ಸುರಪುರ: ಇಂದು ಅನೇಕರು ಉದ್ಯಮಗಳನ್ನು ಆರಂಭಿಸುತ್ತಾರೆ,ಅದರಲ್ಲಿ ಕೆಲವರು ಮಾತ್ರ ಲಾಭ ಗಳಿಸಿದರು.ಅನೇಕರು ನಷ್ಟ ಅನುಭವಿಸುತ್ತಾರೆ.ಇದಕ್ಕೆ ಕಾರಣ ಕೇವಲ ಉದ್ಯಮ ಆರಂಭಿಸುವುದಷ್ಟೆ ಮುಖ್ಯವಾಗಿಸಿಕೊಳ್ಳುವ ಬದಲು,ಯಾವ ಉದ್ಯಮ ಆರಂಭಿಸಬೇಕೆಂಬ ಅರಿವು ಮುಖ್ಯ ಎಂದು ಸಿಡಾಕ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಮಹ್ಮದ ಅಸ್ಫಾಕ್ ತಿಳಿಸಿದರು.
ದಿಶಾ ಉದ್ಯಮಶೀಲತಾ ಮಾರ್ಗದರ್ಶನ ಕೇಂದ್ರ ಯಾದಗಿರಿ ಮತ್ತು ಕರ್ನಾಟಕ ಉದ್ಯಮಶೀಲತಾಭಿವೃಧ್ಧಿ ಕೆಂದ್ರ (ಸಿಡಾಕ್) ವತಿಯಿಂದ ದಿಶಾ ಔಟ್ ರೀಚ್ ಮೂರು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು. ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಶ್ರೀಕಾಂತ ರಾಯಚೂರ ತರಬೇತಿ ನೀಡಿ,ಯಾವುದೆ ಉದ್ಯಮ ಆರಂಭಿಸುವವರು ಉತ್ಪಾದನಾ ಘಟಕ ಮತ್ತು ಸೇವಾ ಘಟಕಗಳ ಬಗ್ಗೆ ಸರಿಯಾದ ಜ್ಞಾನ ಹೊಂದಿರಬೇಕು. ಇದರಿಂದ ಯಾವ ಉದ್ಯಮ ಆರಂಭಿಸಬೇಕು ಮತ್ತು ಯಾವ ರೀತಿಯ ಉದ್ಯಮ ಎಂತಹ ಸ್ಥಳದಲ್ಲಿ ಆರಂಭಿಸುವುದರಿಂದ ಲಾಭ ಗಳಿಸಬುದು ಎಂಬುದರ ಬಗ್ಗೆ ತಿಳಿಸಿಕೊಟ್ಟರು.ನಂತರ ಸಿಎಂಇಜಿಪಿ ಮತ್ತು ಪಿಎಂಇಜಿಪಿ ಯೋಜನೆಗಳಡಿಯಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸುವ ವಿಧಾನ ಮತ್ತು ಬ್ಯಾಂಕುಗಳಿಂದ ಸಾಲ ಪಡೆಯುವ ಕುರಿತು ತಿಳಿಸಿದರು.
ಅಲ್ಲದೆ ಒಂದು ಉದ್ಯಮವೆಂದರೆ ಅದಕ್ಕೆ ಏನೆಲ್ಲ ವಸ್ತುಗಳು ಬೇಕು ಮತ್ತು ಅವುಗಳನ್ನು ಯಾವ ರೀತಿಯಲ್ಲಿ ಪಟ್ಟಿ ಮಾಡುವುದು ಎಂಬುದರ ಕುರಿತು ಮಾಹಿತಿ ನಿಡಿದರು. ಮೂರು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಸ್ವಯಂ ಉದ್ಯೋಗ ಹೊಂದಲು ನೂರಕ್ಕು ಹೆಚ್ಚು ಜನ ತರಬೇತಿ ಪಡೆದರು.ನಂತರ ಕೊನೆಯ ದಿನ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಂಯೋಜಕರಾದ ಪದ್ಮಶ್ರೀ,ಶಂಕರ ಪಾಟೀಲ ಹಾಗು ಶಿಬಿರಾರ್ಥಿಗಳಾಗಿ ರೈತ ಹೋರಾಟಗಾರ ಬಸನಗೌಡ ಹೆಮ್ಮಡಗಿ,ಜಯಕರ್ನಾಟಕ ಸಂಘಟನೆ ತಾಲ್ಲೂಕಾಧ್ಯಕ್ಷ ರವಿಕುಮಾರ ಬೈರಿಮರಡಿ,ಬಸವರಾಜ ಮುಷ್ಠಳ್ಳಿ,ಹಣಮಂತ್ರಾಯಗೌಡ ಚಿಗರಿಹಾಳ,ನೀಲಮ್ಮಾ ಕುಂಬಾರ,ಪುರುಷೋತ್ತಮ ದೇವತ್ಕಲ್,ಮಲ್ಲಿಕಾರ್ಜುನ ಮುಷ್ಠಳ್ಳಿ,ವಿಜಯಕುಮಾರ ಯಾದವ,ಮಲ್ಲು ಮುಷ್ಠಳ್ಳಿ (ಕೆಸಿಪಿ),ರವಿ ಹುಲಕಲ್ ಸೇರಿದಂತೆ ಅನೇಕರಿದ್ದರು.