ಅಭಿವೃದ್ಧಿ ನೆಪದಲ್ಲಿನ ಲೂಟಿ ತಡೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ

0
50

ವಾಡಿ; ಪಟ್ಟಣದ ಮುಖ್ಯ ರಸ್ತೆ ಅಭಿವೃದ್ಧಿ ನೆಪದಲ್ಲಿನ ಲೂಟಿ ಹಾಗು ಪರಿಸರ ಮಾಲಿನ್ಯ ತಡೆಗಟ್ಟುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸ್ಥಳೀಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮನವಿ ಪತ್ರ ಸಲ್ಲಿಸಿದ್ದಾರೆ.

ಪಟ್ಟಣದ ಶ್ರೀನಿವಾಸ ಗುಡಿ ವೃತ್ತದಿಂದ ಕೊಂಚುರು ರೈಲ್ವೆ ಮೇಲ್ ಸೇತುವೆ ವರೆಗಿನ ದ್ವಿಪತ ರಸ್ತೆ ಸುಮಾರು ಎರಡು ವರ್ಷಗಳಿಂದ ನಡೆಯುತ್ತಿದ್ದು ವೈಜ್ಞಾನಿಕವಾಗಿರದೆ ಕಳಪೆ ಗುಣಮಟ್ಟದ ರಸ್ತೆ ಇದಾಗಿದೆ ಎಂದು ನಾಲ್ಕೈದು ಸಲ ತಮಗೆ ಮತ್ತು ಪುರಸಭೆಗೆ ಪುರಾವೆ ಸಹಿತ ಮನವಿ ಸಲ್ಲಿಸಿದ್ದೇವೆ. ಕಾಮಗಾರಿ ಪೂರ್ಣನೆ ಗೊಂಡಿಲ್ಲ ಈಗ ಸಂಪೂರ್ಣ ಹಾಳಾಗಿದೆ. ಜಲ್ಲಿಕಲ್ಲುಗಳು ತೇಲಿ ತೆಗ್ಗುಗಳು ಬಿದ್ದಿವೆ,ಇದರಿಂದ ಕಳಪೆ ಕಾಮಗಾರಿ ಎದ್ದು ಕಾಣುತ್ತಿದೆ. ಸದ್ಯ ರಸ್ತೆ ಮೇಲೆ ಮುರುಮ (ಕೆಂಪು ಮಣ್ಣು) ಹಾಕಿ ಪಟ್ಟಣದ ತುಂಬೆಲ್ಲಾ ಧೂಳು ಹಬ್ಬಿಸಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತೆ ಮಾಡಿದ್ದಾರೆ.

Contact Your\'s Advertisement; 9902492681

ನಿರ್ಮಿಸಿದ ಅರ್ಧ ರಸ್ತೆಯನ್ನು ಸಂಪೂರ್ಣ ಒಡೆದು ಪುನಹ ನಿರ್ಮಿಸಬೇಕಾದ ಗುತ್ತಿಗೆದಾರ, ಒಂದೆರಡು ಕಡೆ ರಸ್ತೆ ಒಡೆದು ದುರಸ್ತಿ ಮಾಡಿ ಬಿಲ್ ಎತ್ತುವ ತರಾತುರಿಯಲ್ಲಿದ್ದಾರೆ,ರಸ್ತೆ ವಿಭಜಕ ಸಮರ್ಪಕವಾಗಿ ಮಾಡದೆ ರಸ್ತೆ ದಟ್ಣಣಗೆ ಮತ್ತಷ್ಟು ಆಸ್ಪದಮಾಡಿ ಜನರಿಗೆ ತೊಂದರೆ ನೀಡಲು ಮುಂದಾಗಿದ್ದಾರೆ, ಕೆಲವೂಂದ ಕಡೆ ಕಾಂಕ್ರೀಟ್ ಹಾಕಿ ಸಂಪೂರ್ಣ 5 ಕೋಟಿ ಸಾರ್ವಜನಿಕ ಸಂಪತ್ತು ಹಾಳುಮಾಡಿರುವುದು ಸ್ಪಷ್ಟವಾಗಿರುವುದು ಮೆಲ ನೋಟಕ್ಕೆ ಕಂಡುಬಂದಿದ್ದು ಇದರ ಬಗ್ಗೆ ತಾವು ಪರಿಶೀಲಿಸಿ,ಕಳಪೆ ಕಾಮಗಾರಿ ತಡೆಗಟ್ಟಿ, ಗುತ್ತಿಗೆದಾರರ ಮೇಲೆ ಕ್ರಮಕೈಗೊಳ್ಳಿ ಎಂದು ವಿನಂತಿ.

