ಕಲಬುರಗಿ: ಕಲ್ಯಾಣಕರ್ನಾಟಕ ವಾಣಿಜ್ಯ ಮತ್ತುಕೈಗಾರಿಕಾ ಸಂಸ್ಥೆ, ಕಲಬುರಗಿಯ ಡಾ.ಎಸ್.ಎಸ್. ಪಾಟೀಲ ಸಭಾಂಗಣದಲ್ಲಿ ಗಂಟೆಗೆಆರ್ಬ್‍ಎನರ್ಜಿ ಬೆಂಗಳೂರು ಮತ್ತು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತುಕೈಗಾರಿಕಾ ಸಂಸ್ಥೆ, ಕಲಬುರಗಿ ಸಂಯುಕ್ತಾಶ್ರಯದಲ್ಲಿ ಕೈಗಾರಿಕೆಗಳಿಗೆ ಮೇಲ್ಛಾವಣಿ ಸೌರಶಕ್ತಿ ಹೇಗೆ ಪ್ರಯೋಜನಕಾರಿ ಎಂಬುವದರ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾದ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತುಕೈಗಾರಿಕಾ ಸಂಸ್ಥೆ ಅಧ್ಯಕ್ಷರಾದ ಶಶಿಕಾಂತ ಬಿ. ಪಾಟೀಲ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಸೌರಶಕ್ತಿಯ ಪ್ರಯೋಜನಗಳ ಬಗ್ಗೆ ತಿಳಿಸಿದರು, ಅಲ್ಲದೆ ವಾಣಿಜ್ಯ ಮಳಿಗೆ ಮತ್ತುಕೈಗಾರಿಕಾಕಾರ್ಖಾನೆ ಹಾಗೂ ಮನೆಗಳ ಮೇಲ್ಛಾವಣಿ ಸೌರಶಕ್ತಿ ಅಳವಡಿಸಿದರೆ ಸರ್ಕಾರದಿಂದ ಸಹಾಯಧನ ಲಭ್ಯವಿದ್ದುಅದರಉಪಯೋಗ ಪಡೆದುಕೊಳ್ಳಬೇಕು ಹಾಗೂ ಮಾಸಿಕ ವಿದ್ಯುತ್ ಶುಲ್ಕ ಲಕ್ಷಾಂತರರೂಪಾಯಿ ಉಳಿತಾಯವಾಗುತ್ತದೆ ಮತ್ತು 3 ರಿಂದ 4 ವರ್ಷದಲ್ಲಿ ಹಾಕಿದ ಬಂಡವಾಳವನ್ನು ಕೂಡ ಹಿಂತಿರುಗುತ್ತದೆ, ಸೌರಶಕ್ತಿಉತ್ಪಾದನೆ ಮೂಲಕ ಸಾವಲಂಬನೆ ಸಾಧಿಸಲು ಹಾಗೂ ನಷ್ಟದ ಭಾರವನ್ನುಕಡಿಮೆ ಮಾಡಿಕೊಳ್ಳಲು ಕೈಗಾರಿಕೆಗಳಿಗೆ ಇನ್ನೀಲದ ಹರಸಾಹಸ ಕೈಬಿಡಬೇಕೆಂದು ಎಂದು ನುಡಿದರು.
ಪಿ.ವಿ. ಪ್ರೊಜೆಕ್ಟ್ಸಆರ್ಬ್‍ಎನರ್ಜಿ, ಬೆಂಗಳೂರು ಎಜಿಎಂ ರಮೇಶ ಪಿ. ಕಲಿಭಟ್ ರವರು ಸಭೆಯನ್ನು ಉದ್ಧೇಶಿಸಿ ಮೇಲ್ಛಾವಣಿ ಸೌರಶಕ್ತಿಯಉಪಯೋಗಿಸುವ ಬಗ್ಗೆ ಹಾಗೂ ಲಾಭಗಳ ಕುರಿತು ಮಾತನಾಡಿದರು.
ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕಲ್ಯಾಣಕರ್ನಾಟಕ ವಾಣಿಜ್ಯ ಮತ್ತುಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಮಂಜುನಾಥ ಜೇವರ್ಗಿ, ಆಡಳಿತ ಮಂಡಳಿಯ ಸದಸ್ಯರಾದ ಅಭಿಜಿತ ಪಡಶೆಟ್ಟಿ, ಆರ್ಬ್‍ಎನರ್ಜಿ ಬೆಂಗಳೂರು ಮಾರ್ಕೇಟಿಂಗ್‍ಎಜಿಎಂ ವಿಕಾಸ ಎಲ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಕಿರಾಣಾ ಬಜಾರರ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಮಾದಮಶೆಟ್ಟಿ, ಬೇಳೆ ಕಾರ್ಖಾನೆಗಳ ಅಸೋಸಿಯೇಷನ್ ಅಧ್ಯಕ್ಷ ಚಂದ್ರಶೇಖರ ಕೋಬಾಳ ಮತ್ತು ಸದಸ್ಯರು, ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಕಲಬುರಗಿಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ವ್ಯಾಪಾರಸ್ಥರು ಪಾಲ್ಗೊಂಡಿದ್ದರು.