ರಸ್ತೆ ನಿರ್ಮಾಣ ಮಾಡದಿದ್ದರೇ ಲೋಕಸಭಾ ಚುನಾವಣೆ ಬಹಿಷ್ಕಾರಕ್ಕೆ ಎಚ್ಚರಿಕೆ

0
33

ಶಹಾಬಾದ: ನಗರದ ಮುಖ್ಯ ರಸ್ತೆ ಮತ್ತು ಜೇವರ್ಗಿ ರಸ್ತೆ ಹಾಳಾಗಿ ಹೋಗಿದ್ದು, ಇದರಿಂದ ಸಾರ್ವಜನಿಕರು ನರಕಯಾತನೆ ಅನುಭವಿಸುತ್ತಿದ್ದಾರೆ.ಚುನಾಯಿತ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಸುಳ್ಳು ಆಶ್ವಾಸನೆ ನೀಡಿ ಜನರಿಗೆ ಯಾಮಾರಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ.

ಆದ್ದರಿಂದ ಫೆ.19 ರಂದು ನಗರದ ಬಸವೇಶ್ವರ ವೃತ್ತದಲ್ಲಿ ಪ್ರಗತಿಪರ ಸಂಘಟನೆ ಹಾಗೂ ಪ್ರಗತಿಪರ ಒಕ್ಕೂಟ ಸಮಿತಿಯಿಂದ ಬೃಹತ್ ಹೋರಾಟ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಪ್ರಗತಿಪರ ಹಾಗೂ ಪ್ರಗತಿಪರ ಒಕ್ಕೂಟ ಸಮಿತಿ ಪ್ರಮುಖ ಮುಖಂಡರು ಹಾಗೂ ದಸಂಸ ರಾಜ್ಯ ಸಂಘಟನಾ ಸಂಚಾಲಕರಾದ ಮರಿಯಪ್ಪ ಹಳ್ಳಿ ಹೇಳಿದರು.

Contact Your\'s Advertisement; 9902492681

ಅವರು ಗುರುವಾರ ಪ್ರಗತಿಪರ ಹಾಗೂ ಪ್ರಗತಿಪರ ಒಕ್ಕೂಟ ಸಮಿತಿಯಿಂದ ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಸುಮಾರು ಎರಡು ವರ್ಷಗಳಿಂದ ಮುಖ್ಯ ರಸ್ತೆ ಹಾಳಾಗಿದೆ.ಇದೇ ರಸ್ತೆಯಿಂದ ಶಾಸಕ ಬಸವರಾಜ ಮತ್ತಿಮಡು, ಅಧಿಕಾರಿ ವರ್ಗದವರು ಬಂದು ಹೋಗುತ್ತಾರೆ. ಆದರೂ ಕಿಂಚಿತ್ತೂ ಕಾಳಜಿ ಇವರಿಗಿಲ್ಲ.

ಸಾರ್ವಜನಿಕರ ಮತ ಪಡೆದ ಜನಪ್ರತಿನಿಧಿ ಜನರಿಗೆ ಮೂಲ ಸೌಲಭ್ಯಗಳಲ್ಲಿ ಒಂದಾದ ರಸ್ತೆಯನ್ನು ನಿರ್ಮಾಣ ಮಾಡಿಕೊಡುವುದು ಆದ್ಯ ಕರ್ತವ್ಯ.ಆದರೆ ಇಲ್ಲಿನ ಜನರು ಧೂಳಿನಿಂದ ಸಂಕಷ್ಟ ಎದುರಿಸುತ್ತಿದ್ದಾರೆ.ಶಾಲಾಮಕ್ಕಳಿಗೆ,ಕೂಲಿ ಕಾರ್ಮಿಕರಿಗೆ, ನೌಕರಸ್ಥರಿಗೆ ಎಲ್ಲಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ.ಅಲ್ಲದೇ ಧೂಳಿನಿಂದ ಅಸ್ತಮಾ ರೋಗಕ್ಕೆ ಆಸ್ಪತ್ರೆಗೆ ಸೇರುವ ಸಾಧ್ಯತೆಗಳು ಹೆಚ್ಚಾಗಿವೆ.

ದಿನದಲ್ಲೇ ದೂಳಿನಿಂದ ರಾತ್ರಿಯ ಅನುಭವವಾಗುತ್ತಿದೆ.ಅಷ್ಟೊಂದ ಧೂಳು ಆವರಿಸಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.ಈ ಸಂಬಂಧ 9ನೇ ಅಕ್ಟೋಬರ್ 2023 ರಂದು ನಗರದ ಎಬಿಎಲ್ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಗುತ್ತದೆ ಎಂದು ತಿಳಿದಾಗ ಸ್ಥಳೀಯ ಶಾಸಕ ಬಸವರಾಜ ಮತ್ತಿಮಡು 8 ಕೋಟಿ ರೂ. ಬಿಡುಗಡೆಯಾಗಿದೆ.8 ದಿನದಲ್ಲಿ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದರು.ಆದರೆ ನಾವು ಅಂದೇ ಬೃಹತ್ ಪ್ರತಿಭಟನೆ ಮಾಡಿದಾಗ ಸೇಡಂ ಪಿಡಬ್ಲೂಡಿ ಎಇಇ ಹಾಗೂ ಕಲಬುರಗಿ ಪಿಡಬ್ಲೂಡಿ ಇಇ ಸ್ಥಳಕ್ಕೆ ಧಾವಿಸಿ ತಿಂಗಳ ಒಳಗಾಗಿ ಕಾಮಗಾರಿ ಪ್ರಾರಂಭ ಮಾಡುತ್ತೆವೆ ಎಂದು ಆಶ್ವಾಸನೆ ನೀಡಿದರು.

