ವಾಡಿ; ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಪಂಡಿತ ದೀನದಯಾಳ ಉಪಾಧ್ಯಾಯರ 55ನೇ ಪುಣ್ಯ ಸ್ಮರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ ಪಂಡಿತ ದೀನದಯಾಳ ಉಪಾಧ್ಯಾಯರ ಪುಣ್ಯ ಸ್ಮರಣೆ ದಿನವಾದ ಇಂದು ಅವರು ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಪಂಡಿತ ದೀನದಯಾಳ ಉಪಾಧ್ಯಾಯರು ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಭಾರತೀಯ ಜನಸಂಘ ಎಂಬ ರಾಜಕೀಯ ಸಂಘಟನೆಯನ್ನು ಕಟ್ಟಿಬೆಳೆಸಿದವರು. ಅವರು 1968ರ ಫೆಬ್ರವರಿ 11 ರಂದು ನಿಗೂಢ ರೀತಿಯಲ್ಲಿ ನಿಧನ ಹೊಂದಿದರು. ನಂತರ
ಭಾರತೀಯ ಜನಸಂಘವು ಭಾರತೀಯ ಜನತಾ ಪಕ್ಷವಾಗಿ ಮಾರ್ಪಟ್ಟು ಇಂದು ವಿಶ್ವದಲ್ಲೇ ಅತಿ ದೊಡ್ಡ ಪಕ್ಷವಾಗಿ ನಮ್ಮ ಬಿಜೆಪಿ ಕಣ್ಮುಂದಿದೆ.
1951ರಲ್ಲಿ ಡಾ. ಶ್ಯಾಂ ಪ್ರಸಾದ್ ಮುಖರ್ಜಿ ಅವರು ಭಾರತೀಯ ಜನಸಂಘವನ್ನು ಸ್ಥಾಪಿಸಿದಾಗ ದೀನದಯಾಳರು ಆ ಸಂಘಟನೆಯ ಮೊದಲ ಪ್ರಧಾನ ಕಾರ್ಯದರ್ಶಿ ಯಾಗಿದ್ದರು.ಅವರ ಪಕ್ಷ ಸಂಘಟನೆಯ ಶ್ರಮ, ರಾಷ್ಟ್ರಾಭಿವೃದ್ದಿಗಾಗಿನ ದೂರದೃಷ್ಟಿ ನಾವು ಮರೆಯಲಿಕ್ಕೆ ಆಗಲಾರದಂತದ್ದು ಎಂದು ಹೇಳಿದರು.
ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಸಿದ್ದಣ್ಣ ಕಲ್ಲಶೆಟ್ಟಿ, ರಾಮಚಂದ್ರ ರಡ್ಡಿ, ಹರಿ ಗಲಾಂಡೆ,ರಾಜೇಶ್ ಅಗ್ರವಾಲ,ಶಿವಶಂಕರ ಕಾಶೆಟ್ಟಿ,ಜುಗಲ್ ಕಿಶೋರ್ ವರ್ಮಾ,ಅಯ್ಯಣ್ಣ ದಂಡೋತಿ, ಬಸವರಾಜ ಪಗಡಿಕರ, ಅಕ್ಕನಾಗಮ್ಮ ದೊಡ್ಡಮನಿ, ಯಂಕಮ್ಮ ಗೌಡಗಾಂವ, ಅನುಸುಭಾಯಿ ಪವಾರ, ದೆವಕ್ಕಿ ಪುಜಾರಿ,ಶರಣಮ್ಮ ಯಾದಗಿರಿ, ಉಮಾದೇವಿ ಗೌಳಿ,ವಿರೇಶ ಶಿರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.