ಕಲಬುರಗಿ; ಫೆ.25ರಂದು ಕೋಲಿ, ಕಬ್ಬಲಿಗ ಸಮಾಜದ ರಾಜ್ಯ ಮಟ್ಟದ ಸಮಾವೇಶಕ್ಕೆ ನಿರ್ಣಯ

0
206

ಕಲಬುರಗಿ: ನಗರದ ಎನ್.ವಿ. ಮೈದಾನದಲ್ಲಿ ಫೆಬ್ರುವರಿ 25 ರಂದು ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ ಮತ್ತು ಮೊಗವೀರ ಸಮಾಜದ ರಾಜ್ಯ ಮಟ್ಟದ ಸಮಾವೇಶವನ್ನು ಅದ್ದೂರಿಯಾಗಿ ನಡೆಸಲು ಶುಕ್ರವಾರ ನಗರದ ಐವಾನ್- ಇ. ಶಾಹಿ ಅತಿಥಿ ಗೃಹದಲ್ಲಿ ನಡೆದ ಸಮಾಜದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಮಾಜದ ಹಿರಿಯ ಮುಖಂಡರು ಹಾಗೂ ವಿಧಾನ ಪರಿಷತ್ತಿನ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವಾರು ಜಿಲ್ಲೆಗಳಿಂದ ಬಂದ ಸಮಾಜದ ಮುಖಂಡರು ಮಾತನಾಡಿ, ನಮ್ಮ ಸಮಾಜ ಎಸ್ಟಿ ಸೇರ್ಪಡೆಗಾಗಿ ಸುಮಾರು 30 ವರ್ಷಗಳಿಂದ ವಿವಿಧ ಮುಖಂಡರು, ರಾಜಕೀಯ ನಾಯಕರು ಹೋರಾಟ ಮಾಡುತ್ತಲೇ ಬಂದಿದ್ದಾರೆ ಆದರೆ ನಮ್ಮ ಸಮಾಜ ಇನ್ನೂವರೆಗೂ ಎಸ್ಟಿಗೆ ಸೇರಲೇ ಇಲ್ಲ ಈ ಸಮಾಜ ಎಸ್ಟಿಗೆ ಸೇರಬೇಕಾದರೆ ನಾವು ಹೋರಾಟ ಮಾಡಲೇಬೇಕು ಹೀಗಾಗಿ ಸಮಾವೇಶದ ಮೂಲಕ ನಮ್ಮ ಶಕ್ತಿ ಪ್ರದರ್ಶನ ಮಾಡಿದರೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ನಮ್ಮ ಸಮಾಜ ಎಸ್ಟಿ ಪಟ್ಟಿಗೆ ಸೇರಿಸಲು ಯಾವುದೇ ಅನುಮಾನವಿಲ್ಲ ಹೀಗಾಗಿ 25ರಂದು ನಡೆಯುವ ಸಮಾವೇಶವನ್ನು ಅದ್ದೂರಿಯಾಗಿ ನಡೆಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

Contact Your\'s Advertisement; 9902492681

25ರಂದು ನಡೆಯುವ ಸಮಾವೇಶ ತಿಪ್ಪಣ್ಣಪ್ಪ ಕಮಕನೂರ ಅವರ ಮನೆಯ ಸಮಾವೇಶ ಅಲ್ಲ ಅದು ಸಮಾಜದ ಸಮಾವೇಶ ಆಗಿರುವುದರಿಂದ ಎಲ್ಲರೂ ಭಿನ್ನಾಪ್ರಾಯ ಬದಿಗಿಟ್ಟು ಒಗ್ಗಟ್ಟು ಪ್ರದರ್ಶಿಸಿ ಸಮಾವೇಶ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡರು.

