ವಿದ್ಯಾರ್ಥಿಗಳು ಜ್ಞಾನದಾಹಿಗಳಾಗಬೇಕು: ಪ್ರೊ. ಕನಹಳ್ಳಿ

0
32

ಕಲಬುರಗಿ: ವಿದ್ಯಾರ್ಥಿಗಳು ಜ್ಞಾನ ದಾಹಿಗಳಾಗಬೇಕು. ಹಾಗೆ ಆಗುವಲ್ಲಿ ಬುದ್ಧ, ಬಸವ ಅಂಬೇಡ್ಕರ್ ಹಾಗೂ ಗಾಂಧೀಜಿಯವರ ತತ್ವಗಗಳನ್ನು ಬುದುಕಿನ ಭಾಗವಾಗಿಸಿಕೊಳ್ಳಬೇಕೆಂದು ಪ್ರೊ. ಬಿ.ಎಂ. ಕನಹಳ್ಳಿಯವರು ಅಭಿಪ್ರಾಯಪಟ್ಟರು. ದಿನಾಂಕ ೦೬.೦೯.೨೦೧೯ರಂದು ಗುಲಬರ್ಗಾ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಹಮ್ಮಿಕೊಂಡ ಶಿಕ್ಷಕ ದಿನಾಚರಣೆಯಲ್ಲಿ ಭಾಗವಹಿಸಿ ಮಾತಾಡುತ್ತಾ, ಮುಂದುವರೆದು ಯಾವುದಾದರು ದೇಶ ಬೆಳೆದಿದೆ ಎಂದರೆ ಅಲ್ಲಿಯ ಶಿಕ್ಷಣ ಉತ್ತಮವಾಗಿದೆ ಎಂದರ್ಥ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ. ಎಸ್.ಜಿ. ಡೊಳ್ಳೆಗೌಡರು ವಿದ್ಯಾರ್ಥಿಗಳು ಸತತ ಅಧ್ಯಯನ ಸಂಶೋಧನೆ ಮೂಲಕ ಬದುಕನ್ನು ರೂಪಿಸಿಕೊಳ್ಳಬೇಕು. ಆ ಮೂಲಕ ದೇಶದ ಬೆಳವಣಿಗೆಗೆ ಶ್ರಮಿಸಬೇಕೆಂದು ಅಭಿಪ್ರಾಯಪಟ್ಟರು. ಓದು ಬರೆಹ ಬರುವುದು ಅಧ್ಯಯನದಿಂದ, ಅಧ್ಯಯನ ಅನ್ನುವುದು ತಪ್ಪಸ್ಸು ಯಾರು ಮಾಡುತ್ತಾರೊ ಅವರು ಅಂಬೇಡ್ಕರ್ ಅವರಂತೆ, ಸರ್ವಪಲ್ಲಿ ರಾಧಾಕೃಷ್ಣರಂತೆ, ಗಾಂಧೀಜಿಯಂತೆ ಹೆಸರುಗಳಿಸಲು ಸಾಧ್ಯವಿದೆ ಎಂದು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಎಚ್.ಟಿ. ಪೋತೆ ಅಭಿಪ್ರಾಯಪಟ್ಟರು. ಮುಂದುವರೆದು ಮಾತನಾಡುತ್ತ ಹೈದ್ರಾಬಾದ ಕರ್ನಾಟಕ ಪ್ರದೇಶವು ಶರಣರು, ದಾಸರು, ತತ್ವಪದಕಾರರ ನೆಲೆ ಬೀಡಾಗಿದೆ. ಹೀಗಾಗಿ ವಿಜ್ಞಾನದ ವಿದ್ಯಾರ್ಥಿಗಳು ಇವುಗಳನ್ನು ಮನನ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

Contact Your\'s Advertisement; 9902492681

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಪ್ರೊ. ಜಿ.ಎಂ. ವಿದ್ಯಾಸಾಗರ ಅವರು ಜಗತ್ತಿನಲ್ಲಿ ಮೊಟ್ಟ ಮೊದಲು ವಿಶ್ವವಿದ್ಯಾಲಯ ಸ್ಥಾಪಿಸಿದವರು. ಆದರೆ ಭಾರತೀಯರು ಸಾಮಾಜಿಕ ನೆಲೆಯಲ್ಲಿ ಜಾತಿ ಕಾರಣಕ್ಕೆ ಕಲಹದಲ್ಲಿ ತೊಡಗಿದ್ದೇವೆ, ಇದರಿಂದ ಹೊರಬಂದಾಗ ಮಾತ್ರ ಸಮಾಜ ಮುಂದೆ ಬರಲು ಸಾಧ್ಯವಿದೆ ಎಂದು ಹೇಳಿದರು.

ಸಭೆಯಲ್ಲಿ ಅತಿಥಿ ಉಪನ್ಯಾಸಕರು, ಸಂಶೋಧನ, ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಂಜಲಿ ಜಿ.ಡಿ. ಸ್ವಾಗತಿಸಿ ನಿರ್ವವಹಿಸಿದರು, ನಿಕತ್ ಆಫ್ರಿನ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here