ಭಾರತದ ಪ್ರಗತಿಗೆ ಸಂವಿಧಾನವೆ ತಳಹದಿ; ಪ್ರಿಯಾಂಕ್ ಖರ್ಗೆ

0
12

ಕಲಬುರಗಿ; ಭಾರತ ವೈವಿಧ್ಯಮಯ ಸಂಸ್ಕøತಿಗಳ ತವರೂರು. ಹಲವು ಧರ್ಮಗಳ ಗೂಡು. ಪ್ರದೇಶದಿಂದ ಪ್ರದೇಶಕ್ಕೆ ಭಾಷೆ, ಆಚಾರ-ವಿಚಾರ, ಉಡುಗೆ-ತೊಡುಗೆ ವಿಭಿನ್ನವಾದರು ಸದೃಢವಾಗಿ ಭಾರತ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ ಎಂದರೆ ಅದಕ್ಕೆ ಸಂವಿಧಾನವೇ ಮೂಲ ತಳಹದಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಶುಕ್ರವಾರ ಕಲಬುರಗಿ ನಗರದ ಪೆÇಲೀಸ್ ಪರೇಡ್ ಮೈದಾನದಲ್ಲಿ 75ನೇ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರಧ್ಚಜಾರೋಹಣ ನೆರವೇರಿಸಿದ ನಂತರ ವಿವಿಧ 16 ತುಕಡಿಗಳಿಂದ ಗೌರವ ವಂದನೆ ಸ್ಚೀಕರಿಸಿ ಮಾತನಾಡಿದರು.

Contact Your\'s Advertisement; 9902492681

ದೇಶದಲ್ಲಿ ಹಲವಾರು ಜಾತಿ, ಉಪ ಜಾತಿಗಳಿವೆ. ವಿವಿಧ ಧರ್ಮಗಳನ್ನು ಇಲ್ಲಿ ಕಾಣಬಹುದಾಗಿದೆ. ಇದರ ನಡುವೆ ನಾವೆಲ್ಲರು ಭಾರತೀಯರೆಂದು ಒಗ್ಗೂಡಿಸುವುತ್ತಿರುವುದು ಪರಮೋಚ್ಛ ಗ್ರಂಥ ಸಂವಿಧಾನ ಎಂಬುದನ್ನು ಯಾರು ಮರೆಯಬಾರದು. ಇಂತಹ ಶ್ರೇಷ್ಠ ಸಂವಿಧಾನ ನೀಡಿದ ಅಂಬೇಡ್ಕರ್ ನಮ್ಮ ನಡುವೆ ಚಿರಸ್ಥಾಯಿಯಾಗಿದ್ದಾರೆ ಎಂದು ಸಂವಿಧಾನ ಶಿಲ್ಪಿಯನ್ನು ಸ್ಮರಿಸಿದರು.

ಭಾರತದ ಸಂವಿಧಾನ ಲೀವಿಂಗ್ ಡಾಕ್ಯೂಮೆಂಟ್ ಇದ್ದಂತೆ. ಇದನ್ನು ಕಾಲ ಕಾಲಕ್ಕೆ ದೇಶದ ಜನರ ಏಳಿಗೆಗಾಗಿ ತಿದ್ದುಪಡಿ ಮಾಡಬೇಕೆಂದು ಅಂಬೇಡ್ಕರ್ ಅವರ ಆಶಯವಾಗಿತ್ತು. ಇದರ ಫಲವೆ ಕಲ್ಯಾಣ ಕರ್ನಾಟಕ ಭಾಗಕ್ಕೆ 371ಜೆ ಕಾಯ್ದೆ ಜಾರಿಗೆ ಬಂದಿದ್ದು. ಮುಂದಿನ ಆಗು ಹೋಗುಗಳ ಬಗ್ಗೆಯೂ ಅರಿತಿದ್ದ ಅಂಬೇಡ್ಕರ್ ಅವರು, ತುಂಬಾ ದೂರದೃಷ್ಠಿಯಿಂದಲೆ ದೇಶಕ್ಕೆ ಒಗ್ಗೂವ ದೃಢವಾದ ಸಂವಿಧಾನ ನೀಡಿದ್ದಾರೆ. 75 ವರ್ಷವಾದರು ಈ ದೇಶವನ್ನು ಯಾರಿಂದಲು ಅಲುಗಾಡಿಸಲು ಸಾಧ್ಯವಿಲ್ಲ ಎಂದರೆ ಅದು ಸಂವಿಧಾನದ ಶಕ್ತಿ ಎಂತದ್ದು ಎಂಬುದನ್ನು ತಿಳಿಯಬೇಕಿದೆ ಎಂದರು.

