ಅರಮನೆ ಆವರಣದಲ್ಲಿ ಸುರಪುರ ವಿಜಯೋತ್ಸವ ಫೆ 8ಕ್ಕೆ

0
9

ಸುರಪುರ: 1857ರ ಸುರಪುರ ವಿಜಯೋತ್ಸವ ಕಾರ್ಯಕ್ರಮವನ್ನು ನಗರದ ಹೊಸ ಅರಮನೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಇತಿಹಾಸಕಾರ ಭಾಸ್ಕರರಾವ್ ಮುಡಬೂಳ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿ,1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸುರಪುರ ಅರಸರ ಪಾತ್ರ ಮಹತ್ತರವಾದುದು,ಇದರ ಅಂಗವಾಗಿ ಪ್ರತಿವರ್ಷ ಸುರಪುರ ವಿಜಯೋತ್ಸವ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದರು.ಈಬಾರಿ ನಮ್ಮ ಸುರಪುರ ಇತಿಹಾಸ ಸಂಶೋಧನಾ ಕೇಂದ್ರ ಭೀ.ಗುಡಿ ಹಾಗೂ ಓಕಳಿ ಪ್ರಕಾಶನ ಸುರಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರಪುರ ಅರಸು ಮನೆತನದ ಡಾ:ರಾಜಾ ಕೃಷ್ಣಪ್ಪ ನಾಯಕ ವಹಿಸಲಿದ್ದು,ಡೀನರು,ಪ್ರಖ್ಯಾತ ಸಾಂಸ್ಕøತಿಕ ಚಿಂತಕರು ಹಾಗೂ ಸಮಾಜ ವಿಜ್ಞಾನಗಳ ನಿಕಾಯ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಡಾ:ಚಲುವರಾಜು ಅವರು ಉದ್ಘಾಟಿಸಲಿದ್ದಾರೆ,ಸುರಪುರ ವಿಜಯೋತ್ಸವದ ಕುರಿತು ಬಿಳಗಿ ಆಯುರ್ವೇದ ಮಹಾವಿದ್ಯಾಲಯದ ಸಂಸ್ಕøತ ಪ್ರಾಧ್ಯಾಪಕರಾದ ಡಾ:ಲಕ್ಷ್ಮೀಕಾಂತ ವಿ.ಮೋಹರೀರ್ ವಿಶೇಷ ಉಪನ್ಯಾಸ ನೀಡಲಿದ್ದಾರೆ,ಮುಖ್ಯ ಅತಿಥಿಗಳಾಗಿ ತಾಲೂಕು ಆರೋಗ್ಯಾಧಿಕಾರ ಡಾ:ಆರ್.ವಿ ನಾಯಕ,ಇತಿಹಾಸಕಾರ ಭಾಸ್ಕರರಾವ್ ಮುಡಬೂಳ,ಆರಕ್ಷಕ ಉಪ ನಿರೀಕ್ಷಕ ಕೃಷ್ಣಾ ಸುಬೇದಾರ ವೇದಿಕೆಯಲ್ಲಿರಲಿದ್ದಾರೆ.ಅಲ್ಲದೆ ವಿವಿಧ ರಂಗಗಳಲ್ಲಿನ ಸಾಧಕರಾದ ಪತ್ರಕರ್ತ ಆನಂದ ಸೌದಿ,ಕಲಬುರ್ಗಿ ಹೈಕೋರ್ಟ್ ನ್ಯಾಯವಾದಿ ಜೆ.ಅಗಸ್ಟಿನ್,ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ,ಸಾಮಾಜಿಕ ಹೋರಾಟಗಾರ ಮಾನಪ್ಪ ಹಡಪದ ಹಾಗೂ ತಾಲೂಕು ಪಿ.ಡಿ.ಓ ಕ್ಷೇಮಾಭಿವೃಧ್ಧಿ ಸಂಘದ ಅಧ್ಯಕ್ಷ ರಾಜಕುಮಾರ ಸುಬೇದಾರ ಇವರುಗಳಿಗೆ ಸನ್ಮಾನ ನಡೆಸಲಾಗುವುದು ಎಂದು ತಿಳಿಸಿದರು.

Contact Your\'s Advertisement; 9902492681

ಇತಿಹಾಸ ಸಂಶೋಧಕ ಕೃಷ್ಣಾ ಸುಬೇದಾರ ಮಾತನಾಡಿ,ಇದು ತುಂಬಾ ಅರ್ಥಪೂರ್ಣವಾದ ಕಾರ್ಯಕ್ರಮವಾಗಿದ್ದು ಜೈಪುರ ಮಾದರಿಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ,ಕೇವಲ ಕಾರ್ಯಕ್ರಮಕ್ಕೆ ಸಂಬಂಧಿಸಿದವರನ್ನು ಹೊರತುಪಡಿಸಿ ಇತರೆ ಯಾರಿಗೂ ವೇದಿಕೆಯಲ್ಲಿ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.

ಸುದ್ದಿಗೊಷ್ಠಿಯಲ್ಲಿ ಉಪನ್ಯಾಸಕ ರಾಜಗೋಪಾಲ ವಿಭೂತಿ,ರಾಜಕುಮಾರ ಎಸ್.ದೊರೆ,ಯಂಕಪ್ಪ ಎಸ್.ಬಿ.ಐ ಹಾಗೂ ಮರೆಪ್ಪ ನಾಯಕ ಗುಡ್ಡಕಾಯಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here