ಫೆ.26 ರಿಂದ ಎರಡು ದಿನಗಳ ಬೃಹತ್ ಉದ್ಯೋಗ ಮೇಳದಲ್ಲಿ ಪ್ರದರ್ಶನ ಮಳಿಗೆ ನೋಂದಣಿಗೆ ಅವಕಾಶ

0
13

ಬೆಂಗಳೂರು; ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಫೆಬ್ರವರಿ 26 ಮತ್ತು 27 ರಂದು ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಬೆಂಗಳೂರಿನ ಅರಮನೆಯ ಮೈದಾನದಲ್ಲಿ ಆಯೋಜಿಸಲಾಗಿದೆ.

ಉದ್ಯೋಗ ಮೇಳಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಎಲ್ಲಾ ರೀತಿಯ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಸುಮಾರು 50 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಮತ್ತು ರಾಜ್ಯದ ಎಲ್ಲಾ ಉದ್ದಿಮೆಗಳ ವಲಯಗಳಿಂದ 500ಕ್ಕೂ ಹೆಚ್ಚಿನ ಪ್ರತಿಷ್ಠಿತ ಬೃಹತ್/ಮಧ್ಯಮ/ಸಣ್ಣ ಉದ್ಯೋಗದಾತ ಸಂಸ್ಥೆಗಳು ಭಾಗವಹಿಸುವ ನಿರೀಕ್ಷೆಯಿದೆ.

Contact Your\'s Advertisement; 9902492681

ಯುವ ಸಮೃದ್ಧಿ ಸಮ್ಮೇಳನವಾದ ಈ ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳದ ಕಾರ್ಯಕ್ರಮದಲ್ಲಿ ರಾಜ್ಯದ ಯುವಜನತೆಗೆ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಉಪಯುಕ್ತವಾಗುವಂತೆ ಕರ್ನಾಟಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೂಪಿಸಿರುವ ಯುವ ಕೇಂದ್ರಿತ (40 ವರ್ಷದೊಳಗಿನ ಫಲಾನುಭವಿಗಳು) ಯೋಜನೆಗಳನ್ನು ಪ್ರದರ್ಶಿಸಲು ತಮ್ಮ ಇಲಾಖೆ/ಸಂಸ್ಥೆಯು ಪಾಲ್ಗೊಳ್ಳಬಹುದಾಗಿದೆ.

ಈ ಕಾರ್ಯಕ್ರಮದಲ್ಲಿ ತಮ್ಮ ಯುವ ಕೇಂದ್ರಿತ ಯೋಜನೆಯ ಮಾಹಿತಿಗಳನ್ನು ಪ್ರದರ್ಶಿಸಿ, ರಾಜ್ಯದ ಆಸಕ್ತ ಯುವಜನತೆಯು ಸ್ವಯಂ ಉದ್ಯೋಗಿಗಳಾಗಲು/ಸ್ವಾವಲಂಭಿಗಳಾಗಲು ಅರಿವು ಮೂಡಿಸಿ, ಪ್ರೇರೆಪಿಸಿ, ಜೀವನದಲ್ಲಿ ಭರವಸೆಯ ಬೆಳಕು ಮೂಡಿಸುವಲ್ಲಿ ಯುವಕರ ಪಾತ್ರ ಪ್ರಮುಖವಾಗಿದೆ.

ಪ್ರದರ್ಶನ ಮಳಿಗೆಗೆ ತಮ್ಮ ಇಲಾಖೆ/ಸಂಸ್ಥೆಯು ನೊಂದಣಿ ಮಾಡಿಕೊಳ್ಳಲು ಗೂಗಲ್ ಫಾರ್ಮ್‍ನಲ್ಲಿ http://tinyurl.com/Udyoga-Mela-Exhibition-Stalls ಮತ್ತು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಬೆಂಗಳೂರು ಕಛೇರಿಯ ಇ-ಮೇಲ್ udyogamela.ksdc@karnataka.gov.in ಗೆ ಫೆಬ್ರವರಿ 12 ರೊಳಗೆ ಕಳುಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕೆ.ಎಸ್.ಡಿ.ಸಿ. ಕಾರ್ಯನಿರ್ವಾಹಕ ನಿರ್ದೇಶಕರು-3, ಶ್ರೀಮತಿ ಸುಮತಿ ಬಿ.ಎಸ್., ಮೊಬೈಲ್ ಸಂಖ್ಯೆ: 9663451401, ಮಹೇಶ್ ಎಂ. ಮೊಬೈಲ್ ಸಂಖ್ಯೆ: 8152882461 ಗೆ ಸಮಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here