ಕೋಲಿ, ಗಂಗಾಮತ ಸಮಾಜಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಕೆ. ಮೋಹನ್ ಕುಮಾರ್ ಮಾತನಾಡಿ, ನಮ್ಮ ಸಮಾಜ ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತಿದ್ದು 19 ರಾಜ್ಯಗಳಲ್ಲಿ ನಮ್ಮ ಸಮಾಜ ಎಸ್ಟಿಗೆ ಸೇರ್ಪಡೆಯಾದರೆ ಆರು ರಾಜ್ಯಗಳಲ್ಲಿ ಎಸ್ಸಿಗೆ ಸೇರ್ಪಡೆಯಾಗಿದೆ. ಕಾರಣ ಅಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿರುವುದರಿಂದ ಅದು ಸಾಧ್ಯವಾಗಿದ್ದು, ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ನಮ್ಮ ಸಮಾಜದ ಎಲ್ಲಾ ಮುಖಂಡರು ಎಲ್ಲಾ ಭಿನ್ನಾಪ್ರಾಯವನ್ನು ಬಿಟ್ಟು ಒಂದಾಗಿ ಸಮಾವೇಶವನ್ನು ಸಂಘಟಿಸಿದಾಗ ಮಾತ್ರ ಸಮಾಜ ಎಸ್ಟಿಗೆ ಸೇರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ನಮ್ಮ ರಾಜ್ಯದಲ್ಲಿ ಟಿಪ್ಪಣ್ಣಪ್ಪ ಕಮಕನೂರ ಅವರನ್ನು ಹೊರತುಪಡಿಸಿ ಒಬ್ಬ ಶಾಸಕರು ಇಲ್ಲ. ನಮ್ಮ ಸಮಾಜದ ಮತಗಳಿಂದಲೇ ರಾಜ್ಯದಲ್ಲಿ 40 ಎಮ್ಎಲ್ಎ ಗಳು 3 ಎಂಪಿಗಳು ಆಗಿದ್ದಾರೆ. ಈ ಸಮಾಜದ ಋಣ ತೀರಿಸಬೇಕಾಗಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೂಡಲೇ ನಮ್ಮ ಸಮಾಜವನ್ನು ಎಸ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

25ರಂದು ನಡೆಯುವ ನಮ್ಮ ಸಮಾಜದ ಸಮಾವೇಶದ ಜನ ಸಾಗರವನ್ನು ನೋಡಿ ರಾಜ್ಯ ಸರ್ಕಾರ ತಕ್ಷಣವೇ ಎಸ್ ಟಿ ಪ್ರಸ್ತಾವನೆಯನ್ನು ಕೇಂದ್ರಕ್ಕೆ ರವಾನೆ ಮಾಡಬೇಕು ಮತ್ತು ಕೇಂದ್ರ ಸರ್ಕಾರ ಈ ಸಮಾವೇಶದ ಶಕ್ತಿ ಪ್ರದರ್ಶನ ಗಮನಿಸಿ ಎಸ್ಟಿ ಪ್ರಸ್ತಾವನೆಗೆ ಅನುಮೋದನೆ ನೀಡುವ ನಿಟ್ಟಿನಲ್ಲಿ ನಾವೆಲ್ಲರೂ ನಮ್ಮಲ್ಲಿರುವ ಭಿನ್ನಾಭಿಪ್ರಾಯ, ವೈ ಮನಸ್ಸು ಬಿಟ್ಟು ಎಲ್ಲರೂ ಒಗ್ಗೂಡಿ ಸಮಾವೇಶ ಯಶಸ್ವಿಗೆ ಸಹಕರಿಸಬೇಕೆಂದು ಸಲಹೆ ನೀಡಿದರು.

ರಾಷ್ಟ್ರೀಯ ಕೋಲಿ ಸಮಾಜದ ರಾಜ್ಯಾಧ್ಯಕ್ಷ ತಿಪ್ಪಣ್ಣ ರೆಡ್ಡಿ ಮಾತನಾಡಿ, ರಾಜ್ಯದಲ್ಲಿ ನಮ್ಮ ಸಮಾಜ ಅಧಿಕ್ಕೆ ಸಂಖ್ಯೆ ಇದ್ದು ಈ ಸಮಾಜವನ್ನು ಎಸ್ಟಿಗೆ ಸೇರಿಸಲು ನಿರಂತರವಾಗಿ ಹೋರಾಟ ನಡೆಯುತ್ತಿವೆ. ಈ ಸಮಾಜ ಎಸ್ಟಿಗೆ ಸೇರಿಸುವ ಕಾಲ ಸನ್ನಿಹಿತವಾಗಿದೆ. ಇದೀಗ ನಾವು ಸಮಾವೇಶವನ್ನು ಸಂಘಟಿಸಿ ಎಸ್ಟಿಗೆ ಸೇರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ. ರಾಜ್ಯ ಸರ್ಕಾರದ ಪ್ರತಿನಿಧಿಯಾಗಿರುವ ಎಂಎಲ್ಸಿ ತಿಪ್ಪಣ್ಣಪ್ಪ ಸಮಾಜವನ್ನು ಎಸ್ಟಿಗೆ ಸೇರಿಸಲು ಈ ಸಮಾವೇಶ ಸಂಘಟಿಸುತ್ತಿದ್ದು, ಈ ಸಮಾಜಕ್ಕೆ ಎಲ್ಲರೂ ಬೆಂಬಲ ಸೂಚಿಸಿ ಸಮಾವೇಶ ಯಶಸ್ವಿಗೆ ಸಹಕರಿಸಬೇಕು ಮತ್ತು ರಾಜ್ಯದ ವಿವಿಧ ಜಿಲ್ಲೆಯ, ತಾಲೂಕು, ಹಳ್ಳಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುವಂತೆ ಎಲ್ಲ ತಾಲೂಕು ಪದಾಧಿಕಾರಿಗಳು ವಾಹನಗಳ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.

