ಹಿಟ್ ಆಂಡ್ ರನ್ ಕಾನೂನು ರದ್ದತಿಗೆ ಲಾರಿ ಮಾಲೀಕರ ಸಂಘ ಆಗ್ರಹ

0
13

ಸುರಪುರ:ಕೇಂದ್ರ ಸರಕಾರ ಜಾರಿಗೊಳಿಸಲು ಮುಂದಾಗಿರುವ ಹಿಟ್ ಆಂಡ್ ರನ್ ಘಟನೆಯ ಕುರಿತಾದ ಕಾನೂನು ರದ್ದುಗೊಳಿಸಲು ಆಗ್ರಹಿಸಿ ಯಾದಗಿರಿ ಲಾರಿ ಮಾಲಿಕರ ಸಂಘದ ತಾಲೂಕು ಘಟಕದ ಮುಖಂಡರು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ಕೇಂದ್ರ ಸರಕಾರ ಹಿಟ್ ಆಂಡ್ ರನ್ ಘಟನೆ ಸಂದರ್ಭದಲ್ಲಿ ಚಾಲಕನಿಗೆ 7 ಲಕ್ಷ ದಂಡ ಹಾಗೂ 10 ವರ್ಷಗಳ ಜೈಲು ವಾಸದ ಶಿಕ್ಷೆ ನೀಡುವ ಕಾನೂನು ಜಾರಿಗೊಳಿಸಲು ಮುಂದಾಗಿರುವುದು ಚಾಲಕರ ಪಾಲಿಗೆ ಮರಣ ಶಾಸನವಾಗಿದೆ,ಇದರಿಂದ ದೇಶದಲ್ಲಿನ ಎಲ್ಲಾ ಚಾಲಕರು ವೃತ್ತಿಯನ್ನು ನಿಲ್ಲಿಸುವ ಸ್ಥಿತಿ ನಿರ್ಮಾಣವಾಗಿದೆ,ಯಾವುದೇ ಚಾಲಕ ಉದ್ದೇಶಪೂರ್ವಕವಾಗಿ ಅಪಘಾತ ಮಾಡುವುದಿಲ್ಲ,ಸರಕಾರ ಇದನ್ನು ಅರ್ಥ ಮಾಡಿಕೊಳ್ಳದೆ ಇಂತಹ ಕಠಿಣ ಕಾನೂನು ಜಾರಿಗೊಳಿಸಲು ಮುಂದಾಗಿ ಚಾಲಕರ ಬದುಕನ್ನೆ ಮೂರಾಬಟ್ಟೆ ಮಾಡುತ್ತಿದೆ,ಕೂಡಲೇ ಕಾನೂನು ರದ್ದುಗೊಳಿಸಬೇಕು ಇಲ್ಲವಾದಲ್ಲಿ ಮತ್ತಷ್ಟು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

Contact Your\'s Advertisement; 9902492681

ನಂತರ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರಕಾರಕ್ಕೆ ಬರೆದ ಮನವಿಯನ್ನು ತಹಸೀಲ್ದಾರ್ ಕೆ.ವಿಜಯಕುಮಾರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ಅಬ್ದುಲ್ ಖಾದರ್ ಸೌದಾಗರ್, ಮುಖಂಡರಾದ ಮಂಜುನಾಥ ಧರಣಿ,ಸಾಹೇಬಗೌಡ ಕುಂಬಾರ,ರಂಗನಾಥ ಶಹಾಪುರಕರ್,ಸಂತೋಷ ಬಡಿಗೇರ,ಯಲ್ಲೇಶ ನಾಯಕ,ವಿಶ್ವನಾಥ ಕೊಡೇಕಲ್,ವಿನೋದ ಆವಂಟಿ,ಕಾಶಿಮ ಶಾರದಳ್ಳಿ,ದಾವುದ್ ಪಠಾಣ್, ಪ್ರವೀಣ ಲಕ್ಷ್ಮೀಪುರ,ಆನಂದ ಸಿದ್ದಾಪುರ,ಬಸವರಾಜ ಬುದ್ದಿನ್,ಯಲ್ಲಪ್ಪ ಹುಜರತಿ,ರಾಘು ಹುಜರತಿ,ಪಿಡ್ಡಪ್ಪ ಹಳಿಸಗರ,ಬಾಲುಗೌಡ,ಅವಿನಾಶ,ಶೇಖರಣ್ಣ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here