ವಾಡಿ: ಪಟ್ಟಣದ ಬಿಜೆಪಿ ಕಛೇರಿಯ ಮುಂಭಾಗದಲ್ಲಿ ಬಿಜೆಪಿ ಹಿರಿಯ ಮುತ್ಸದಿ ಎಲ್ ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಪುರಸ್ಕಾರ ಲಭಿಸಿದ ಹಿನ್ನೆಲೆಯಲ್ಲಿ ಮುಖಂಡರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ ನಮ್ಮ ಭಾರತೀಯ ಜನತಾ ಪಾರ್ಟಿಯ ಧೀಮಂತ ನಾಯಕ, ಭೀಷ್ಮ ಎಂದೇ ಖ್ಯಾತರು, ರಾಮ ಮಂದಿರದ ರುವಾರಿ,ನಮ್ಮಲ್ಲಿ ಫೈರ್ ಬ್ರ್ಯಾಂಡ್ ನಾಯಕ ಅಂತಾ ಗುರುತಿಸಿಕೊಂಡಿದ್ದ ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ಗೌರವ ಭಾರತ ರತ್ನ ಪ್ರಶಸ್ತಿ ಘೋಷಿಸಿದ್ದು ನಮ್ಮ ಪಕ್ಷದವರಿಗೆ ಸೇರಿದಂತೆ ಇಡೀ ಭಾರತೀಯರಿಗೆ ಹರ್ಷ ತಂದಿದೆ ಎಂದರು.
90 ರ ದಶಕದಲ್ಲಿ ರಾಮ ಮಂದಿರ ನಿರ್ಮಾಣದ ಕನಸನ್ನು ಬಿತ್ತಿದ ಅಡ್ವಾಣಿ, ದೇಶದ ಉದ್ದಗಲಕ್ಕೂ ರಾಮ ರಥಯಾತ್ರೆ ಮೂಲಕ ಸದ್ದು ಮಾಡಿದರು. ಅಂದು ಅಡ್ವಾಣಿ ರಥಯಾತ್ರೆಗೆ ಈಗಿನ ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಸಾರಥಿಯಂತೆ ಕೆಲಸ ಮಾಡಿದರು. ಈಗ ನಮ್ಮ ಮೋದಿ ಜಿ ಸರ್ಕಾರದ ಅವಧಿಯಲ್ಲೇ ರಾಮ ಮಂದಿರ ನಿರ್ಮಾಣವಾಗಿದ್ದು, ಕೋಟ್ಯಂತರ ರಾಮ ಭಕ್ತರ ಶತಮಾನಗಳ ಕನಸು ಈಡೇರಿತ್ತು.ಮಂದಿರದೊಂದಿಗೆ ದೇಶದ ಸಮಗ್ರತೆ ಗಾಗಿ ತಮ್ಮ ರಾಜಕೀಯ ಬದುಕು ಮುಡುಪಾಗಿಸಿದ ರಥ ಪುರುಷನಿಗೆ ಈ ರಾಮೂತ್ಸವದಲ್ಲಿ ಭಾರತ ರತ್ನ ಒಲಿದಿದ್ದು ನಮಗೆಲ್ಲಾ ಮತ್ತಷ್ಟು ಹೆಮ್ಮೆಯ ವಿಷಯ ಎಂದರು.
ಮುಖಂಡರಾದ ಭಗವತ ಸುಳೆ ರಾಮಚಂದ್ರ ರೆಡ್ಡಿ, ಹರಿ ಗಲಾಂಡೆ, ಶರಣಗೌಡ ಚಾಮನೂರ,ಅಶೋಕ ಪವಾರ, ಅಯ್ಯಣ್ಣ ದಂಡೋತಿ, ನಿರ್ಮಲಾ ಇಂಡಿ, ಯಂಕಮ್ಮ ಗೌಡಗಾಂವ,ಉಮಾದೇವಿ ಗೌಳಿ, ಶರಣಮ್ಮ ಯಾದಗಿರಿ, ಸುನಿತಾ ರಾಠೋಡ, ಮಲ್ಲಿಕಾರ್ಜುನ ಸಾತಖೇಡ, ಬಸವರಾಜ ಪಗಡಿಕರ, ವಿಶ್ವರಾಧ್ಯ ತಳವಾರ, ಪ್ರವೀಣ ಸುಳೆ,ರಮೇಶ ರಾಠೋಡ ಸೇರಿದಂತೆ ಅನೇಕರು ಇದ್ದರು.