ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ “ಕೌದಿ” ನಾಟಕ ಪ್ರದರ್ಶನ 

0
26

ಕಲಬುರಗಿ: ಕಷ್ಟಸುಖಗಳನ್ನು ಹಂಚಿಕೊಂಡು ಕೌದಿ ಹೊಲಿಯುವವರ ಬದುಕನ್ನು ಕಟ್ಟಿಕೊಟ್ಟ ನಾಟಕ ‘ಕೌದಿ’ ಚೆನ್ನಾಗಿದೆ. ಇದು ನಮ್ಮ ಮನ ಪರಿವರ್ತನೆ ಆಗುವಂಥ ಪರಿಣಾಮಕಾರಿ ನಾಟಕವಾಗಿದೆ ಎಂದು ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಡಾ.ಪಿ.ರಂಗನಾಥ್ ತಿಳಿಸಿದರು.

ಕೇಂದ್ರ ಕಾರಾಗೃಹದಲ್ಲಿ ಗುರುವಾರ ಏರ್ಪಡಿಸಿದ್ದ ಗಣೇಶ ಅಮೀನಗಡ ಅವರ ‘ಕೌದಿ’ ನಾಟಕದ ಪ್ರದರ್ಶನ ನಂತರ ಅವರು ಮಾತನಾಡಿದರು. ಕೌದಿ ನಾಟಕದಿಂದ ಕೈದಿಗಳೂ ಬದಲಾಗಬೇಕು. ಎಲ್ಲವನ್ನು ಹೊಂದಿಸಿಕೊಂಡು ಹೊಲಿಯುವ ಕೌದಿಯಿಂದ ಕಲಿಯುವುದು ಬಹಳವಿದೆ. ಸಹಮತದಿಂದ, ಸಹಬಾಳ್ವೆಯಿಂದ ಬದುಕಬೇಕು ಎಂಬ ಸಂದೇಶವನ್ನು ಕೌದಿ ನಾಟಕ ನೀಡಿತು ಎಂದು ಹೇಳಿದರು.

Contact Your\'s Advertisement; 9902492681

ಅಧೀಕ್ಷಕರಾದ ಬಿ.ಎಂ.ಕೊಟ್ರೇಶ್ ಮಾತನಾಡಿ, ಕೌದಿಯ ಹಿನ್ನೆಲೆ, ಮಹತ್ವವನ್ನು ಈ ನಾಟಕದಿಂದ ಅರಿತೆವು. ನಮ್ಮ ಜೈಲಿನ ಬಂಧಿಗಳಿಗೆ ಈ ನಾಟಕ ಬಹಳ ಸೇರಿತು. ಯುವತಿಯಾದ ಭಾಗ್ಯಶ್ರೀ ಪಾಳಾ ಅವರು ಮನೋಜ್ಞವಾಗಿ ಅಭಿನಯಿಸಿದರು ಎಂದು ಮೆಚ್ಚುಗೆಯಾಡಿದರು.

ಕೆಎಸ್‍ಐಎಸ್‍ಎಫ್ ಸಹಾಯಕ ಕಮಾಂಡೆಂಟ್ ಜಗನ್ನಾಥ್ ಮಾತನಾಡಿ, ಈ ನಾಟಕ ನೋಡುವಾಗ ನನ್ನ ಬಾಲ್ಯಜೀವನ ನೆನಪಾಯಿತು. ಬೇಸಿಗೆ ರಜೆಯಲ್ಲಿ ನಮ್ಮ ತಾಯಿ ಕೌದಿ ಹೊಲಿಯುವುದನ್ನು ನೋಡುತ್ತ ಕೂಡುತ್ತಿದ್ದೆ. ಈಗಲೂ ನಮ್ಮ ತಾಯಿ ಕೌದಿ ಹೊಲಿಯುತ್ತಾರೆ ಎಂದು ಸ್ಮರಿಸಿದರು.

ಕೈದಿ ರಾಮಣ್ಣಾ ಯಾದವ ಮಾತನಾಡಿ, ಸಾಂಪ್ರದಾಯಿಕ ಕಲೆಯಾದ ಕೌದಿ ಹೊಲಿಯುವವರನ್ನು ಈ ನಾಟಕ ಪರಿಚಯಿಸಿತು ಜೊತೆಗೆ ಕೌದಿಯಲ್ಲೇ ಹುಟ್ಟಿ, ಬೆಳೆದ ನನಗೆ ಬೆಚ್ಚಗಿನ ಕನಸುಗಳನ್ನು ಈ ನಾಟಕ ತುಂಬಿತು ಎಂದು ಶ್ಲಾಘಿಸಿದರು.

ಇನ್ನೊಬ್ಬ ಕೈದಿ ಶ್ರವಣಕುಮಾರ್ ಮಾತನಾಡಿ, ನಮ್ಮ ಅಜ್ಜ, ಅಜ್ಜಿ, ತಾಯಿ, ತಂದೆ ಬೆಳೆದದ್ದು ಕೌದಿಯಿಂದಲೇ. ನನ್ನ ಬಾಲ್ಯವೂ ಕೌದಿಯಲ್ಲೇ ಕಳೆಯಿತು. ಕೌದಿ ಹೊಲಿಯುವವರ ಸಮಸ್ಯೆಗಳನ್ನು ಈ ನಾಟಕದಿಂದ ತಿಳಿದುಕೊಂಡೆ ಎಂದರು.

ಕೆಎಸ್‍ಐಎಸ್‍ಎಫ್ ಇನ್‍ಸ್ಪೆಕ್ಟರ್ ವಿಶ್ವನಾಥ ಪಾಟೀಲ, ಸಹಾಯಕ ಅಧೀಕ್ಷಕ ಹುಸೇನ್ ಪೀರ್, ಜೈಲರುಗಳಾದ ವಿ.ಸುನಂದಾ, ಪರಮಾನಂದ ಹರವಾಳ, ಸಾಗರ ಪಾಟೀಲ, ಆಡಳಿತಾಧಿಕಾರಿ ಭೀಮಾಶಂಕರ ಡಾಂಗೆ, ಕಾರಾಗೃಹದ ಶಿಕ್ಷಕ ನಾಗರಾಜ ಮೂಲಗೆ, ನಾಟಕಕಾರ ಗಣೇಶ ಅಮೀನಗಡ, ನಾಟಕ ನಿರ್ದೇಶಕ ಜಗದೀಶ್ ಆರ್.ಜಾಣಿ, ಕಲಾವಿದೆ ಪದ್ಮಾ ರಾಯಚೂರು ಹಾಗೂ ಬೆಳಕಿನ ಸಂಯೋಜಕ ಸಿದ್ಧಾರ್ಥ ಕಟ್ಟಿಮನಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here