ಯುವಸಮೂಹ ದೇಶದ ಸಮಗ್ರ ಪ್ರಗತಿಗೆ ಶ್ರಮಿಸಬೇಕು: ಪ್ರೊ. ದಯಾನಂದ ಅಗಸರ

0
75

ಕಲಬುರಗಿ: ಭಾರತ ಅತ್ಯುನ್ನತ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಹೊಂದಿರುವ ದೇಶವಾಗಿದೆ. ದೇಶದ ಯುವಶಕ್ತಿಯಾಗಿರುವ ವಿದ್ಯಾರ್ಥಿಗಳು ದೇಶದ ಸಮಗ್ರ ಪ್ರಗತಿಗೆ ಶ್ರಮಿಸುವ ಸಂಕಲ್ಪ ಮಾಡಬೇಕಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧದ ಮುಂಭಾಗದಲ್ಲಿ ಆಯೋಜಿಸಲಾದ 75ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಕ್ರೀಡಾ ವಿಭಾಗದ ವಿದ್ಯಾರ್ಥಿಗಳು, ಸ್ಕೌಟ್ಸ್ ಅಂಡ್ ಗೈಡ್ಸ್ ತಂಡ ಹಾಗೂ ಸಿಪಾಯಿ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿ ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಷ್ ಸೇರಿದಂತೆ ಅನೇಕ ನಾಯಕರ ತ್ಯಾಗ ಮತ್ತು ಬಲಿದಾನದಿಂದ ರಾಷ್ಟ್ರ ಸಶಕ್ತ ಮತ್ತು ಸಮೃದ್ಧವಾಗಿ ಬೆಳೆದಿದೆ. ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಆಶಯದ ಸಂವಿಧಾನದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋಧರತೆಯ ಮೌಲ್ಯಗಳಿಂದ ದೇಶ ಸಮಗ್ರತೆಯನ್ನು ಸಾಧಿಸಿದೆ ಎಂದ ಅವರು ಇಂತಹ ಅಭೂತಪೂರ್ವ ಕ್ಷಣಗಳಲ್ಲಿ ಯುವ ಸಮೂಹ ಉತ್ತಮ ಸಂಕಲ್ಪದೊಂದಿಗೆ ಉತ್ಕೃಷ್ಠ ಸಾಧನೆಗೆ ಪಣತೊಡಬೇಕು ಎಂದರು.

Contact Your\'s Advertisement; 9902492681

ಜಾಗತಿಕ ಮಟ್ಟದಲ್ಲಿ ಭಾರತ ಪ್ರಜಾತಾಂತ್ರಿಕ ವ್ಯವಸ್ಥೆಯಿಂದ ಬಲಿಷ್ಠ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ವಿಶಿಷ್ಠ ಸಂಸ್ಕೃತಿ ಮತ್ತು ಪರಂಪರೆಗೆ ಹೆಸಾರಾಗಿದೆ. ಇಲ್ಲಿನ ಸಾಹಿತ್ಯ, ಕಲೆ, ಕೃಷಿ, ಕೈಗಾರಿಕೆ, ಕ್ರೀಡೆ, ವಿಜ್ಞಾನ ಮತ್ತು ತಂತ್ರಜ್ಞಾನ, ಉದ್ಯಮ ಮತ್ತು ಸೇವಾವಲಯಗಳು ಸುಸ್ಥಿರ ಬೆಳವಣಿಗೆ ಸಾಧಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಯುವ ಸಮೂಹ ಉತ್ತಮ ಆಲೋಚನೆ ಮತ್ತು ಚಿಂತನೆಯನ್ನು ರೂಢಿಸಿಕೊಳ್ಳಬೇಕು. ಅತ್ಯುನ್ನತ ಶಿಕ್ಷಣವನ್ನು ಪಡೆದು ಸೃಜನಶೀಲ ಸಾಮರ್ಥ್ಯದ ಜೊತೆಗೆ ಸಾಧನೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಕುಲಸಚಿವ ಡಾ. ಬಿ. ಶರಣಪ್ಪ, ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿ ಧಮ್ಮ ಪ್ರಕಾಶ್ ಉಪಸ್ಥಿತರಿದ್ದರು. ಪ್ರೊ. ಹೆಚ್.ಟಿ. ಪೋತೆ, ಪ್ರೊ. ಎನ್.ಬಿ. ನಡುವಿನಮನಿ, ಪ್ರೊ. ಹೂವಿನಬಾವಿ ಬಾಬಣ್ಣ, ಪ್ರೊ. ಕೆರೂರ್, ಪ್ರೊ. ಬಸವರಾಜ ಸಣ್ಣಕ್ಕಿ, ಪ್ರೊ. ದೇವಿದಾಸ ಮಾಲೆ, ಪ್ರೊ. ಬಿ. ವಿಜಯ, ಪ್ರೊ. ರಮೇಶ್ ರಾಠೋಡ್, ಪ್ರೊ. ಕನ್ನಳ್ಳಿ, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ, ಸ್ನಾಕತೋತ್ತರ, ಸಂಶೋಧನಾ ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು.

