ಕಲಬುರಗಿ: ಸರ್ಕಾರ ಆಯಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕೆಪಿಎಸ್ಸಿಗೆ ಅಧಿಕೃತ ನಿರ್ದೇಶನದಗಳ ಪಾತ್ರಗಳು ಕಳುಹಿಸುತ್ತಿದೆ ಆದರೆ ಲೋಕಸೇವಾ ಆಯೋಗದಿಂದ ಕಾಲಮಿತಿಯಲ್ಲಿ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಿಲ್ಲ ಇನ್ನು ಮುಂದಾದರೂ ಕಾಲಮಿತಿಯಲ್ಲಿ ನೇಮಕಾತಿ ಪ್ರಕ್ರಿಯೆಗಳು ನಡೆಸಲು ಸಮಿತಿ ಕೆಪಿಎಸ್ಸಿ ಅಧ್ಯಕ್ಷರಿಗೆ ಮತ್ತು ಕಾರ್ಯದರ್ಶಿಗಳಿಗೆ ಹಾಗೂ ಆಡಳಿತ ಮಂಡಳಿಗೆ ಒತ್ತಾಯಿಸಿತ್ತದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಆಗ್ರಹಿಸಿದ್ದಾರೆ.
ಕಳೆದ ವಾರ ಪ್ರಕಟವಾದ ಆಯಾ ಇಲಾಖೆಗಳ ಆಯ್ಕೆ ಪ್ರಕ್ರಿಯೆಗಳು ಒಂದು, ಒಂದುವರೆ ಹಾಗೂ ಎರಡು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆಗಳು ನಡೆದಿವೆ.ಕೆಪಿಎಸ್ಸಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ನಡುವೆ ಸಮನ್ವಯತೆಯ ಇಲ್ಲದ ಕಾರಣ ನೇಮಕಾತಿ ಪ್ರಕ್ರಿಯೆಗಳು ವಿಳಂಬವಾಗುತ್ತಿರುವದು ಅವರ ನಡುವೆ ನಡೆಯುತ್ತಿರುವ ಬಹಿರಂಗ ಸಂಘರ್ಷವೆ ಸಾಕ್ಷಿಯಾಗಿದೆ ಈ ಬಗ್ಗೆ ಸರ್ಕಾರ ಮತ್ತು ರಾಜ್ಯಪಾಲರು ಗಂಭೀರವಾಗಿ ಪರಿಗಣಿಸಲು ಸಮಿತಿ ಮನವರಿಕೆ ಮಾಡುತ್ತದೆ.
ಈ ಮಧ್ಯೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸರ್ಕಾರದ ಹತ್ತಾರು ಇಲಾಖೆಗಳ ಗ್ರೂಪ್ ಎ ಮತ್ತು ಗ್ರೂಪ್ ಬಿಗೆ ಸಂಬಂಧಿಸಿದ ಒಟ್ಟು 384 ಹುದ್ದೆಗಳಿಗೆ ಭರ್ತಿ ಮಾಡಲು ದಿನಾಂಕ 2.2.24 ರಂದು ಲೋಕಸೇವಾ ಆಯೋಗಕ್ಕೆ ಅಧಿಕೃತ ಪತ್ರ ಬರೆದು ನಿರ್ದೇಶಿಸಿದೆ.
ಈ ಒಟ್ಟು ಹುದ್ದೆಗಳಲ್ಲಿ 371ನೇ ಜೇ ಕಲಂ ಅಡಿ 77 ಹುದ್ದೆಗಳು ಕಲ್ಯಾಣಕ್ಕೆ ಮೀಸಲಿದ್ದು, ಬಾಕಿ ಹುದ್ದೆಗಳು ರಾಜ್ಯ ಮಟ್ಟದ ಮೆರಿಟ್ ಆಧಾರದದಂತೆ ನೇಮಕಾತಿಗೆ ಸೂಚಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹುದ್ದೆಗಳ ಭರ್ತಿಗೆ ಹೊರಡಿಸಿರುವ ಅಧಿಕೃತ ಪತ್ರದಂತೆ ಕೆಪಿಎಸ್ಸಿ ಕಾಲಮಿತಿಯಲ್ಲಿ ನೇಮಕಾತಿ ಪ್ರಕ್ರಿಯೆಗಳು ಪೂರ್ಣಗೊಳಿಸಲು ಸಮಿತಿ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಿಗೆ ಮತ್ತು ಕಾರ್ಯದರ್ಶಿಗಳಿಗೆ ಹಾಗೂ ಆಡಳಿತ ಮಂಡಳಿಗೆ ಒತ್ತಾಯಿಸಿದೆ.