ಭಾರತಕ್ಕೆ ಸ್ವಾತಂತ್ಯ ಮತ್ತು ಗಣರಾಜ್ಯ ದಿನಾಚರಣೆ ತುಂಬಾ ಮಹತ್ವದ ದಿನಾಗಳಾಗಿವೆ. 1947ರಲ್ಲಿ ಸ್ವಾತಂತ್ಯ ಪಡೆದ ನಂತರ ಪಾಕಿಸ್ತಾನ ಇಬ್ಭಾಗವಾದಾಗ ಕೋಮು ಗಲಭೆ, ಸಂಪನ್ಮೂಲ ಹಂಚಿಕೆ, ಆಹಾರ ಸಮಸ್ಯೆ ಹೇಳತೀರದಾಗಿತ್ತು. ಇದರ ನಡುವೆ ಸರ್ವರು ಸಮಾನತೆಯಿಂದ, ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುವ ಮತ್ತು ದೇಶ ಮುನ್ನಡೆಸುವ ಹಾಗೂ ಎಲ್ಲರು ಒಪ್ಪುವ ಸಂವಿಧಾನ ಅವಶ್ಯಕತೆವಿತ್ತು. ಆ ಸಂದರ್ಭದಲ್ಲಿ ದೇಶದ ಶ್ರೇಷ್ಠ ಆರ್ಥಿಕ ಮತ್ತು ಕಾನೂನು ತಜ್ಞರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ಕರಡು ಸಮಿತಿ ರಚಿಸಲಾಯಿತು. ಈ ಸಮಿತಿ 141 ದಿನ ಸಮಗ್ರ ಅಧ್ಯಯನ ಮಾಡಿ ಮೊದಲ ಹಂತದ ಕರಡನ್ನು ಕಾನ್ಸಿಟಿಟ್ಯೂಟ್ ಅಸೆಂಬ್ಲಿಗೆ ಸಲ್ಲಿಸಿತ್ತು. ತದನಂತರ ಕಾನ್ಸಿಟಿಟ್ಯೂಟ್ ಅಸೆಂಬ್ಲಿಯಲ್ಲಿ ಇದರ ಪ್ರತಿಯೊಂದು ಅಧ್ಯಾಯ, ಆರ್ಟಿಕಲ್ ಬಗ್ಗೆ 2 ವರ್ಷ 11 ತಿಂಗಳು ಸುಧೀರ್ಘ ಚರ್ಚೆಯಾಗಿ ಸರ್ವ ಸಮ್ಮತಿಯಿಂದ ಒಪ್ಪಿಗೆ ಪಡೆದ ಸಂವಿಧಾನ ನಮ್ಮದಾಗಿದೆ ಎಂದರು.

