ಸುರಪುರ:ನಗರಸಭೆಯಲ್ಲಿ ಸಿಬ್ಬಂದಿಗಳು ಜಾರ್ವಜನಿಕರಿಗೆ ಜನನ ಮರಣ ಪ್ರಮಾಣ ಪತ್ರ ಕೊಡಲು ಹೆಚ್ಚು ಹಣ ಪಡೆಯಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಧ್ವನಿ ಸಂಘಟನೆ ಮುಖಂಡರು ನಗರಸಭೆ ಮುಂದೆ ಪ್ರತಿಭಟನೆ ನಡೆಸಿದರು.
ಸಂಘದ ಜಿಲ್ಲಾಧ್ಯಕ್ಷ ಸಂಜೀವಪ್ಪ ದರಬಾರಿ ಈ ಸಂದರ್ಭದಲ್ಲಿ ಮಾತನಾಡಿ,ನಗರಸಭೆಗೆ ಸಾರ್ವಜನಿಕರು ಬಂದು ಜನನ ಮರಣ ಪ್ರಮಾಣ ಪತ್ರ ತೆಗೆದುಕೊಳ್ಳಬೇಕೆಂದರೆ 200 ರಿಂದ 500 ರೂಪಾಯಿ ಕೊಡಬೇಕಾದ ಪರಸ್ಥಿತಿ ನಿರ್ಮಾಣವಾಗಿದೆ,ಇದರಿಂದ ಸಾರ್ವಜನಿಕರ ಸುಲಿಗೆ ಮಾಡಲಾಗುತ್ತಿದೆ,ಆದ್ದರಿಂದ ಅಂತಹ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಂಡು ಅವರನ್ನು ಕೆಲಸದಿಂದ ವಜಾಗೊಳಿಸುವಂತೆ ಆಗ್ರಹಿಸಿದರು.
ನಂತರ ನಗರಸಭೆ ಪೌರಾಯುಕ್ತ ಜೀವನಕುಮಾರ್ ಕಟ್ಟಿಮನಿಗೆ ಮನವಿ ಸಲ್ಲಿಸಿದರು,ಈ ಸಂದರ್ಭದಲ್ಲಿ ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ,ಸಂಘಟನೆ ಜಿಲ್ಲಾ ಗೌರವಾಧ್ಯಕ್ಷ ಚಂದ್ರಕಾಂತ ಲಕ್ಷ್ಮೀಪುರ,ಜಿಲ್ಲಾ ಉಪಾಧ್ಯಕ್ಷ ಕುಮಾರಗೌಡ ಪೊಲೀಸ್ ಪಾಟೀಲ್,ಜಿಲ್ಲಾ ಸಹಕಾರ್ಯದರ್ಶಿ ಹಣಮಂತ್ರಾಯ ಬಿ.ಭಜಂತ್ರಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಸಿಂಸಾಬ ದೊಡ್ಮನಿ,ಜಿಲ್ಲಾ ಖಜಾಂಚಿ ಕಾಸಿಂಸಾಬ ಅಮ್ಮಾಪುರ,ತಾಲೂಕು ಉಪಾಧ್ಯಕ್ಷ ಶಾಂತಪ್ಪ ತಳವಾರಗೇರ,ರಾಘು,ಶರಣಪ್ಪ ಸೇರಿದಂತೆ ಅನೇಕರಿದ್ದರು.