“ಬಿ.ಎಫ್.ಐ.ಎಲ್ ಸಂಸ್ಥೆಯ ಸಿ. ಎಸ್. ಆರ್ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ಕನ್ನಡಕ ವಿತರಣೆ”

0
57

ಕಲಬುರಗಿ: ಸರಕಾರಿ ಪ್ರೌಢ ಶಾಲೆ ಫರಹತಾಬಾದ್ ನಲ್ಲಿ ಭಾರತ್ ಫೈನಾನ್ಸಿಯಲ್ ಇನ್ಕ್ಲೂಷನ್ ಲಿಮಿಟೆಡ್, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮಪಂಚಾಯತ್ ಫರಹತಾಬಾದ್ , ಆಪೋಲ್ಲೋ ಹಾಗೂ ಸರಕಾರಿ ಪ್ರೌಢ ಶಾಲೆ ಇವರುಗಳ ಸಹಕಾರದೊಂದಿಗೆ “ಕನ್ನಡಕ ವಿತರಣೆ ಕಾರ್ಯಕ್ರಮ ” ಯಶಸ್ವಿಯಾಗಿ ನಡೆಯಿತು.

ಬಿ.ಎಫ್.ಐ.ಎಲ್ ಸಂಸ್ಥೆಯು ರಾಷ್ಟ್ರದಾದ್ಯಂತ ಗ್ರಾಮಮಟ್ಟದಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ನೀಡುವುದರ ಜೊತೆಗೆ ಸಿ.ಎಸ್.ಆರ್ ಸಂಪನ್ಮೂಲವನ್ನು ಬಳಸಿಕೊಂಡು ಕಲಬುರಗಿ ಜಿಲ್ಲೆಯಲ್ಲಿ 12 ಪ್ರಾಥಮಿಕ ಹಾಗೂ ಉಪಕೇಂದ್ರಗಳ ಬಲವರ್ಧನೆಯನ್ನು ಅಪೋಲೋ ಮುಖಾಂತರ ಘನ ಸರಕಾರದ ಸಹಕಾರದೊಂದಿಗೆ ಮಾಡಿದ್ದು ಗ್ರಾಮ ಮಟ್ಟದಲ್ಲಿ ನುರಿತ ಆರೋಗ್ಯ ಸೇವೆಗಳನ್ನು ಪಡೆಯುವಂತಾಗಿದೆ ಎಂದು  ಮಹೇಶ್ ಜಮಷೆಟ್ಟಿ, ಸ್ಟೇಟ್ ಬಿಸಿನೆಸ್ ಹೆಡ್ ತಮ್ಮ ಅತಿಥಿ ಭಾಷಣದಲ್ಲಿ ತಿಳಿಸಿದರು.

Contact Your\'s Advertisement; 9902492681

ಪ್ರಗತ್ ಅರೋಗ್ಯ ಕಾರ್ಯಕ್ರಮದ ಭಾಗವಾಗಿ ಎಲ್ಲಾ 12 ಗ್ರಾಮಗಳ 8262 ಶಾಲಾ ವಿದ್ಯಾರ್ಥಿಗಳಿಗೆ ಟೆಸ್ಟ್ ಮಾಡಲಾಗಿ ಅದರ ಪ್ರಕಾರ ಕಣ್ಣಿನ ಸಮಸ್ಯೆ ಇರುವ 257 ಮಕ್ಕಳಿಗೆ ಉಚಿತವಾಗಿ ಕನ್ನಡಕಗಳನ್ನು ಇವತ್ತು ಸಾಂಕೇತಿಕವಾಗಿ ವಿತರಣೆ ಮಾಡಲಾಗಿದ್ದು ಈ ನಿಟ್ಟಿನಲ್ಲಿ ಕಣ್ಣಿನ ಆರೋಗ್ಯ ಕಾಪಾಡಲು ಮುನ್ನುಡಿ ಬರೆಯಲಾಗಿದೆ ಎಂದು ತಮ್ಮ ಪ್ರಾಸ್ತವಿಕ ನುಡಿಗಳಲ್ಲಿ  ಶಿವರಾಜ ಶೆಟ್ಟಿ ಸಿ.ಎಸ್.ಆರ್ ಮ್ಯಾನೇಜರ್ ತಿಳಿಸಿದರು.

