲಿಸಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಝಂಡದಕೇರಾ ಹೋಗುವ ರಸ್ತೆಯಲ್ಲಿ ಆಟೋಗಳು ನಿಲ್ಲಿಸುವುದರಿಂದ ಜನರ ಓಡಾಟ ಬೈಕ್ ಕಾರುಗಳು ಹೋಗಲು ತುಂಬಾ ಸಮಸ್ಯೆಯಾಗುತ್ತಿದೆ,ಮಹಿಳೆಯರು ನಡೆದಾಡಲು ತುಂಬಾ ಸಮಸ್ಯೆಯಾಗುತ್ತಿದೆ,ಯಾವುದೇ ಕಾರಣಕ್ಕೂ ಆಟೋಗಳ ನಿಲ್ಲಿಸಲು ಅವಕಾಶ ನೀಡುವುದಿಲ್ಲ. – ವೆಂಕಟೇಶ ಹೊಸ್ಮನಿ ನಗರಸಭೆ ಮಾಜಿ ಸದಸ್ಯ

ಆಟೋಗಳ ನಿಲ್ಲಿಸಲು ತಾತ್ಕಾಲಿಕ ಸ್ಥಳ ಕಲ್ಪಿಸಲಾಗಿದೆ,ಶೀಘ್ರದಲ್ಲಿ ಶಾಶ್ವತ ಸ್ಥಳ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು,ಆಟೋ ಚಾಲಕರು ಎಲ್ಲರೊಂದಿಗೆ ಹೊಂದಾಣಿಕೆಯಿಂದ ಹೋಗಬೇಕು. – ಆನಂದ ವಾಗಮೊಡೆ ಪಿ.ಐ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here