ಶ್ರೀ ವರಲಿಂಗೇಶ್ವರ ಸ್ವಾಮೀಜಿ ಮಾತನಾಡಿ, 25ರಂದು ನಡೆಯುವ ಸಮಾವೇಶದಲ್ಲಿ ನಮ್ಮ ಸಮಾಜದವರು ಸರ್ಕಾರ ಮುಂದೆ ಶಕ್ತಿ ಪ್ರದರ್ಶನ ಮಾಡಬೇಕು ನಮ್ಮ ಒಗ್ಗಟ್ಟು ನೋಡಿ ಮುಂದಿನ ಚುನಾವಣೆಯಲ್ಲಿ ನಮ್ಮ ಸಮಾಜದ ಹತ್ತು ಜನರಿಗೆ ಎಂಎಲ್ಎ, ಆರು ಜನರಿಗೆ ಎಂಎಲ್ಸಿ ಮತ್ತು ಐದು ಜನರಿಗೆ ಎಂಪಿ ಮಾಡಬೇಕು ಎಂದು ಆಶಯ ವ್ಯಕ್ತ ಪಡಿಸಿದರು.

ಸಮಾಜದ ಮುಖಂಡರಾದ ಸಾಯಿಬಣ್ಣ ಬೋರ್ ಬಂಡಾ, ಶರಣಪ್ಪ ನಾಟಿಕರ್, ಗುಂಡು ಐನಾಪುರ್, ಬಸವರಾಜ್ ಹರವಾಳ, ರಮೇಶ್ ನಾಟಿಕರ್ ಅವ್ವಣ್ಣಗೌಡ ಪಾಟೀಲ್, ಶ್ರೀಕಾಂತ್ ಅಲೂರ ಸೇರಿದಂತೆ ವಿವಿಧ ತಾಲೂಕುಗಳ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ 25 ರಂದು ನಡೆಯುವ ಸಮಾವೇಶ ಯಶಸ್ವಿಗೆ ನಾವೆಲ್ಲರೂ ಸಹಕರಿಸುವುದಾಗಿ ಮತ್ತು ಅಂದು ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುವಂತೆ ವ್ಯವಸ್ಥೆ ಮಾಡುವುದಾಗಿ ಒಕ್ಕೂಲಿನಿಂದ ಭರವಸೆ ನೀಡಿದರು.

ಪೂರ್ವಭಾವಿ ಸಭೆಯಲ್ಲಿ ಎಲ್ಲಾ ಮುಖಂಡರ ಅನಿಸಿಕೆ ಆಲಿಸಿದ ಬಳಿಕ ಅಧ್ಯಕ್ಷತೆ ವಹಿಸಿರುವ ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಅವರು ಮಾತನಾಡಿ, 25ರಂದು ನಡೆಯುವ ಸಮಾವೇಶ ಅದ್ದೂರಿಯಾಗಿ ನಡೆಯಬೇಕು, ಸಮಾವೇಶದ ಆಹ್ವಾನ ಪತ್ರಿಕೆಯಲ್ಲಿ ಯಾವ ನಾಯಕರ, ಯಾವ ಮುಖಂಡರ ಹೆಸರು ಸೇರ್ಪಡೆ ಮಾಡಬೇಕೆಂಬುದರ ಕುರಿತು ಸಮಾಜದ ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಗುವುದು, ಸಮಾಜವನ್ನು ಎಸ್ ಟಿಗೆ ಸೇರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವುದು.