ಆದರೆ ಇಂದಿಗೆ ನಾಲ್ಕು ತಿಂಗಳಾದರೂ ಯಾವುದೇ ಕಾಮಗಾರಿ ಕೈಗೊಂಡಿಲ್ಲ.ಸದ್ಯ ಕೇಳಿದಾಗಲೂ ಟೆಂಡರ್ ಆಗುತ್ತದೆ ಮತ್ತು ಪ್ರಗತಿಯಲ್ಲಿದೆ ಎಂದು ಉತ್ತರ ಕೊಡುತ್ತಿದ್ದಾರೆ. ಟೆಂಡರ್ ಆದ ತಕ್ಷಣವೇ ರಸ್ತೆ ನಿರ್ಮಾಣ ಮಾಡಲಾಗುವುದೆಂದು ಹೇಳುತ್ತಾರೆ.ನಿರಂತರವಾಗಿ ಸುಳ್ಳು ಹೇಳುವ ಶಾಸಕ ಹಾಗೂ ಅಧಿಕಾರಿಗಳು ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ.ಇತ್ತ ಜಿಲ್ಲಾ ಉಸ್ತುವಾರಿ ಸಚಿವರೂ ಗಮನಹರಿಸಬೇಕು.

ತೊನಸನಹಳ್ಳಿ(ಎಸ್) ಗ್ರಾಮದಿಂದ ದಾದಿಪೀರ ದರ್ಗಾವರೆಗೆ ಡಾಂಬರೀಕರಣ ನಡೆಯುತ್ತಿದೆ.ಆದರೆ ಅಲ್ಲಿಂದ ಕನಕದಾಸ ವೃತ್ತ, ಬಸವೇಶ್ವರ ವೃತ್ತದವರೆಗೆ ರಸ್ತೆ ನಿರ್ಮಾಣ ಮಾಡುತ್ತಿಲ್ಲ ಎಂದು ಅಧಿಕಾರಿ ವರ್ಗ ಹೇಳುತ್ತಾರೆ.ಅಲ್ಲದೇ ತೊನಸನಹಳ್ಳಿಯಿಂದ ಫೀರೋಜಾಬಾದ ವೃತ್ತದವರೆಗಿನ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳುತ್ತಿಲ್ಲ. ಆದ್ದರಿಂದ ಈ ಬಾರಿ ಬೃಹತ್ ಪ್ರತಿಭಟನೆ ಕೈಗೊಳ್ಳಾಗುತ್ತಿದೆ. ಅಲ್ಲದೇ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿ ವರ್ಗದವರು ಆಗಮಿಸಿ ರಸ್ತೆ ನಿರ್ಮಾಣ ಮಾಡಿಕೊಡಬೇಕು.

ಇಲ್ಲದಿದ್ದರೇ ಮುಂಬರುವ ಲೋಕಸಭಾ ಚುನಾವಣೆಯನ್ನು ಶಹಾಬಾದ ನಗರದ ಸಾರ್ವಜನಿಕರು ಬಹಿಷ್ಕರಿಸಲಿದ್ದಾರೆ ಎಂದು ಎಚ್ಚರಿಕೆ ನೀಡುತ್ತೆವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶರಣಗೌಡ ಪಾಟೀಲ,ನಾಗಣ್ಣ ರಾಂಪೂರೆ,ಗುಂಡಮ್ಮ ಮಡಿವಾಳ, ಮಲ್ಲೇಶಿ ಭಜಂತ್ರಿ,ಜಗನ್ನಾಥ.ಎಸ್.ಹೆಚ್,ಮಹ್ಮದ್ ಮಸ್ತಾನ,ಮಲ್ಲಣ್ಣ ಮಸ್ಕಿ, ಮಲ್ಕಣ್ಣ ಮುದ್ದಾ, ಮಲ್ಲಿಕಾರ್ಜುನ ಹಳ್ಳಿ ,ಸ್ನೇಹಲ್ ಜಾಯಿ,ನಾಗಪ್ಪ ರಾಯಚೂರಕರ್ ಇತರರು ಇದ್ದರು.

ಸುಳ್ಳು ಆಶ್ವಾಸನೆಗೆ ಬೇಸತ್ತು ಫೆ.19ರಂದು ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ.ಅಂದು ಭರವಸೆ ಈಡೇರದಿದ್ದರೇ ಮುಂಬರುವ ಲೋಕಸಭಾ ಚುನಾವಣೆ ಬಹಿಷ್ರಿಸಲಿದ್ದೆವೆ- ಮರಿಯಪ್ಪ ಹಳ್ಳಿ ರಾಜ್ಯ ಸಂಘಟನಾ ಸಂಚಾಲಕ ದಸಂಸ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here