ಶಕ್ತಿ ಯೋಜನೆಯಡಿ ಪ್ರತಿನಿತ್ಯ 60 ಲಕ್ಷ ಮಹಿಳೆಯರು ಉಚಿತ ಪ್ರಯಾಣ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

0
39

ಕಲಬುರಗಿ: ಕರ್ನಾಟಕದಲ್ಲಿ ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಫ್ರೀ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ. ಪರಿಣಾಮವಾಗಿ ಪ್ರತನಿತ್ಯ 60 ಲಕ್ಷದಂತೆ ಇದೂವರೆಗೆ 150 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಹೇಳಿದರು.

ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕಲಬುರಗಿ ವತಿಯಿಂದ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ನಾಲ್ಕು ನಿಗಮಗಳಲ್ಲಿ ಕೆಕೆಆರ್ ಟಿಸಿ ಆರ್ಥಿಕವಾಗಿ ಸ್ವಲ್ಪ ಸದೃಡವಾಗಿದೆ. ನಷ್ಟ ಅನುಭವಿಸಿದರೂ ಕೂಡಾ ಸಾರ್ವಜನಿಕರ ಹಿತದೃಷ್ಟಿಯಿಂದ ಸಾರಿಗೆ ಸೌಲಭ್ಯ ಒದಗಿಸಬೇಕಾಗುತ್ತದೆ. ನಿಗಮ ಲಾಭದಲ್ಲಿ ನಡೆಯಬೇಕಿದ್ದರೆ, ನೌಕರರು ಹಾಗೂ ಸಿಬ್ಬಂದಿ ವರ್ಗದವರು ಸಹಕಾರದಿಂದ ಕೆಲಸ ಮಾಡಬೇಕು ಎಂದರು.

ಕಳೆದ ಎಂಟು ವರ್ಷದಲ್ಲಿ 14,000 ಸಿಬ್ಬಂದಿ ನಿವೃತ್ತರಾದರೂ ನೇಮಕಾತಿ ಆಗಿರಲಿಲ್ಲ. ಆದರೆ ಇದೀಗ 371 J ಅಡಿಯಲ್ಲಿ ಆಯ್ಕೆಯಾದ 1614 ಸಿಬ್ಬಂದಿಗಳಿಗೆ ನೇಮಕಾತಿ ಆದೇಶವನ್ನು ಇದೇ 18 ರಂದು‌ ಹಸ್ತಾಂತರಿಸಲಾಗುವುದು.

2024-25 ಸಾಲಿನ ಬಜೆಟ್ ನಲ್ಲಿ ರೂ 6600 ಕೋಟಿ ಅನುದಾನವನ್ನು ಶಕ್ತಿ ಯೋಜನೆಗೆ ನೀಡಲು ಉದ್ದೇಶಿಸಲಾಗಿದೆ ಎಂದ ಸಚಿವರುಕಲ್ಯಾಣ ಕರ್ನಾಟಕಕ್ಕೆ ಈಗಾಗಲೇ 630 ನೂತನ‌ ಬಸ್ ನೀಡಲಾಗಿದೆ. ಮತ್ತೇ ಈಗ ರಾಜ್ಯಕ್ಕೆ 5800 ಹಾಗೂ ಕಲ್ಯಾಣ ಕರ್ನಾಟಕಕ್ಕೆ 475 ನೂತನ ಬಸ್ ನೀಡಲಾಗುವುದು ಎಂದರು.

ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಅವರ ಬೇಡಿಕೆಯಂತೆ ಸ್ಥಳ ಕೊಟ್ಟರೆ ಕಲಬುರಗಿ ನಗರಕ್ಕೆ ಎರಡು ನೂತನ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದರು.

ಸಾರಿಗೆ ನಿಗಮದ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ದಿನಾಂಕ 01-01-2020 ರಿಂದ ಜಾರಿಗೆ ಬರಬೇಕಾಗಿದ್ದ ವೇತನ ಪರಿಷ್ಕರಣೆಯು ದಿನಾಂಕ 17-03-2023 ರಿಂದ ಜಾರಿಗೆ ಬಂದಿರುತ್ತದೆ. ದಿನಾಂಕ 01-01-2020 ರಿಂದ 28-02-2023 ರವರೆಗಿನ 38 ತಿಂಗಳಗಳ ವೇತನ ಪರಿಷ್ಕರಣೆ ಹಿಂಬಾಕಿಯನ್ನು ಪಾವತಿಸುವ ಬೇಡಿಕೆ ಮಂಡಿಸಲಾಯಿತು. ಜೊತೆಗೆ ನೌಕರರು ತಮ್ಮ ಹಲವಾರು ಬೇಡಿಕೆಗಳ ಪಟ್ಟಿಯನ್ನು ಸಾರಿಗೆ ಸಚಿವರಿಗೆ ನೀಡಿದರು.

ಇದಕ್ಕೆ ಪ್ರತಿಯಾಗಿ ಮಾತನಾಡಿದ ಸಚಿವರು ನೌಕರರ ಬೇಡಿಕೆಯ ಕುರಿತಂತೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದರು.

ವೇದಿಕೆಯ ಮೇಲೆ ಸಚಿವರಾದ ಪ್ರಿಯಾಂಕ್ ಖರ್ಗೆ, ಶರಣಬಸಪ್ಪಗೌಡ ದರ್ಶನಾಪುರ, ಶಾಸಕರಾದ ಎಂ ವೈ ಪಾಟೀಲ, ಅಲ್ಲಮಪ್ರಭು ಪಾಟೀಲ, ಕನೀಜ್ ಫಾತೀಮಾ, ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ, ಕೆಕೆಆರ್ ಟಿಸಿ ಎಂಡಿ ರಾಚಪ್ಪ, ಚಂದ್ರಕಾಂತ ಗದ್ದಿಗಿ, ಸಂಗಮನಾಥ ರಬಶೆಟ್ಟಿ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here