ಕೆಕೆಸಿಸಿಐಯೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ ಶರಣಬಸವ ವಿಶ್ವವಿದ್ಯಾಲಯ

0
50

ಕಲಬುರಗಿ: ಉದ್ಯಮಶೀಲತೆಗೆ ವೇದಿಕೆಯನ್ನು ಒದಗಿಸಲು ಶರಣಬಸವ ವಿಶ್ವವಿದ್ಯಾಲಯ ಮತ್ತು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ಉದ್ಯಮಶೀಲತೆ ಅಭಿವೃದ್ಧಿಗೆ ಉತ್ತೇಜನ ನೀಡುವ ಹಾಗೂ ಕೆಕೆಸಿಸಿಐನಲ್ಲಿ ಇನ್‍ಕ್ಯೂಬೆಷನ್ ಸೆಂಟರ್ ಸ್ಥಾಪನೆ ಮೂಲಕ ಉದಯೋನ್ಮುಖ ಉದ್ಯಮಿಗಳಿಗೆ ತಮ್ಮ ಆಲೋಚನೆಗಳನ್ನು ವಾಸ್ತವಿಕವಾಗಿ ಅಭಿವೃದ್ಧಿಪಡಿಸುವ ತಿಳಿವಳಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಿದವು. ವಿಶ್ವವಿದ್ಯಾಲಯದ ಕುಲಸಚಿವ ಡಾ. ಅನಿಲಕುಮಾರ ಬಿಡವೆ ಅವರು ಶರಣಬಸವ ವಿಶ್ವವಿದ್ಯಾಲಯದ ಪರವಾಗಿ ಎಂಒಯುಗೆ ಸಹಿ ಹಾಕಿದರೆ, ಕೆಕೆಸಿಸಿಐ ಪರವಾಗಿ ಅಧ್ಯಕ್ಷ ಶಶಿಕಾಂತ್ ಬಿ ಪಾಟೀಲ್ ಅವರು ಸಹಿ ಹಾಕಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಮತ್ತು ಶಶಿಕಾಂತ್ ಬಿ ಪಾಟೀಲ್ ಅವರು ಸಹಿ ಪ್ರತಿಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.

ಕೆಕೆಸಿಸಿಐ ಸದಸ್ಯರು, ಶರಣಬಸವ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶದ ಉದ್ಯಮಿಗಳಿಗೆ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮಗಳು, ನಿರ್ವಹಣಾ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ತರಬೇತಿ ಕಾರ್ಯಾಗಾರಗಳನ್ನು ನಡೆಸುವ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಉದ್ಯಮಶೀಲತೆಯ ಅಭಿವೃದ್ಧಿಯನ್ನು ಉತ್ತೇಜಿಸುವುದು ಎಂಒಯುನ ಮುಖ್ಯ ಉದ್ದೇಶವಾಗಿದೆ.

Contact Your\'s Advertisement; 9902492681

ಇನ್‍ಕ್ಯೂಬೆಷನ್ ಸೆಂಟರ್ ಸ್ಥಾಪನೆ ಮತ್ತು ಅದರ ಕೆಲಸದ ವಿಧಾನಗಳನ್ನು ನಂತರ ಪ್ರತ್ಯೇಕವಾಗಿ ಹಾಗೂ ವಿವರವಾಗಿ ತಿಳಿಸಲಾಗುವುದು. ಶರಣಬಸವ ವಿಶ್ವವಿದ್ಯಾಲಯ ಮತ್ತು ಕೆಕೆಸಿಸಿಐ ಜೊತೆಯಾಗಿ ಅಗತ್ಯವಿದ್ದಲ್ಲಿ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೈಗಾರಿಕೆಗಳು ಹಾಗೂ ಉದ್ಯಮಶೀಲತೆಯ ಉತ್ತೇಜನಕ್ಕಾಗಿ ಇತರ ಪ್ರಮುಖ ಸಂಸ್ಥೆಗಳು ಮತ್ತು ಏಜೆನ್ಸಿಗಳೊಂದಿಗೆ ಸಹಕರಿಸುತ್ತವೆ. ಕೈಗಾರಿಕೆಗಳ ಮತ್ತು ವಾಣಿಜ್ಯೋದ್ಯಮ ಅಭಿವೃದ್ಧಿಗಾಗಿ ಜಂಟಿ ಸಂಶೋಧನಾ ಯೋಜನೆಯನ್ನು ಕೈಗೊಳ್ಳಲು ಸಹ ಎಂಒಯು ಅವಕಾಶಗಳನ್ನು ಒದಗಿಸುತ್ತದೆ. ಸೂಕ್ತ ಸಮಯದಲ್ಲಿ ಅಗತ್ಯವನ್ನು ಆಧರಿಸಿ ಧನಸಹಾಯ ಮತ್ತು ಇತರ ಕಾರ್ಯಾಚರಣೆಯ ವಿಧಾನಗಳನ್ನು ಚರ್ಚಿಸಲಾಗುವುದು.

