ಸಮಾಜಮುಖಿ ಕೆಲಸ ಮಾಡಲು ಯುವಕರಿಗೆ ಅವಧಾನಿ ಕರೆ

0
35

ಕಲಬುರಗಿ: ಕವಲು ದಾರಿಯಲ್ಲಿ ಜೀವನ ನಡೆಸುತ್ತಿರುವ ಇಂದಿನ ಯುವಕರಿಗೆ ಆತ್ಮಸ್ಥೈರ್ಯ ಮುಖ್ಯವಾಗಿದೆ. ಧೃಡ ಸಂಕಲ್ಪದಿಂದ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ, ಸಮಾಜ ಸೇವೆ ಮಾಡಲು ಇಂದಿನ ಯುವಕರು ಮುಂದೆ ಬರಬೇಕೆಂದು ಹಿರಿಯ ಪತ್ರಕರ್ತ ಶೇಷಮೂರ್ತಿ ಅವಧಾನಿ ಕರೆ ನೀಡಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ.ಎಸ್.ಐ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿರುವ “ಅಂತರಾಷ್ಟ್ರೀಯ ಸ್ವಯಂಸೇವಕರ ದಿನಾಚರಣೆ”ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಮಾಡಿರುವ ನಿವೃತ್ತ ಪ್ರಾಚಾರ್ಯರಾದ ಡಾ. ಶಂಕರಪ್ಪ ಹತ್ತಿ ಅವರು, ಪರಿಸರ ರಕ್ಷಣೆಯಿಂದ ಆರೋಗ್ಯದ ಬದುಕು ಮಾಡಲು ಸಾಧ್ಯವಾಗಿದೆ. ಇಂದಿನ ಯುವಕರು ಸಮಾಜ ಸೇವೆಯ ಜೊತೆ ಪರಿಸರದ ಬಗ್ಗೆ ಕಾಳಜಿವಹಿಸಿ, ನಮ್ಮ ಬಡಾವಣೆಗಳಲ್ಲಿರುವ ಎಲ್ಲಾ ಉದ್ಯಾನವನಗಳನ್ನು ಪ್ರತಿ ವಾರಕ್ಕೊಮ್ಮೆ ಸ್ವಚ್ಛ ಮಾಡುವ ಪ್ರಮಾಣವನ್ನು ಯುವಕರು ಮಾಡಬೇಕೆಂದು ಹೇಳಿದರು.

ಕಾರ್ಯಕ್ರಮದ ವೇದಿಕೆಯ ಮೇಲೆ ರೆಡ್ ಕ್ರಾಸ್ ಕಲ್ಬುರ್ಗಿ ಜಿಲ್ಲಾ ಶಾಖೆಯ ಸಭಾಪತಿ ಅರುಣಕುಮಾರ ಲೋಯಾ ಉಪಸಭಾಪತಿ ಭಾಗ್ಯಲಕ್ಷ್ಮಿ ಎಂ. ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ, ಎಸ್ ಐ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ರಾಜಶೇಖರ ಬೀರನಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಜಿಲ್ಲಾ ಶಾಖೆಯ ಜಂಟಿ ಕಾರ್ಯದರ್ಶಿ ಸುರೇಶ್ ಬಡಿಗೇರ್ ಕಾರ್ಯಕ್ರಮ ಸಂಯೋಜಕ ರಾಜೇ ಶಿವಶರಣಪ್ಪ ಆಡಳಿತ ಮಂಡಳಿಯ ಸದಸ್ಯ ಸಯ್ಯದ್ ಸನಾವುಲ್ಲಾ ಸೇರಿದಂತೆ ಮಹಾವಿದ್ಯಾಲಯದ ಸಂಸ್ಥೆಯ ರೆಡ್ ಕ್ರಾಸ್ ಸಂಯೋಜಕರು ಹಾಗೂ ಎನ್ಎಸ್ಎಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here