ಬುದ್ದ, ಬಸವಣ್ಣನವರ ಸಮಾನತೆ, ಸಾಮಾಜಿಕ ನ್ಯಾಯದ ತತ್ವದಲ್ಲಿ ನಮ್ಮ ಸರ್ಕಾರ ಸಾಗಿದೆ. ಸಂವಿಧಾನ ಅಂಗೀಕಾರಗೊಂಡು 75 ವರ್ಷ ಪೂರ್ಣಗೊಂಡ ಅಮೃತ ಮಹೋತ್ಸವದ ಸಂಭ್ರಮದ ಈ ಸಂದರ್ಭದಲ್ಲಿ ಇಂತಹ ಶ್ರೇಷ್ಠ ಸಂವಿಧಾನ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಇಂದಿನಿಂದ ಫೆಬ್ರವರಿ 23ರ ವರೆಗೆ ಜಿಲ್ಲೆಯದ್ಯಾಂತ ಎರಡು ಸ್ತಬ್ಧಚಿತ್ರಗಳ ಒಳಗೊಂಡ ಸಂವಿಧಾನ ಜಾಗೃತಿ ಜಾಥಕ್ಕೆ ಚಾಲನೆ ನೀಡಲಾಗುತ್ತಿದೆ. ಜಿಲ್ಲೆಯ 261 ಗ್ರಾಮ ಪಂಚಾಯತಿ ಮತ್ತು ನಗರ ಪಟ್ಟಣ ಪ್ರದೇಶದಲ್ಲಿ ಸಂಚರಿಸಿ “ಸಂವಿಧಾನ” ಪೀಠಿಕೆ ಮತ್ತು ಅದರ ಮೂಲ ಆಶಯಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಿದೆ ಎಂದರು.

ಭಕ್ತಿ, ಸಾಹಿತ್ಯ ಹಾಗೂ ಸಾಮಾಜಿಕ ಕಲ್ಯಾಣವನ್ನು ಜತೆಯಾಗಿ ಬೆಸೆದ ಜಗತ್ತಿನ ಅತ್ಯಪೂರ್ವ ಚಳುವಳಿಯೊಂದು ರೂಪಗೊಂಡು 12ನೇ ಶತಮಾನದಲ್ಲಿ ಯಶಸ್ವಿಯಾಗಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ನೆಲ ಇದಾಗಿದೆ. ಸರ್ವರವನ್ನು ಸಮಾನತೆಯಾಗಿ ಕಾಣಲು ಅಂದೇ ಬಸವಣ್ಣನವರು ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವವನ್ನು ಸಾರಿದ್ದನ್ನು ಯಾರು ಮರೆಯಲು ಸಾಧ್ಯವಿಲ್ಲ. ಇಂತಹ ಮಹಾನ್ ಮಾನವತಾವಾದಿ ಬಸವಣ್ಣನವರನ್ನು ನಮ್ಮ ಸರ್ಕಾರ ಕರ್ನಾಟಕದ ಸಾಂಸ್ಕøತಿಕ ನಾಯಕ ಎಂದು ಘೋಷಣೆ ಮಾಡಿದ್ದು, ಸಮಾಜ ಸುಧಾರಕನಿಗೆ ನೀಡಿದ ಗೌರವ ಎಂದು ಭಾವಿಸಿದ್ದೇನೆ ಎಂದರು.