ಸಂಗೀತ ವಿಭಾಗದ ವಿದ್ಯಾರ್ಥಿಗಳು ದೇಶಭಕ್ತಿಗೀತೆ ಪ್ರಸ್ತುತಪಡಿಸಿದರು. ವಿಶ್ವವಿದ್ಯಾಲಯ ಪ್ರಾರ್ಥಮಿಕ ಮತ್ತು ಪ್ರೌಢಶಾಲೆ ಮಕ್ಕಳು ದೇಶಭಕ್ತಿಗೀತೆಗಳಿಗೆ ಸಮೂಹ ನೃತ್ಯ ಪ್ರದರ್ಶಿಸಿದರು. ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಪ್ರೊ. ಎನ್. ಜಿ ಕಣ್ಣೂರು ವಂದಿಸಿದರು. ವಿದ್ಯಾರ್ಥಿ ಕಲ್ಯಾಣಾಧಿಕಾರಿ ಹಾಗೂ ಸಾಂಸ್ಕೃತಿಕ ಸಂಯೋಜಕ ಪ್ರೊ. ಕೆ. ಲಿಂಗಪ್ಪ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

75ನೇ ಗಣರಾಜ್ಯೋತ್ಸವವನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಜ್ಞಾನಗಂಗಾ ಆವರಣದಲ್ಲಿ ವಿಶೇಷವಾಗಿ ಆಚರಿಸಲಾಯಿತು. ಕುಲಪತಿ ಪ್ರೊ. ದಯಾನಂದ ಅಗಸರ ನೇತೃತ್ವದಲ್ಲಿ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ವಿಶ್ವವಿದ್ಯಾಲಯ ಶಾಲೆಯಿಂದ ಕಾರ್ಯಸೌಧದವರೆಗೆ ಶಾಲಾ ಬ್ಯಾಂಡ್ ವಾದ್ಯದ ಸಹಕಾರದೊಂದಿಗೆ ಜಯಘೋಷ ದೇಶಭಕ್ತಿಗೀತೆ ಹಾಡುತ್ತಾ ಸುಮಾರು 110 ಅಡಿ ಉದ್ದದ ತ್ರಿವರ್ಣ ಧ್ವಜವನ್ನು ಹಿಡಿದು ಮೆರವಣಿಗೆ ನಡೆಸಿ ವಿದ್ಯಾರ್ಥಿಗಳು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಕುಲಸಚಿವ ಡಾ. ಬಿ. ಶರಣಪ್ಪ ಕುಲಪತಿಗಳಿಗೆ ಸಾಥ್ ನೀಡಿದರು. ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ರವಿಕುಮಾರ್ ಈಶ್ವರ, ಮಾಜಿ ಅಧ್ಯಕ್ಷ ಆನಂದ ಯಾತನೂರು, ಮಹಾದೇವ ಜಾದವ್, ಕೇಮಣ್ಣ, ಸತೀಶ್ ಹೊಸಮನಿ, ನಿಂಗಪ್ಪ, ನಡುವಿನಕೇರಿ, ರಾಹುಲ್ ಮೊಗ ಹಾಗೂ ಮಹದೇವಸ್ವಾಮಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here