ಸುರಪುರ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡಲಾಗುತ್ತಿದೆ ಎನ್ನುವ ಆರೋಪದ ಮೇಲೆ ಗೂಡ್ಸ್ ವಾಹನ ಹಾಗೂ ಅಕ್ಕಿ ಚೀಲಗಳನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುವ ಘಟನೆ ನಡೆದಿದೆ.
ಶುಕ್ರವಾರ ಮದ್ಹ್ಯಾನದ ವೇಳೆ ನಗರದ ರಂಗಂಪೇಟೆ ಕಡೆಯಿಂದ ಗೂಡ್ಸ್ ವಾಹನವೊಂದು ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡಲಾಗುತ್ತಿದೆ ಎನ್ನುವ ಕುರಿತು ನಿಖರ ಮಾಹಿತಿ ಮೇರೆಗೆ ಪೊಲೀಸ್ ಇನ್ಸ್ಪೇಕ್ಟರ್ ಆನಂದ ವಾಗಮೊಡೆ ಮತ್ತು ಅವರ ತಂಡ ಕುಂಬಾರಪೇಟ ಬಳಿಯಲ್ಲಿ ನಿಂತು ವಾಹನ ಬರುವುದನ್ನು ಗಮನಿಸಿ ನಂತರ ಹತ್ತಿರ ಬಂದಾಗ ನಿಲ್ಲಿಸುವಂತೆ ಸೂಚಿಸಿದ ಮೇರೆಗೆ ಚಾಲಕ ವಾಹನ ಬಿಟ್ಟು ಓಡಿ ಹೋಗಿದ್ದಾನೆ,ನಂತರ ವಾಹನವನ್ನು ಠಾಣೆಗೆ ತಂದು ಪರಿಶೀಲನೆ ನಡೆಸಿದಾಗ ಪಡಿತರ ಅಕ್ಕಿ ಎಂದು ಅನುಮಾನ ಬಂದಿದ್ದು ಇದನ್ನು ಗುರಗುಂಟಾಕ್ಕೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ವಾಹನದ ಚಾಲಕ ನಂದೇಶ ಗುರುಗುಂಟಾ ಎಂದು ತಿಳಿದು ಬಂದಿದ್ದು ವಾಹನದ ಮಾಲೀಕ ಯಾರು ಎನ್ನುವುದನ್ನು ಪತ್ತೆ ಮಾಡಲಾಗುತ್ತಿದೆ,ವಾಹನದಲ್ಲಿ ಒಟ್ಟು 45 ಚೀಲ ಅಕ್ಕಿ ಇದ್ದು ಅದರ ಅಂದಾಜು 69,904 ರೂಪಾಯಿ ಎಂದು ತಿಳಿದು ಬಂದಿದೆ,ಇನ್ನೂ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪಿ.ಐ ಆನಂದ ವಾಗಮೊಡೆ ತಿಳಿಸಿದ್ದಾರೆ.ವಾಹನ ವಶ ಪಡಿಸಿಕೊಂಡ ತಂಡದಲ್ಲಿ ಶಿವರಾಜ ಹೆಚ್.ಸಿ,ಲಕ್ಕಪ್ಪ ಪಿ.ಸಿ,ಬಸವರಾಜ ಸಿ.ಪಿ.ಸಿ,ಮಲಕಾರಿ ಹೆಚ್.ಸಿ ಅವರು ಭಾಗವಹಿಸಿದ್ದು,ಪಂಚರಾದ ಸಚಿನಕುಮಾರ ನಾಯಕ,ತಾಜುದ್ದಿನ್ ಶೇಖ್ ಇವರುಗಳ ಸಮ್ಮುಖದಲ್ಲಿ ವಾಹನ ವಶ ಪಡಿಸಿಕೊಳ್ಳಲಾಗಿದೆ ಎಂದು ಪೊಲಿಸರು ತಿಳಿಸಿದರು.