ಜೇವರ್ಗಿ: ಅಧಿಕಾರಿಗಳು ಗ್ರಾಮಕ್ಕೆˌ ಗ್ರಾಮಸ್ಥರು ಹೊಲಕ್ಕೆ

0
76

ಜೇವರ್ಗಿ: ತಾಲೂಕಿನ ಹಂಗರಗಾ(ಕೆ) ಗ್ರಾಮದಲ್ಲಿ ಇಂದು ನಡೆದ ಹೊಬಳಿ ಮಟ್ಟದ ಜನಸ್ಪಂದನ ಸಭೆಗೆ ಗ್ರಾಮಸ್ಥರಿಗೆ ಮಾಹಿತಿ ನೀಡದೆ ಇರೋದಕ್ಕೆ ಗ್ರಾಮಸ್ಥರು ಆಕ್ರೋಶ ವ್ಶಕ್ತಪಡಿಸಿದರು.

ಇತ್ತ ಅಧಿಕಾರಿಗಳು ಗ್ರಾಮಕ್ಕೆ ಬರುವ ಮೊದಲೇ ಗ್ರಾಮಸ್ಥರು ಹೊಲಗದ್ದೆಗಳಿಗೆ ಹೋಗಿದ್ದಾರೆ. ಇದು ಯಾವ ಪುರುಷಾರ್ಥಕ್ಕಾಗಿ ಗ್ರಾಮಸಭೆ ಅನ್ನುವುದು ಅರ್ಥವಾಗುತ್ತಿಲ್ಲ. ಗ್ರಾಮದ ಜನರು ಬಹುದಿನಗಳಿಂದ ಹಲವು ಸಮಸ್ಶೆಗಳನ್ನು ಎದುರಿಸುತ್ತಿದ್ದಾರೆ.

Contact Your\'s Advertisement; 9902492681

ಹಂಗರಗಾ(ಕೆ) ಗ್ರಾಮದಿಂದ ಶಿವಪುರಕ್ಕೆ ಹೋಗುವ ರಸ್ತೆ ಹದಗೆಟ್ಟು ಹೋಗಿದೆ. ಶಾಲಾ ಕೋಣಿಗಳಿಗೆ ಮೇಲ್ಛಾವಣೆ ಇಲ್ಲ. ಭೀಕರವಾದ ಕುಡಿಯುವ ನೀರಿನ ಸಮಸ್ಶೆ ಇದೆ. ಚರಂಡಿ ವ್ಶವಸ್ಥೆ ಇಲ್ಲ. ಗ್ರಾಮದಲ್ಲಿರುವ ಕೆರೆಯ ಜಾಗ ಮುಚ್ಚಿ ಹೋಗಿದೆ. ಗ್ರಾಮದ ವ್ರದ್ಧರಿಗೆ ಸಂಧ್ಶಾಸುರಕ್ಷೆˌ ವಿಧವಾ ವೇತನˌ ಅಂಗವಿಕಲರಿಗೆ ಮಾಸಾಶನ ಸೇರಿದಂತೆ ಹಲವು ಸಮಸ್ಶೆಗಳಿವೆ. ಇವುಗಳೆಲ್ಲವೂ ಇಡೇರಿಸಬೇಕಾದˌ ಅಧಿಕಾರಿಗಳು ಗ್ರಾಮಸ್ಥರಿಗೆ ಮಾಹಿತಿಯೇ ನೀಡಿಲ್ಲ. ಕಾಟಾಚಾರಕ್ಕೆ ಜನಸ್ಪಂದನ ಸಭೆ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here