ಇಂಟರ್ನ್‍ಶಿಪ್‍ಗಳ ಮೂಲಕ ವಿದ್ಯಾರ್ಥಿಗಳ ಸಾಮಥ್ರ್ಯವನ್ನು ನಿರ್ಮಿಸುವ ನಿಟ್ಟಿನಲ್ಲಿ ಶರಣಬಸವ ವಿಶ್ವವಿದ್ಯಾಲಯವು ಕೆಕೆಸಿಸಿಐನ ಬೆಂಬಲವನ್ನು ಪಡೆಯುತ್ತದೆ. ಕೆಕೆಸಿಸಿಐ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ತನ್ನ ಸದಸ್ಯ ಸಂಸ್ಥೆಗಳಲ್ಲಿ ಇಂಟರ್ನ್‍ಶಿಪ್ ಮಾಡಲು ಅವಕಾಶವನ್ನು ಒದಗಿಸುತ್ತದೆ. ಇದಲ್ಲದೇ ತನ್ನ ಸದಸ್ಯ ಸಂಸ್ಥೆಯಲ್ಲಿ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರವನ್ನು ಕಂಡುಹಿಡಿಯಲು ಸಂಸ್ಥೆಯು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಂಶೋಧನೆ ಮಾಡಲು ಅವಕಾಶಗಳನ್ನು ದೊರಕಿಸುತ್ತದೆ. ಸಂಸ್ಥೆಯ ಆಸಕ್ತಿಗೆ ಧಕ್ಕೆಯಾಗದಂತೆ ಸಂಶೋಧನೆಯ ಫಲಿತಾಂಶಗಳನ್ನು ಕೇಸ್ ಸ್ಟಡಿ ಮತ್ತು ಸಂಶೋಧನಾ ಪ್ರಬಂಧಗಳ ರೂಪದಲ್ಲಿ ಪ್ರಕಟಿಸಬಹುದು.

ಶರಣಬಸವ ವಿಶ್ವವಿದ್ಯಾಲಯ ಕ್ಯಾಂಪಸ್‍ನಲ್ಲಿ ಅಥವಾ ಕೆಕೆಸಿಸಿಐ ಆವರಣದಲ್ಲಿ ಜಂಟಿಯಾಗಿ ವಿಚಾರ ಸಂಕಿರಣಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸಲು ಎಂಒಯು ಅವಕಾಶಗಳನ್ನು ಒದಗಿಸುತ್ತದೆ. ವಿಶ್ವವಿದ್ಯಾಲಯದಲ್ಲಿ ಕೆಕೆಸಿಸಿಐ ಬಳಕೆಗೆ ಮೂಲಸೌಕರ್ಯ ಸೌಲಭ್ಯಗಳನ್ನು ಮತ್ತು ಕೆಕೆಸಿಸಿಐನಲ್ಲಿ ವಿಶ್ವವಿದ್ಯಾಲಯದ ಬಳಕೆಗಾಗಿ ಮೂಲಸೌಕರ್ಯ ಸೌಲಭ್ಯಗಳನ್ನು ವಿಸ್ತರಿಸಲು ಸಹ ಒಪ್ಪಿಗೆ ನೀಡಲಾಗಿದೆ.

ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಹಾಗೂ ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಅವರು ವಿಶ್ವವಿದ್ಯಾಲಯ ಕೆಕೆಸಿಸಿಐ ಜೊತೆ ಮಾಡಿಕೊಂಡ ತಿಳುವಳಿಕೆ ಒಪ್ಪಂದಕ್ಕೆ ಸಂತಸ ವ್ಯಕ್ತಪಡಿಸಿ, ವಿದ್ಯಾರ್ಥಿಗಳಿಗೆ ಭವಿಷ್ಯದ ಉದ್ಯಮಿಗಳಾಗಿ ತಮ್ಮನ್ನು ತಾವು ರೂಪಿಸಿಕೊಳ್ಳಲು ಸಹಾಯವಾಗುವುದು ಎಂದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here