ಬಿ.ಎಫ್.ಐ.ಎಲ್ ಸಂಸ್ಥೆಯ ಅರೋಗ್ಯ ಕಾರ್ಯಕ್ರಮವು ಹಳ್ಳಿಯವರಿಗೆ ತುಂಬಾ ಅನುಕೂಲವಾಗಿದೆ ಹಾಗೂ ನಾವು ಅವರಿಗೆ ತುಂಬು ಹೃದಯದಿಂದ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ವಹಿಸಿದ  ಚಂದ್ರಕಾಂತ್, ಮುಖ್ಯ ಉಪಾಧ್ಯಯರು ತಮ್ಮ ಭಾಷಣದಲ್ಲಿ ಹಂಚಿಕೊಂಡರು.

ಕಣ್ಣಿನ ಆರೋಗ್ಯ ಇವತ್ತಿನ ದಿನಗಳಲ್ಲಿ ಯಾಕೆ ಹದ ಗೆಡುತ್ತಿದೆ, ಅದರ ಪರಿಣಾಮಗಳು ಹಾಗೂ ಮುಂಜಾಗ್ರತ ಕ್ರಮಗಳ ಕುರಿತು ಡಾ. ಶಿವಕುಮಾರ್, ವೈದ್ಯರು ಆಪೋಲ್ಲೋ ಹಾಗೂ ವಿಶ್ವನಾಥ್ ಮರತುರೂ, ಶಿಕ್ಷಣ ತಜ್ಞರು, ಸಂಪನ್ಮೂಲ ವ್ಯಕ್ತಿ ಯಾಗಿ ಬಂದಿರುವ ಇವರುಗಳು ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಿದರು.

ರಿಯಾಜ್ ಜನರಲ್ ಮ್ಯಾನೇಜರ್ ಹಾಗೂ  ಸಂತೋಷ್ ಪಾಟೀಲ್, ಪಿ.ಎಚ್.ಸಿ ವೈದ್ಯಧಿಕಾರಿಗಳು ಇತ್ತೀಚಿನ ದಿನಗಲ್ಲಿ ಇಷ್ಟೊಂದು ವಿದ್ಯಾರ್ಥಿಗಳಲ್ಲಿ ಕಣ್ಣಿನ ಸಮಸ್ಯೆ ಕಾಣುತ್ತಿರುವುದು ನಿಜಕ್ಕೂ ಆತಂಕಕಾರಿ ಹಾಗೂ ಅದನ್ನ ಸರಿಪಡಿಸುವ ನಿಟ್ಟಿನ ಈ ಕಾರ್ಯಕ್ರಮದ ಅನುಕೂಲತೆಗಳನ್ನು ಅಭಿನಂದಿಸಿದರು.

ಪವನ್ ಕುಲಕರ್ಣಿ, ಲಕ್ಷ್ಮಿ ನಾರಾಯಣ ಮೂರ್ತಿ, ಅಕ್ಷಯ್ ಕುಮಾರ್, ಸ್ವರೂಪ್, ಮಹದೇವ್, ಪ್ರಕಾಶ್ ಎ, ಆಕಾಶ್, ಪ್ರಕಾಶ್ ಮೂದೇನಗುಡಿ ಬಿ.ಎಫ್.ಐ.ಎಲ್ ನಿಂದ,  ಧರ್,  ಸುನಿಲ್,  ಆದಿತ್ಯ, ಮತಿ ಗೀತಾ,  ಸಿದ್ದರೂಡ, ಮತಿ ಶಂಕರಮ್ಮ, ಮತಿ ಕಲಾವತಿ ಆಪೋಲ್ಲೋ ನಿಂದ,  ಪೀರಪ್ಪ ಎಸ್. ಡಿ.ಎಂ.ಸಿ ನಿಂದ ಹಾಗೂ ಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಗಣ್ಯರಿಗೆ ಗಿಡವನ್ನು ನೀಡೋ ಮುಖಾಂತರ ಸ್ವಾಗತ ಕೋರಿ ಸಸಿಗೆ ನೀರು ಏರೆಯೋ ಮುಖೇನ ಗಣ್ಯರಿಂದ ಉದ್ಘಾಟಿಸಲಾಯಿತು. ಮತಿ ಗಂಗಾ ಅವರು ಕಾರ್ಯಕ್ರಮ ವನ್ನು ನಿರೂಪಿಸಿ ವಂದನಾರ್ಪಣೆಯನ್ನು ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here