ದೂರದರ್ಶನ ಕೇಂದ್ರ ಉಳಿಸಿಕೊಳ್ಳಲು ಆಗದ ಸಂಸದರಿಗೆ ರೈಲ್ವೆ ವಿಭಾಗ ಕಾರ್ಯರೂಪಕ್ಕೆ ತರಲು ಸಾಧ್ಯವೇ?; ಸಚಿವ ಪ್ರಿಯಾಂಕ್ ಖರ್ಗೆ

0
62

ಕಲಬುರಗಿ: ಕಲ್ಯಾಣ ಕರ್ನಾಟಕದ ಜನರ ಅತ್ಯಂತ ನಿರೀಕ್ಷಿತ ಹಾಗೂ ಇಡೀ ಭಾಗಕ್ಕೆ ಅಭಿವೃದ್ಧಿಯ ಯಂತ್ರವಾಗಬೇಕಿದ್ದ ರೇಲ್ವೆ ವಿಭಾಗಕ್ಕೆ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಕೇವಲ ಒಂದೇ ಸಾವಿರ ರೂಪಾಯಿ ನಿಗದಿಪಡಿಸಿ ನಮ್ಮ ಜನರಿಗೆ ಅಪಮಾನ ಎಸಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕಟುವಾಗಿ ಟೀಕಿಸಿದ್ದಾರೆ.

ಈ ಕುರಿತು ಸೋಷಿಯಲ್ ಮೀಡಿಯಾ ( ಫೇಸ್ ಬುಕ್ ) ನಲ್ಲಿ ಬರೆದುಕೊಂಡಿರುವ ಅವರು 2014ರಲ್ಲಿ ಕೇಂದ್ರದ ಯುಪಿಎ ಸರ್ಕಾರ
ರೇಲ್ವೇ ವಿಭಾಗ ಘೋಷಿಸಿ, ಆಡಳಿತ ಕಚೇರಿ, ಮೂಲ ಸೌಕರ್ಯ ಒದಗಿಸಲು ₹5 ಕೋಟಿ ಹಣ ನೀಡಿ 42.5 ಎಕರೆ ಜಾಗ ಗುರುತಿಸಿ, ಸ್ವಾಧೀನ ಪಡಿಸಿಕೊಂಡು ರೇಲ್ವೆ ಇಲಾಖೆಗೆ ಹಸ್ತಾಂತರಿಸಿ ವಿಶೇಷ ಕರ್ತವ್ಯಾಧಿಕಾರಿಯನ್ನೂ ನೇಮಿಸಿ ಕಲಬುರ್ಗಿ ವಿಭಾಗದ ಕಾರ್ಯವ್ಯಾಪ್ತಿಯನ್ನೂ ನಿರ್ಧರಿಸಲಾಗಿತ್ತು.

Contact Your\'s Advertisement; 9902492681

ಆದರೆ ಬಿಜೆಪಿ ಸರ್ಕಾರ ಬಂದ ನಂತರ ಇಡೀ ಯೋಜನೆಯನ್ನು ಹಳ್ಳ ಹಿಡಿಸಿ ಮೂಲೆಗುಂಪು ಮಾಡಿ ಈಗ ಚುನಾವಣೆ ವರ್ಷ ಬಂದಿರುವಾಗ ಕಲ್ಯಾಣ ಕರ್ನಾಟಕದ ಜನರ ಆಕಾಂಕ್ಷೆಗಳನ್ನೇ ಹಾಸ್ಯ ಮಾಡುವಂತೆ ₹1,000 ಚಿಲ್ಲರೆ ಹಣವನ್ನು ಕೊಟ್ಟು ನಮ್ಮ ಭಾಗದ ಜನರಿಗೆ ಅಪಮಾನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉದ್ದೇಶಿತ ರೈಲ್ವೇ ವಿಭಾಗ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ದೂರದೃಷ್ಠಿಯ ಯೋಜನೆಯಾಗಿತ್ತು ಎಂದಿರುವ ಪ್ರಿಯಾಂಕ್ ಈ ಯೋಜನೆ ಬಂದರೆ ನಮ್ಮ ಇಡೀ ಭಾಗದಲ್ಲಿ ಉದ್ಯೋಗಗಳು ಸೃಷ್ಠಿಯಾಗಿ ಸಾರಿಗೆ ಹಬ್ ಆಗುವ ಅವಕಾಶವಿತ್ತು. ಜೊತೆಗೆ, ಅದರಿಂದ ಆರ್ಥಿಕ ಚಟುವಟಿಕೆಗಳು ಗಣನೀಯವಾಗಿ ಹೆಚ್ಚಳವಾಗುತ್ತಿತ್ತು. ಇದು ನಮ್ಮ ಭಾಗದ ಜನರ ಪಾಲಿಗೆ ವರದಾನವಾಗುತ್ತಿತ್ತು.

ಒಂದು ದೂರದರ್ಶನ ಕೇಂದ್ರವನ್ನು ಉಳಿಸಿಕೊಳ್ಳಲು ಆಗದ ಉಮೇಶ್ ಜಾಧವ್ ಅವರೇ, ರೇಲ್ವೇ ವಿಭಾಗ ಕಾರ್ಯರೂಪಕ್ಕೆ ತರಲು ಸಾಧ್ಯವೇ ? ಎಂದು ಕಟಿಕಿಯಾಡಿ ಮೋದಿಯವರ ಮನ್ ಕೀ ಬಾತ್ ಕೇಳುವುದೇ ಸಂಸದರ ದೊಡ್ಡ ಸಾಧನೆ ಆಗಿದೆ ಎಂದು ಟೀಕಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here