ವಾಡಿ; ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಶ್ರೀ ಸವಿತಾ ಮಹರ್ಷಿ ಜಯಂತಿ ಆಚರಿಸಲಾಯಿತು.
ಈ ವೇಳೆ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರಿಗೆ ಆಶ್ರಯ ನೀಡಿದ ದೊರೆ ಸವಿತಾ ಸಮಾಜದ ಬಿಜ್ಜಳ ದೊರೆ ಎಂಬುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಅಪಾರ ಜ್ಞಾನಭಂಡಾರವನ್ನು ಹೊಂದಿದ ಸವಿತಾ ಮಹರ್ಷಿಗಳು ನಾಲ್ಕನೇ ವೇದವಾದ ಸಾಮವೇಧ ಕೃತಿಯನ್ನು ರಚಿಸಿದ್ದಾರೆ.ಇವರ ಮಗಳಾದ ಗಾಯತ್ರಿದೇವಿಯು ಶ್ರೇಷ್ಠಮಂತ್ರವಾದ ಗಾಯತ್ರಿ ಮಂತ್ರವನ್ನು ರಚಿಸಿದ್ದಾರೆ ಎಂಬುದು ನಾವು ಇತಿಹಾಸದಿಂದ ಅರಿತಿದ್ದೇವೆ,
ಅತ್ಯಂತ ಶ್ರೀಮಂತ ಪರಂಪರೆ ಇರುವ ಸವಿತಾ ಸಮಾಜ ಎಲ್ಲರೊಂದಿಗೆ ಒಗ್ಗಟ್ಟಾಗಿ ರಾಷ್ಟ್ರಾಭಿವೃದ್ದಿಗೆ ಶ್ರಮಿಸಿರುವುದು ಕಂಡುಬರುತ್ತದೆ ಎಂದರು.
ಮಹಾನ್ ವ್ಯಕ್ತಿಗಳ ತತ್ವ-ಸಂದೇಶಗಳು ಸರ್ವಕಾಲಿಕವಾಗಿದ್ದು ನಾವು ಜೀವನದಲ್ಲಿ ನಾವು ಅಳವಡಿಸಿಕೊಂಡಾಗ,
ಉತ್ತಮ ಸಮಾಜ ನಿರ್ಮಾಣದೊಂದಿಗೆ ಸದೃಢ ಭಾರತ ಹೊರಹೊಮ್ಮಲು ಸಾಧ್ಯವಿದೆ. ಪ್ರತಿಯೊಂದು ಸಮಾಜವು ಶಿಕ್ಷ ಣಕ್ಕೆ ಒತ್ತು ನೀಡಬೇಕು. ಶಿಕ್ಷ ಣದಿಂದ ಸ್ವಾವಲಂಬಿಸಿ ಬದುಕಿನೊಂದಿಗೆ ಆರ್ಥಿಕವಾಗಿ ಸದೃಢವಾಗಲು ಸಾಧ್ಯವಿದೆ. ಕುಲ ಕಸುಬುಗಳು ಅವರವರ ಬದುಕಿಗೆ ಹೊರತು ಜಾತಿ ವ್ಯವಸ್ಥೆಯ ಹೆಸರಿನಲ್ಲಿ ಶೋಷಣೆ ಮಾಡುವುದಲ್ಲ. ಪ್ರತಿಯೊಬ್ಬರು ತಾವು ಮಾಡುವ ಕಸುಬಿನ ಮೇಲೆ ಗೌರವ, ನಿಷ್ಠೆ ಇಟ್ಟುಕೊಂಡಾಗ ಬದುಕಿನಲ್ಲಿ ಉತ್ತುಂಗಕ್ಕೇರಲು ಸಾಧ್ಯವಿದೆ. ಎಲ್ಲಕ್ಕಿಂತ ಮಿಗಿಲಾಗಿ ನಾವೆಲ್ಲರೂ ಪರಸ್ವರ ವಿಶ್ವಾಸ, ಗೌರವದೊಂದಿಗೆ ಧರ್ಮಾಭಿಮಾನ ಮೆರೆಯಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಪುರಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಭೀಮಶಾ ಜಿರೋಳ್ಳಿ, ಮುಖಂಡರಾದ ಸಿದ್ದಣ್ಣ ಕಲ್ಲಶೆಟ್ಟಿ, ರಾಮಚಂದ್ರ ರಡ್ಡಿ, ಶರಣಗೌಡ ಚಾಮನೂರ, ಶಿವಶಂಕರ ಕಾಶೆಟ್ಟಿ, ಸ್ಯಾಮಸನ್ ರಡ್ಡಿ, ಅಯ್ಯಣ್ಣ ದಂಡೋತಿ, ರಿಚರ್ಡ್ ಮಾರೆಡ್ಡಿ, ದತ್ತಾ ಖೈರೆ, ಅರ್ಜುನ ದಹಿಹಂಡೆ, ಮಲ್ಲಿಕಾರ್ಜುನ ಸಾತಖೇಡ, ಚನ್ನಯ್ಯ ಸ್ವಾಮಿ,ಆನಂದ ಇಂಗಳಗಿ,ಸವಿತಾ ಸಮಾಜದ ತಾಲ್ಲೂಕು ಅಧ್ಯಕ್ಷ ರಾಜು ಶಿವಪುರ, ಬಸವರಾಜ ಪಗಡಿಕರ,ಮಹಾಂತೇಶ್ ಚೌವಣಿಕರ್,ರಾಘವೇಂದ್ರ ಪಗಡಿಕರ, ಬಾಬು ಅರಕೇರಿ, ಶ್ರೀನಿವಾಸ ಪಗಡಿಕರ, ನಾಗರಾಜ ಚೌವಣಿಕರ್, ಬಾಲರಾಜ ಪಗಡಿಕರ, ರಾಘವೇಂದ್ರ ಶಿವಪುರ, ವೆಂಕಟೇಶ ಶಹಾಪುರ,ತಿರುಪತಿ ಬಿಳಾರ,ವೆಂಕಟೇಶ ನಸಲವಾಹಿ, ಕಲ್ಲಪ್ಪ ಅರಕೇರಿ, ಹಣಮಂತ ಶಿವಪುರ,ಅಂಬ್ರೇಷ್ ಹಡಪದ, ಸುರೇಶ ಕಡದಾಳ,ಬಾಬು ಅರ್ಜನಿಗಿ,ರವಿಚಂದ್ರ ಹಳಕಟ್ಟಿ, ಶಿವಕುಮಾರ ಅರಕೇರಿ, ವೆಂಕಟೇಶ ಬಿಳವಾರ ಸೇರಿದಂತೆ ಇತರರು ಇದ್ದರು.