ಅಫಜಲಪುರ: ಮಣ್ಣೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಮನಗರದ ಶಾಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮಣ್ಣೂರ ವತಿಯಿಂದ ರಾಷ್ಟ್ರೀಯ ಆನೆಕಾಲು ರೋಗ ನಿಯಂತ್ರಣ ತ್ರಿವಳಿ ಮಾತ್ರೆ ನುಂಗಿಸುವ ಕಾರ್ಯಕ್ರಮಕ್ಕೆ ರಾಮನಗರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬೌರಮ್ಮಕಂಬಾರ ರವರು ಮಕ್ಕಳಿಗೆ ಮಾತ್ರೆ ನುಂಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿ ಆರೋಗ್ಯ ಇಲಾಖೆಯು ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಾರೆ ಆರೋಗ್ಯ ಇಲಾಖೆಯ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುವಂತಹದು. ಮಣ್ಣೂರ ಗ್ರಾಮದ ಜನರಿಗೆ ಹಾಗೂ ಶಾಲೆಯ ಮಕ್ಕಳಿಗೆ ಅರಿವು ಮೂಡಿಸುವ ಜವಾಬ್ದಾರಿ ಹೊತ್ತು ಗ್ರಾಮದಲ್ಲಿ ಯಾವುದೇ ಕಾಯಿಲೆ , ರೋಗ ರುಜಿನ ಬರದಂತೆ ನೋಡಿಕೊಳ್ಳುತ್ತಿದ್ದರೆ. ಈ ಅನೆ ಕಾಲು ರೋಗವು ಜನರಿಗೆ ಬರಬರದು ಇದಕ್ಕೆ ಸಾಮೂಹಿಕ ಔಷಧಿ ಸೇವನೆ ಕಾರ್ಯಕ್ರಮದಲ್ಲಿ ಎಲ್ಲರೂ ಕಡ್ಡಾಯವಾಗಿ ಮಾತ್ರೆಗಳನ್ನು ವಿದ್ಯಾರ್ಥಿಗಳು ಸೇವಿಸಬೇಕು ಎಂದು ಕರೆ ನೀಡಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ವಿಠ್ಠಲ ಬಡಿಗೇರ, ಅವರು ವಿದ್ಯಾರ್ಥಿಗಳಿಗೆ
ಈ ರೋಗ ಶೂನ್ಯಕ್ಕೆ ತರಲು ಮಣ್ಣೂರ ಗ್ರಾಮದ ಪ್ರತಿಯೊಬ್ಬರೂ ಆನೆ ಕಾಲು ರೋಗ ಮುಕ್ತ ತಾಲ್ಲೂಕು ಮತ್ತು ಗ್ರಾಮಗಳು ಮಾಡಲು , ಆನೆ ಕಾಲು ನಿವಾರಣೆ ಮಾತ್ರೆಗಳನ್ನು ಮಕ್ಕಳು ಸೇವಿಸುಬೇಕು , ರೋಗ ಹರಡದಂತೆ ಮುಂಜಾಗ್ರತಾ ವಹಿಸಲು ಮನೆಯ ಸುತ್ತಮುತ್ತ ಹಾಗೆ ಶಾಲೆಯ ಸುತ್ತ ಮುತ್ತ ಪರಿಸರ ಸ್ವಚ್ಚತಾ ವಹಿಸುವ ಕುರಿತಾಗಿ ಅರಿವು ಮೂಡಿಸಿದರು.
ಗ್ರಾಮ ಪಂಚಾಯತಿ ಕಾರ್ಯದರ್ಶಿ ಗುರಣ್ಣ, ಶಾಲಾ ಮುಖ್ಯ ಶಿಕ್ಷಕರು ನಿಂಗಪ್ಪ ಪೂಜಾರಿ, ಅಂಗನವಾಡಿ ಕಾರ್ಯಕರ್ತೆ ವಿಜಯಲಕ್ಷ್ಮಿ, ಆಶಾ ಕಾರ್ಯಕರ್ತೆ ಮಹಾನಂದಾ, ಶಾಲೆಯ ಮಕ್ಕಳು ಇತರರು ಇದ್ದರು.