ವಿಚಾರ ಭಿನ್ನವಾದರೆ ದೇಶ ದ್ರೋಹಿಗಳಾ?: ಇತ್ತೀಚೆಗೆ ದೇಶದಲ್ಲಿ ದೇಶ ದ್ರೋಹಿ ಪದ ಹೆಚ್ಚಾಗಿ ಬಳಕೆಯಾಗುತ್ತಿದೆ. ಸಂವಿದಾನದಲ್ಲಿ ಸರ್ವರಿಗೂ ಸಮಾನತೆ ಕಲ್ಪಿಸಿದೆ. ಜಾತಿ, ಲಿಂಗ, ವರ್ಣ ತಾರತಮ್ಯ ಇಲ್ಲದೆ ಎಲ್ಲರಿಗೂ ಮುಕ್ತವಾಗಿ ಬದುಕಲು, ಇಷ್ಟದ ಆಹಾರ ಸೇವಿಸಲು ಅವಕಾಶವಿದೆ. ಮುಕ್ತ ವಾಕ್ ಸ್ವಾತಂತ್ರ್ಯವಿದೆ. ಹೀಗಿರುವಾಗ ಒಬ್ಬರ ಅಭಿಪ್ರಾಯಕ್ಕೆ ಇನೊಬ್ಬರು ಸಹಮತಿ ವ್ಯಕ್ತಪಡಿಸದಿದ್ದರೆ ಅದನ್ನು ದೇಶ ದ್ರೋಹಿಗಳಂತೆ ಬಿಂಬಿಸಲಾಗುತ್ತಿರುವುದು ತುಂಬಾ ಆತಂಕದ ವಿಷಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವಿದ್ದೇವೆ ಎಂಬುದನ್ನು ಯಾರು ಮರೆಯಬಾರದು. ಇಲ್ಲಿ ಎಲ್ಲರು ತಮ್ಮ ವಿಚಾರಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು, ವಿಭಿನ್ನ ವಿಚಾರ ಪ್ರಸ್ತಾಪಕ್ಕೆ ಅವಕಾಶ ಇದೆ. ಜಾತಿ, ಧರ್ಮ ವಿರೋಧಿಸುವರೆ ನಿಜವಾದ ದೇಶದ್ರೋಹಿಗಳು ಎಂದು ಸಂವಿಧಾನ ಸಮರ್ಪಣ ಸಂದರ್ಭದಲ್ಲಿ ಅಂಬೇಡ್ಕರ್ ಹೇಳಿದ್ದಾರೆ ಎಂದ ಸಚಿವ ಪ್ರಿಯಾಂಕ್ ಖರ್ಗೆ ಅವರು, ನಮ್ಮ ಬದುಕಿ ಕಟ್ಟಿಕೊಟ್ಟಂತಹ ಇಂತಹ ಸಂವಿಧಾನ ಸಂರಕ್ಷಣೆ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಸಾಧಕರಿಗೆ ಸನ್ಮಾನ: ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಕೃಷಿ ಪ್ರಶಸ್ತಿಗೆ ಭಾಜನರಾದ ಜಿಲ್ಲೆಯ ರೈತರಾದ ಶ್ರೀನಿವಾಸರೆಡ್ಡಿ ವೀರಾರೆಡ್ಡಿ, ಸೋಮಣ್ಣ ಮಲ್ಕಪ್ಪ ಬೊಮ್ಮನಳ್ಳಿ, ಶರಣಪ್ಪ ತಿಪ್ಪಣ್ಣ, ರೈತ ಮಹಿಳೆಯರಾದ ಪದ್ಮಾವತಿ ರಘುನಾಥ ರೆಡ್ಡಿ ಹಾಗೂ ನರಸಮ್ಮ ಹಣಮಂತ ಮತ್ತು ರಾಜ್ಯ ಮಟ್ಟದ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿ ಪಡೆದ ಸುಧಾಕರ ಪಾಟೀಲ ಮತ್ತು ಸುಜಾತಾ ಶರಣಬಸಪ್ಪ ಪಾಟೀಲ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸನ್ಮಾನಿಸಿದರು.

ಇದಲ್ಲದೆ ಪ್ಯಾರಾ ಒಲಂಪಿಕ್ಸ್‍ನಲ್ಲಿ ಜಾವಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆದ್ದ ಕು.ರಮೇಶ, ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೇಯಲ್ಲಿ ಕಂಚಿನ ಪದಕ ವಿಜೇತೆ ಶ್ವೇತಾ ಎಸ್. ತಾಂಡೂರಕರ್, ಯುವ ವಿಜ್ಞಾನಿ ಎಂದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕು.ಶ್ರದ್ಧಾ ಕಾಳೂರ, ಭವಾನಿ ಅಷ್ಟಗಿ ಹಾಗೂ ಆಯಿಷ್ ತಹರೀನ್ ಮಕ್ಕಳನ್ನು ಸಚಿವರು ಸನ್ಮಾನಿಸಿ ಶುಭ ಕೋರಿದರು.