ಮೀನುಗಾರಿಕೆಯಲ್ಲಿ ಸಮಾಜದ ಜನರಿಗೆ ಶೇಕಡ 90 ಮೀಸಲಿಡುವುದು, ಬೆಂಗಳೂರಿನ ವಿಧಾನಸೌಧದ ಎದುರು ನಿಜಶರಣ ಅಂಬಿಗರ ಚೌಡಯ್ಯರ ಮೂರ್ತಿ ಪ್ರತಿಷ್ಠಾಪನೆ ಮಾಡಲು ಕಾಲಮಿತಿ ಇಡುವುದು, ನಿಜಶರಣ ಅಂಬಿಗರ ಪೀಠಕ್ಕೆ 500 ಕೋಟಿ ಮೀಸಲಿಡಬೇಕು. ಯಾನಗುಂದಿ ದೇವಸ್ಥಾನ ಅಭಿವೃದ್ಧಿಗೆ ಕೆಕೆಆರ್ಡಿಬಿಯಿಂದ 5 ಕೋಟಿ ಮೀಸಲಿಡಬೇಕು, ನಮ್ಮ ಸಮಾಜದ ಗುರುಗಳಾದ ವರಲಿಂಗೇಶ್ವರ ಸ್ವಾಮೀಜಿ ಹೆಸರಿನಲ್ಲಿ ಕಲ್ಬುರ್ಗಿಯಲ್ಲಿ 10 ಕರೆ ಭೂಮಿ ಸರ್ಕಾರ ಖರೀದಿಸಿ 5 ಕೋಟಿ ಮೀಸಲಿಡಬೇಕು, 25ರಂದು ನಡೆಯುವ ಸಮಾವೇಶ ಏಕ ಪಕ್ಷೀಯವಲ್ಲ ಸಮಾಜದ ಎಲ್ಲ ಮುಖಂಡರ ನಿರ್ಧಾರವಾಗಿದೆ ಎಂದು ನಿರ್ಣಯಗಳನ್ನು ಮಂಡಿಸಿದಾಗ ಎಲ್ಲಾ ಮುಖಂಡರು ಚಪ್ಪಾಳೆ ಬಾರಿಸುವ ಮೂಲಕ ಸಮ್ಮತಿ ಸೂಚಿಸಿದರು.

ಸಭೆಯಲ್ಲಿ ಶಾಂತಪ್ಪ ಬಿ ಪಾಟೀಲ್, ಸುನಿಲ್ ಬಾವಿಕಟ್ಟಿ, ಅಂಬು ಡಿಗ್ಗಿ, ವಿಜಯ್ ಕುಮಾರ್ ಹದಗಲ್, ಪ್ರಕಾಶ್ ಕಮಕನೂರ್, ಸಂದೇಶ ಕಮಕನೂರ, ಸುರೇಶ ಕಮಕನೂರ, ಸಂತೋಷ್ ಬೆಣ್ಣೂರ, ರವಿರಾಜ್ ಕೊರವಿ, ಜಯಶ್ರೀ ಕಟ್ಟಿಮನಿ, ಲಕ್ಷ್ಮಣ್ ಅವಂಟಿ, ಕಾಶಪ್ಪ, ಸಾಯಿಬಣ್ಣ ಇಟಗಿ, ಸಿದ್ದು ಬಾನರ್, ಸೋಮಶೇಖರ್ ಬಿಬ್ಬಳ್ಳಿ, ಭೀಮರಾಯ ಅಳ್ಳೊಳ್ಳಿ, ಮಲ್ಲಿಕಾರ್ಜುನ್ ಮೆಕಾನಿಕ್, ಅಜಯ್ ಉಡುಗಿ, ಅಶೋಕ್ ದಂಡೋತಿ, ಹನುಮಂತ್ ಮಳಖೇಡ, ಸಂಗಣ್ಣ ಇಟಗಾ, ಪ್ರಕಾಶ್ ಜಮಾದಾರ್, ಬಾಬುರಾವ ಜಮಾದಾರ, ಮಹಾಂತೇಶ ಬೋಧನ, ಶರಣಪ್ಪ ನಾಟಿಕರ್ ಸೇರಿದಂತೆ ವಿವಿಧ ಜಿಲ್ಲೆಗಳ ತಾಲೂಕುಗಳ ಮುಖಂಡರು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here