ಆದಾನಿ ಒಡೆತನದ ಎಸಿಸಿ ಕಂಪನಿಯ ಪರಿಸರ ನಿಸ್ಕಾಳಜಿ ಬಗ್ಗೆ ಕಳೆದ ನವೆಂಬರ 20 ರಂದು ಪಟ್ಟಣದ ಶ್ರೀನಿವಾಸ ಚೌಕನಲ್ಲಿ ಬೃಹತ ಪ್ರತಿಭಟನೆ ಮೂಲಕ ನ್ಯಾಯಕ್ಕಾಗಿ ಹೋರಾಟ ಮಾಡಿದರು ಸಂಭಂದಿಸಿದ ಅಧಿಕಾರಿಗಳು ಇನ್ನೂ ವರೆಗೂ ಸ್ಪಂದಿಸಿಲ್ಲ.

ಡಾ ಬಾಬ ಸಾಹೇಬ್ ಅಂಬೇಡ್ಕರ ಅವರ ಭವನ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಬಗ್ಗೆ, ಬಸ್ ನಿಲ್ದಾಣ ನಿರ್ಮಾಣದ ಬಗ್ಗೆ,ಎಸಿಸಿ ಕಂಪನಿಯ ಆಡಳಿತ ಮಂಡಳಿಯವರು ಸ್ಥಳೀಯ ಬಡ ಕಾರ್ಮಿಕರಿಗೆ ಮಾಡಿರುವ ಮತ್ತು ಮಾಡುತ್ತಿರುವ ಅನ್ಯಾಯದ ಬಗ್ಗೆ, ಗ್ರಂಥಾಲಯ, ಆಟದ ಮೈದಾನ ಹಾಗೂ ಸಾರ್ವಜನಿಕ ಉದ್ಯಾನವನ ಸೇರಿದಂತೆ ಅನೇಕ ಸಮಸ್ಯೆಗಳ ಪಟ್ಟಿ ಮಾಡಿ ಅವುಗಳ ಪರಿಹಾರಕ್ಕಾಗಿ ಕಳೆದ ನವೆಂಬರ್ 20 ರಂದು ವಾಡಿ ಪಟ್ಟಣದ ಶ್ರೀನಿವಾಸ ಗುಡಿ ವೃತ್ತದಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಶಾಂತಿಯುತ ಪ್ರತಿಭಟನೆ ಮಾಡಿ ತಮಗೆ ತಾಲೂಕಿನ ತಹಶಿಲ್ದಾರರಾದ ಸೈಯದ್ ಷಾಷಾವಲಿ ಸರ್ ಅವರ ಮುಖಾಂತರ ಮನವಿಸಲ್ಲಿಸಿದ್ದೇವೆ.

ಪಟ್ಟಣದ ಮುಖ್ಯ ರಸ್ತೆಯ ಹಾಗೂ ಆದಾನಿ ಒಡೆತನದ ಎಸಿಸಿ ಕಂಪನಿಯ ಪರಿಸರ ಮಾಲಿನ್ಯದಿಂದ ಜನಸಾಮಾನ್ಯರಿಗೆ ಆಗುತ್ತಿರುವ ದುಷ್ಪರಿಣಾಮದ ಗಂಭೀರತೆಯನ್ನು ಅರಿತು ಕ್ರಮಕೈಗೊಳ್ಳಿ ಎಂದು ಪುರಸಭೆ ಮುಖ್ಯಾಧಿಕಾರಿಗಳ ಮುಖಾಂತರ ಮಾನ್ಯ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಕೇಳಿಕೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here