ಆರ್.ಬಿ.ಎಸ್.ಕೆ. ತಂಡಕ್ಕೆ ಲ್ಯಾಪಟಾಪ್ ವಿತರಣೆ: ಶಾಲಾ ಶಿಕ್ಷಣ ಇಲಾಖೆಯಿಂದ ರಾಷ್ಟ್ರೀಯ ಬಾಲ ಸ್ವಾಸ್ತ್ಯ ಕಾರ್ಯಕ್ರಮ (ಆರ್.ಬಿ.ಎಸ್.ಕೆ) ಪರಿಣಾಮಕಾರಿ ಅನುಷ್ಠಾನಕ್ಕೆ ರಾಜ್ಯ ಮಕ್ಕಳ ಕಲ್ಯಾಣ ನಿಧಿಯಿಂದ 15.80 ಲಕ್ಷ ರೂ. ವೆಚ್ಚದಲ್ಲಿ ಜಿಲ್ಲೆಯ 20 ಆರ್.ಬಿ.ಎಸ್.ಕೆ. ವೈದ್ಯಾಧಿಕಾರಿಗಳ ತಂಡಕ್ಕೆ ತಲಾ ಒಂದು ಲ್ಯಾಪಟಾಪ್, ರಿಪ್ರ್ಯಾಕ್ಸನ್ ಕಿಟ್, ಮೋಬೈಲ್ ಹೆಲ್ತ್ ಕಿಟ್‍ಗಳನ್ನು ಸಚಿವರು ವೈದ್ಯರಿಗೆ ವಿತರಿಸಿದರು.

ಸಾಂಸ್ಕೃತಿಕ ಮೆರಗು: ಗಣರಾಜ್ಯೋತ್ಸವ ಅಂಗವಾಗಿ ಶಾಲಾ ಶಿಕ್ಷಣ ಇಲಾಖೆಯಿಂದ ಕಸ್ತೂರಬಾ ಗಾಂಧಿ ಬಾಲಕೀಯರ ವಿದ್ಯಾಲಯ, ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆ, ಫರಾನ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಎಸ್.ಬಿ.ಆರ್. ಪಬ್ಲಿಕ್ ಶಾಲೆ ಮಕ್ಕಳಿಂದ ದೇಶ ಭಕ್ತಿಯ ಸಮೂಹ ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದ ಹಲವು ಕಲಾ ತಂಡಗಳಿಂದ ವಿವಿಧ ಕಲಾ ಪ್ರದರ್ಶನವು ಸಭಿಕರನ್ನು ಸೆಳೆಯಿತು. ವಿವಿಧ ಇಲಾಖೆಯ ಪಂಚ ಗ್ಯಾರಂಟಿ ಯೋಜನೆಗಳು ಮತ್ತು ಸಂವಿಧಾನ ಜಾಗೃತಿ ಕುರಿತು ಸ್ಥಬ್ದಚಿತ್ರಗಳ ಪ್ರದರ್ಶನ ಜರುಗಿತು.

ಸಮಾರಂಭದಲ್ಲಿ ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್ ಫಾತಿಮಾ, ಎಂ.ಎಲ್.ಸಿ. ತಿಪ್ಪಣ್ಣಪ್ಪ ಕಮಕನೂರ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಎಂ.ಸುಂದರೇಶ ಬಾಬು, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಕಲಬುರಗಿ ನಗರ ಪೆÇಲೀಸ್ ಆಯುಕ್ತ ಆರ್.ಚೇತನಕುಮಾರ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಡಿ.ಸಿ.ಪಿ. ಕನಿಕ ಸಿಕ್ರಿವಾಲ್, ಮಹಾನಗರ ಪಾಲಿಕೆಯ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಡಿ.ಸಿ.ಎಫ್ ಸುಮಿತ್ ಪಾಟೀಲ, ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ ಶಂಕರ, ಕೆ.ಕೆ.ಆರ್.ಟಿ.ಸಿ. ಎಂ.ಡಿ. ಎಂ.ರಾಚಪ್ಪ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಅನೇಕ ಜನಪ್ರತಿನಿಧಿಗಳು, ಅಧಿಕಾರಿಗಳು, ಶಾಲಾ-ಕಾಲೇಜು ಮಕ್ಕಳು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here