ರೈತ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆ

0
89

ಶಹಾಬಾದ: ಜಾತ್ಯತೀತ ಪ್ರಜಾಪ್ರಭುತ್ವ ಘನತಂತ್ರದ ಸಂವಿಧಾನ ರಕ್ಷಣೆಗಾಗಿ ಆಗ್ರಹಿಸಿ, ರೈತ ಕಾರ್ಮಿಕ ವಿರೋಧಿ ಹಾಗೂ ಕಾರ್ಮಿಕ ಕಾಯ್ದೆಗಳನ್ನು ರದ್ದುಗೊಳಿಸಲು ಒತ್ತಾಯಿಸಿ ಫೆ.16ರಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಸಿಐಟಿಯು ಚಿತ್ತಾಪೂರ ಹಾಗೂ ಶಹಾಬಾದ ತಾಲೂಕ ಸಮಿತಿಯು ತಾಲೂಕ ಕಚೇರಿಗಳ ಎದುರುಗಡೆ ಪ್ರತಿಭಟನೆ ನಡೆಸಲಿದೆ ಎಂದು ಚಿತ್ತಾಪೂರ ಸಿಐಟಿಯು ತಾಲೂಕ ಅಧ್ಯಕ್ಷೆ ಶೇಖಮ್ಮ ಕುರಿ ತಿಳಿಸಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ ಇಳಿಸಲು. ದುಡಿಯುವ ಜನರ ಶೋಷಣೆ ತಪ್ಪಿಸಲು. ಕೊಂಡು ಕೊಳ್ಳುವ ಸಾಮಥ್ರ್ಯ ಹೆಚ್ಚಿಸಲು ಉದ್ಯೋಗ ಸೃಷ್ಟಿಸಲು ಆಗ್ರಹಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ದ್ವೇಷ ಅಳಿಸಿ. ಸೌಹಾರ್ದ ಸಮಾಜಕ್ಕಾಗಿ ಮತ್ತು ಕನಿಷ್ಠ ಬೆಂಬಲ ಕಾಯ್ದೆಗಾಗಿ ಮತ್ತೆ ಎರಡನೇ ಹೋರಾಟ ಪ್ರಾರಂಭಿಸಿರುವ ರೈತರು ಅಪರಾಧಿಗಳ ಎಂಬಂತೆ ಬಿಂಬಿಸಿ ಕೇಂದ್ರ ಸರ್ಕಾರ ತೀವ್ರ ದಾಳಿ ಮಾಡುತ್ತಿರುವುದನ್ನು ಖಂಡಿಸಿ ರೈತ ಕಾರ್ಮಿಕರ ಹೋರಾಟಕ್ಕೆ ಬೆಂಬಲಿಸಿ ದೇಶಾದ್ಯಂತ ತಾಲೂಕ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ರೈತ ಕೂಲಿಕಾರರ ಕಾರ್ಮಿಕರ ಪ್ರತಿಭಟನೆ ಭಾಗವಾಗಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಸಿಐಟಿಯು ಪ್ರತಿಭಟನೆ ನಡೆಸಲಿದೆ. ಜನ ವಿರೋಧಿ ರೈತ ಕಾರ್ಮಿಕ ವಿರೋಧಿ ಕೇಂದ್ರ ಬಜೆಟ್ ವಿರೋಧಿಸಿ.

Contact Your\'s Advertisement; 9902492681

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ರೈತ ಕಾರ್ಮಿಕ ವಿರೋಧಿ ನೀತಿಗಳ ಐತಿಹಾಸಿಕ ದೆಹಲಿ ರೈತ ಹೋರಾಟದ ಲಿಖಿತ ಭರವಸೆಗಳ ಈಡೇರಿಕೆಗೆ ಆಗ್ರಹಿಸಿ ಆಹಾರ,ಉದ್ಯೋಗ, ಭೂಮಿ ಹಕ್ಕು ಖಾತ್ರಿಗೆ ಆಗ್ರಹಿಸಿ ಸ್ವಾತಂತ್ರ್ಯ ಪ್ರಜಾಪ್ರಭುತ್ವ ಸಾಮಾಜಿಕ ನ್ಯಾಯ ಮತ್ತು ಒಕ್ಕೂಟ ರಚನೆ ಮುಂತಾದವುಗಳ ಮೇಲೆ ಆಕ್ರಮಣ ವಿರೋಧಿಸಿ, ನಿರಪೇಕ್ಷೆ ಹಾಗೂ ಜಾತ್ಯತೀತ ಪ್ರಜಾಪ್ರಭುತ್ವ ಘನತಂತ್ರದ ಸಂವಿಧಾನ ರಕ್ಷಣೆಗಾಗಿ ಆಗ್ರಹಿಸಿ ಪ್ರತಿಭಟನೆ ಕೈಗೊಡಿದ್ದು, ರೈತರು, ಕೂಲಿಕಾರರು , ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಹೋರಾಟ ಯಶಸ್ವಿಗೊಳಿಸಲು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here